ಮಂಗಳೂರು: ಎಂಸಿಸಿಯಿಂದ ವೀರ ಯೋಧರಿಗೆ ವಂದನೆ

Upayuktha
0

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ "ನನ್ನ ಮಣ್ಣು ನನ್ನ ದೇಶ" ಅಭಿಯಾನದ ಅಂಗವಾಗಿ ವೀರಯೋಧರಿಗೆ ವಂದನೆ" ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಮಂಗಳಾ ಸಭಾಂಗಣದಲ್ಲಿ ಆ.19ರ ಶನಿವಾರ ಹಮ್ಮಿಕೊಳ್ಳಲಾಗಿತ್ತು.


ಈ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮಟ್ಟಾರು ವಿಠ್ಠಲ ಕಿಣಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಅವರು ಯುವಜನತೆಗೆ ದೇಶಪ್ರೇಮ ಬೆಳೆಸಿಕೊಳ್ಳಲು ಕರೆನೀಡಿದರು.

 

ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರಾದ ದಿ.ಲೆ. ಕರ್ನಲ್ ಎಮ್, ಹರೇಂದ್ರನಾಥ್, ದಿ. ಜಾನ್ ವಿಕ್ಟರ್ ಮೆನೇಜಸ್, ದಿ. ಬಜಾಬ್ ಬೀಡು ಉಗ್ಗಪ್ಪ ಪಯ್ಯಡೆ, ದಿ. ಕೆ. ಮೋನಪ್ಪ ಶೆಟ್ಟಿ, ದಿ. ದಾಮೋದರ ಪ್ರಭು, ದಿ. ಪದ್ಮನಾಭ ರಾವ್ ಅವರ ಕುಟುಂಬಸ್ಥರನ್ನು ಗೌರವಿಸಲಾಯಿತು.


ಇದೇ ವೇಳೆ ಹುತಾತ್ಮ ಯೋಧ ದಿ| ಗಿರೀಶ್ ಅವರ ಕುಟುಂಬಸ್ಥರನ್ನು ಹಾಗೂ ಹುತಾತ್ಮ ಪೊಲೀಸ್ ಸಿಬ್ಬಂದಿಗಳಾದ ಚಂದ್ರಹಾಸ್ ಯು (ಎ.ಎಸ್.ಐ), ಸದಾಶಿವ (ಎ.ಎಸ್.ಐ), ಎ.ಪಿ. ಭಾಸ್ಕರ (ಹೆಡ್ ಕಾನಸ್ಟೇಬಲ್) ಅವರ ಪರವಾಗಿ ಕುಟುಂಬಸ್ಥರನ್ನು ಗೌರವಿಸಲಾಯಿತು.

ಮಂಗಳೂರು ಮೇಯರ್ ಜಯಾನಂದ್ ಅಂಚನ್, ಉಪ ಮಹಾಪೌರರಾದ ಪೂರ್ಣಿಮ, ಆಯುಕ್ತ ಆನಂದ್ ಸಿ.ಎಲ್., ಸಿ.ಐ.ಎಸ್.ಎಫ್, ಡೆಪ್ಯೂಟಿ ಕಮಾಡೆಂಟ್ ಚಿರುತೋಷ ಗೌಡ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.


ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಸ್ವಾಗತಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ನವೀನ್ ಡಿಸೋಜಾ, ಪಾಲಿಕೆಯ ಸದಸ್ಯರು, ಅಧಿಕಾರಿ ವರ್ಗ, ಸಿಬ್ಬಂದಿಗಳು, ಸಿ.ಎಸ್.ಎಫ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ನಿಸರ್ಗ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter    

Post a Comment

0 Comments
Post a Comment (0)
To Top