ಬೆಂಗಳೂರು: ಶ್ರಾವಣ ಮಾಸವ್ನು ಸಂಸ್ಕೃತ ಮಾಸವಾಗಿ ಆಚರಿಸುವ ಉದ್ದೇಶದಿಂದ ಮೈತ್ರೀ ಪ್ರತಿಷ್ಠಾನಮ್ 30 ದಿನಗಳ ಸಂಸ್ಕೃತ ಶ್ರಾವಣ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. 30 ದಿನಗಳು, 30 ಆಕರ್ಷಕ ವಿಷಯಗಳು ಮತ್ತು 30 ವಿಷಯ ತಜ್ಞರನ್ನು ಒಳಗೊಂಡ ಈ ವಿಶಿಷ್ಟ ಅಭಿಯಾನದ ಉದ್ಘಾಟನೆ ಸಮಾರಂಭ ಇಂದು ಸಂಜೆ 6 ಗಂಟೆಗೆ ಕ್ಲಬ್ ಹೌಸ್ ಸಾಮಾಜಿಕ ಧ್ವನಿ ಜಾಲತಾಣದ ಮೂಲಕ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಸಂಸ್ಕೃತ ಭಾರತಿಯ ಅಧ್ಯಕ್ಷರಾದ ಸುಚೇಂದ್ರ ಪ್ರಸಾದ್, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಶಾನಂದ ಮತ್ತು ಖ್ಯಾತ ಬರಹಗಾರ, ವಾಗ್ಮಿ ರೋಹಿತ್ ಚಕ್ರತೀರ್ಥ ಅವರು ಪಾಲ್ಗೊಳ್ಳುತ್ತಿದ್ದಾರೆ.
ಅಸಕ್ತರು ಈ ಕಾರ್ಯಕ್ರಮದ ಲಿಂಕ್ ಪಡೆಯಲು 7483586269 ಸಂಖ್ಯೆಗೆ ವಾಟ್ಸಪ್ ಸಂದೇಶ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ