ಹಾಸನ: ಕಲೆ ಮನುಷ್ಯನ ಭಾವನಾತ್ಮಕ ಲಹರಿಯ ಕೊಡುಗೆಯಾಗಿದೆ. ಮನುಷ್ಯ ಮತ್ತು ಪ್ರಕೃತಿಯ ಅವಿನಾಭಾವ ಸಂಬಂಧವನ್ನು ಕಲೆ ಮತ್ತಷ್ಟು ದೃಢಪಡಿಸುತ್ತದೆ. ಕಲಾವಿದನು ಮೂಲತ: ಸೌಂದರ್ಯ ಆರಾಧಕ ಸೌಂದರ್ಯವನ್ನು ಪ್ರೀತಿಸುವವನು.‘ಪ್ರಕೃತಿ ಸೌಂದರ್ಯಮಯ-ಕಲೆ ಆನಂದಮಯ’ಅನ್ನುವಂತೆ ಕಲಾವಿದನು ತನ್ನೊಳಗಿನ ವಿಚಾರ ಅಭಿಪ್ರಾಯಗಳನ್ನು ತನ್ನ ಕಲಾಕೃತಿಯ ಮೂಲಕ ಅಭಿವ್ಯಕ್ತಿಸುತ್ತಾನೆ. ಕಾಲಿಂಗ್‍ವುಡ್‍ನ ಪ್ರಕಾರ ಕಲೆಯು ವೈಯುಕ್ತಿಕ ವಸ್ತುವಲ್ಲ ವ್ಯಕ್ತಿ ಹಾಗೂ ಸಮಾಜದ ಚೈತನ್ಯದ ಮಹತ್ವ ಪೂರ್ಣಕ್ರಿಯೆಯಾಗಿದೆ. ಕಲೆಯನ್ನು ಆಸ್ವಾದಿಸುವುದು ಈ ಸಮಾಜವೆ. ಕಲಾವಿದ ಈ ಸಮಾಜದ ಪ್ರತಿನಿಧಿಯಾಗಿಕಲೆಯನ್ನು ಸೃಷ್ಟಿಸುತ್ತಾನೆ.
ವಿಶ್ವದ ಕಲಾ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಹಾಸನ ಜಿಲ್ಲೆಯ ಸಮಕಾಲೀನ ಕಲಾಕ್ಷೇತ್ರದಲ್ಲಿಯೂ ಹೆಸರುವಾಸಿಯಾಗಿದೆ. ಈ ದಿಶೆಯಲ್ಲಿ ಚಿತ್ರಕಲಾವಿದ ವಸಂತಕುಮಾರ್ ಪ್ರಕೃತಿ ಪ್ರಿಯರು. ಕಾಡು ಬೆಳೆಸಿ ಭೂಮಿ ಉಳಿಸಿ ಶೀರ್ಷಿಕೆಯಡಿ ಇವರಏಕವ್ಯಕ್ತಿ ಪ್ರಕೃತಿ ಚಿತ್ರಗಳ ಕಲಾ ಪ್ರದರ್ಶನ ಹಾಸನಾಂಬ ಕಲಾಕ್ಷೇತ್ರದ ಹೊರಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಿತು. ವಸಂತಕುಮಾರ್ ಇತ್ತೀಚಿಗೆ ರಚಿಸಿದ ತಮ್ಮ 10 ಹೊಸ ಲ್ಯಾಂಡ್‍ಸ್ಕೇಪ್ ಆರ್ಟ್ ವರ್ಕ್ ಜೊತೆಗೆ ಕಳೆದ ವರ್ಷ ಚಿತ್ರಿಸಿ ಪ್ರದರ್ಶಿಸಿದ್ದ ಹಾಸನ ಹೃದಯಭಾಗದಲ್ಲಿರುವ ಮಹಾರಾಜ ಪಾರ್ಕ್ ಒಳಾಂಗಣ ಪರಿಸರದ ಪೇಂಟಿಂಗ್ಸ್ ಹಾಗೂ ಅವರ ಈ ಹಿಂದಿನ ಪೇಂಟಿಂಗ್‍ಗಳು ಸೇರಿಒಟ್ಟು 30 ಕಲಾಕೃತಿಗಳು ಪ್ರದರ್ಶನದಲ್ಲಿದ್ದವು.
ತಮ್ಮ ಲ್ಯಾಂಡ್‍ಸ್ಕೇಪ್‍ಕುರಿತಾಗಿ ವಸಂತಕುಮಾರ್ ಹೇಳಿದ್ದು ಹ್ಯಾಂಡ್‍ಮೇಡ್ ಶೀಟ್‍ನಲ್ಲಿ ಹಾಸನ ತಟ್ಟೆಕೆರೆರಸ್ತೆ, ಮಂಗಳೂರಿನ ಯಕ್ಷಗಾನ ನೃತ್ಯಪಟ್ಟು ಮೊದಲಾಗಿ ಅಕ್ರಾಲಿಕ್ ಕ್ಯಾನ್‍ವಾಸ್‍ನಲ್ಲಿ ಚಿತ್ರಿಸಿದ್ದೇನೆ. ಹಳ್ಳಿಗಾಡಿನ ಈ ಪೇಂಟಿಂಗ್ ಸಂಜೆ ಸಮಯ ಕಸ ಗುಡಿಸುವಾಗಿನ ದೃಶ್ಯ, ಶರಾವತಿ ಹಿನ್ನೀರಿನ ಲೋಕೇಶನ್ ಅಲ್ಲಿಗೆ ಹೋದಾಗ ಚಿತ್ರಿಸಿದ್ದು ಸಿಂಗೇನಹಳ್ಳಿ ಗಡಿ ಜಮೀನಿನ ಚಿತ್ರಣ ಜಲವರ್ಣದ್ದು, ಅಕ್ರಾಲಿಕ್ ಆನ್‍ಕ್ಯಾನವಾಸ್‍ನಲ್ಲಿ ಕೆಲವೊಂದು ಕ್ರಿಯೆಟಿವೀಟಿ ಪೇಂಟಿಂಗ್‍ಗಳಿವೆ, ಇದೊಂದು ಎಸ್ಟೇಟಿನ ಲೋಕೇಶನ್ ಬೆಳಗಿನ ಹೊತ್ತು ಜಲವರ್ಣದಲ್ಲಿ ಚಿತ್ರಿಸಿದ್ದಾಗಿ ತಿಳಿಸಿದರು.
ಇವರ ಬುಡಕಟ್ಟು ಜನಾಂಗದ ಚಿತ್ರಣಗಳು ಇವರ ವಿಶೇಷ ಅಧ್ಯಯನವನ್ನು ಜನಪದ ಪ್ರೀತಿಯನ್ನು ಸಾಕ್ಷೀಕರಿಸುತ್ತವೆ. ಬುಡಕಟ್ಟು ಜನರ ಸಂಬಂಧವು ಕಾಡಿನೊಂಡಿಗೆ ಬೆಸೆದುಕೊಂಡಿದೆ. ಅವರ ಆಚಾರ ವಿಚಾರಗಳು, ಉಡುಗೆ ತೊಡುಗೆಗಳು ವಸಂತಕುಮಾರ ಕಲಾ ರಚನೆಯಲ್ಲಿ ಸಹಜವಾಗಿ ಮೈ ತೆಳೆದಿವೆ. ಬುಡಕಟ್ಟು ಜನಾಂಗದ ಧಾರ್ಮಿಕ ಪದ್ಧತಿಗಳು, ಅವರ ಬದುಕು, ಸಂತೋಷ ಸಂಭ್ರಮ ಆಚರಣೆಯ ನೃತ್ಯಗಳು ವಸಂತಕುಮಾರ್ ಅವರ ಫೀಲ್ದ್ ವಕ್ರ್ಸ್ ಮೆಚ್ಚುವಂತಿವೆ. ದೇಸೀ ಸಂಸ್ಕøತಿಯ ಗೊರವರ ಡ್ರೆಸ್‍ಡಮುರಗ ಹಿಡಿದು ಕೊಳಲು ಊದುತ್ತಿರುವ ಪೋಟ್ರೈಟ್‍ಕಲೆ ತೈಲವರ್ಣದ್ದು. ಮಹಾರಾಜ ಪಾರ್ಕ್ ಅಭಿವೃದ್ದಿ ಕಾರಣ ಇವರ ಈ ಹಿಂದಿನ ಪೈಂಟಿಂಗ್‍ನ ಕೆಲವು ದೃಶ್ಯಗಳು ಈಗಿಲ್ಲವೆಂದು ಹೇಳಿದರು. ಪಾರ್ಕಿನ ಗಿಡಮರಗಳ ಸೌಂದರ್ಯ ಆರಾಧಿಸಿ ಚಿತ್ರಿಸಿದ ಕಲಾಕೃತಿಗಳು ಪರಿಸರ ಕಾಳಜಿ ತೋರುತ್ತವೆ.
-ಗೊರೂರು ಅನಂತರಾಜು, ಹಾಸನ.
ಮೊ: 9449462879
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ