ಸದ್ಗುರು ಸಂಗೀತ ಪಾಠ ಶಾಲೆಯಿಂದ ನಾದ ನೃತ್ಯ ಸಂಭ್ರಮ

Upayuktha
0

ಮಂಗಳೂರು: ಭಾರತೀಯ ಸನಾತನ ಸಂಸ್ಕೃತಿಯ ಎಲ್ಲಾ ಕಲೆಗಳಲ್ಲೂ ಎಲ್ಲರೂ ರಮಿಸುವ ಕಲೆಯೆಂದರೆ ಸಂಗೀತ ಎಂದು ಸುಬ್ರಹ್ಮಣ್ಯ ಸಭಾ ಸದನ ಕರಂಗಲ್ಪಾಡಿ ಇದರ ಅಧ್ಯಕ್ಷ ಹರ್ಷ ಕುಮಾರ್ ಕೇದಿಗೆ ಅವರು ನುಡಿದರು. ಅವರು ಸುಬ್ರಹ್ಮಣ್ಯ ಸಭಾದಲ್ಲಿ ಸದ್ಗುರು ಸಂಗೀತ ಪಾಠಶಾಲೆ (ರಿ) ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಸಂಗೀತಕ್ಕೆ ವಿಶೇಷವಾದ ಶಕ್ತಿ ಇದೆ, ಕಲಿಯುಗದಲ್ಲಿ ಭಗವಂತನ ಸಾಕ್ಷಾತ್ಕಾರ ಪಡೆಯುವುದಕ್ಕೆ ಯೋಗ, ತಪಸ್ಸು, ಜ್ಞಾನ ಮತ್ತು ಭಕ್ತಿ ಇವೇ ಮೊದಲಾದ ಹಲವು ಮಾರ್ಗಗಳಿದ್ದರೂ ನಾದ ರೂಪನಾಗಿರುವ ಪರಮಾತ್ಮನನ್ನು ನಾದ ರೂಪದಿಂದಲೇ ಒಲಿಸಿಕೊಳ್ಳಲು ಸುಲಭ ಸಾಧನವೇ ಸಂಗೀತ ಎಂದರು.


ಕಲಾಶ್ರೀ ವಿದುಷಿ ಕಮಲ ಭಟ್, ವಿದುಷಿ ವಿನಯ ರಾವ್, ಮೃದಂಗ ವಿದ್ವಾಂಸ ಮನೋಹರ ರಾವ್, ಶರ್ಮಿಳಾ ರಾವ್, ಪೋಷಕರಾದ ವಿಶ್ವೇಶ್ವರ ಭಟ್, ಕೆಎಂಸಿಯ ವೈದ್ಯರಾದ ಡಾ. ದೇವಿ ಪ್ರಸಾದ್, ಸಂಸ್ಕೃತ ಉಪನ್ಯಾಸಕ ವೆಂಕಟ್ರಮಣ ಪೈಕ ಮೊದಲಾದವರು ಉಪಸ್ಥಿತರಿದ್ದರು.


ಶೈಲಜಾ ಶಿವಶಂಕರ್ ಕಾರ್ಯಕ್ರಮ ನಿರೂಪಿಸಿ, ಪಾಠಶಾಲೆಯ ನಿರ್ದೇಶಕ ನಾದಶ್ರಿ ವಿದ್ವಾನ್ ಗಣೇಶ್ ರಾಜ್ ಸ್ವಾಗತಿಸಿ ಪ್ರಸ್ತಾವಿಸಿದರು. ಕೊನೆಯಲ್ಲಿ ಆಹ್ವಾನಿತ ಕಲಾವಿದರುಗಳಿಂದ ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಸಮೂಹ ನೃತ್ಯ, ಭಾವ ಗೀತೆ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಜರುಗಿದವು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top