ಅಡ್ವೈಸರ್ ಸಾಹಿತ್ಯ ಪ್ರಶಸ್ತಿ 2022- ಪ್ರಕಟ

Upayuktha
0

ಮಂಡ್ಯ: ಮಂಡ್ಯದ ಅಡ್ವೈಸರ್ ಪತ್ರಿಕೆಯು ಪ್ರತಿವರ್ಷದಂತೆ 2022ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿ, ಎಂಟು ವಿಭಾಗಗಳಲ್ಲಿ 10 ಪ್ರಶಸ್ತಿಗಳನ್ನು ಕಳೆದ 16 ವರ್ಷದಿಂದ ನೀಡುತ್ತಾ ಬಂದಿದೆ. ಕನ್ನಡ ಸಾಹಿತ್ಯದ ಈ ಕೆಳಗಿನ ಪ್ರಕಾರಗಳಲ್ಲಿ  ನೀಡುವ ಪ್ರಶಸ್ತಿಗಳಿಗೆ ಹಿರಿಯ- ಕಿರಿಯ ಲೇಖಕರುಗಳನ್ನು ಆಯ್ಕೆ ಮಾಡಲಾಗಿದೆ.


ಹಿರಿಯ ಸಾಹಿತಿ ಡಾ. ಪ್ರದೀಪಕುಮಾರ ಹೆಬ್ರಿ ನೇತೃತ್ವದ ತೀರ್ಪುಗಾರರ ಮಂಡಳಿ ಕೃತಿಗಳನ್ನು ಆಯ್ಕೆ ಮಾಡಿದ್ದು, ಎಲ್ಲಾ 10 ಪ್ರಶಸ್ತಿಗಳಿಗೆ ಸಮನಾಗಿ ನಗದು ಮೂರು ಸಾವಿರ ರೂಪಾಯಿಗಳು ಮತ್ತು ಪ್ರಶಸ್ತಿ ಪತ್ರ ಹೊಂದಿರುತ್ತದೆ ಎಂದು ಸಂಪಾದಕರಾದ ಸಿ.ಬಸವರಾಜುರವರು ತಿಳಿಸಿರುತ್ತಾರೆ.



ಕವನ ಸಂಕಲನ ವಿಭಾಗದಲ್ಲಿ 1. ಡಾ.ಎಂ.ಎ.ಪದ್ಮನಾಭ ಹೆಬ್ರಿ ಸ್ಮರಣಾರ್ಥ ಪ್ರಶಸ್ತಿ – ರೇವಣ್ಣಸಿದ್ದಪ್ಪ ಜಿ.ಆರ್ ರವರ ‘ಬಾಳನೌಕೆಗೆ ಬೆಳಕಿನ ದೀಪ’ 2. ಜಾನಪದ ತಜ್ಞ ದಿ.ಪ್ರೊ.ಡಿ.ಲಿಂಗಯ್ಯರವರ ಸ್ಮರಣಾರ್ಥ ಪ್ರಶಸ್ತಿ – ಆಶಾ ಜಗದೀಶ್‍ರವರ ‘ನಡು ಮಧ್ಯಾಹ್ನದ ಕಣ್ಣು’

ಕಥಾ ಸಂಕಲನ ವಿಭಾಗದಲ್ಲಿ 3. ವಿಜಯೇಂದ್ರ ಬಂಧುಕಾರ ಸ್ಮರಣಾರ್ಥ ಪ್ರಶಸ್ತಿ – ತೇಜಸ್ವಿನಿ ಹೆಗೆಡೆರವರ ‘ಜೋತಯ್ಯನ ಬಿದಿರು ಬುಟ್ಟಿ ’ 

ಚುಟುಕ ಸಂಕಲನ ವಿಭಾಗದಲ್ಲಿ 4. ಶ್ರೀಮತಿ ವನಜಾಕ್ಷಮ್ಮ ಅಂಗಡಿಹಟ್ಟಿ ಪುಟ್ಟಸ್ವಾಮಪ್ಪರವರ ಸ್ಮರಣಾರ್ಥ ಪ್ರಶಸ್ತಿ - ಶಿಲ್ಪ ಸಂತೋಷ್ ವಡ್ಡರಹಳ್ಳಿ ರವರ ‘ಮೌನಿಯ ಅಂತರಾಳ’

ವಚನ ಸಾಹಿತ್ಯ ವಿಭಾಗದಲ್ಲಿ 5. ಗರಕಹಳ್ಳಿ ಚನ್ನಮಲ್ಲಪ್ಪ ಶಿವಬಸಪ್ಪ ಸ್ಮರಣಾರ್ಥ ಪ್ರಶಸ್ತಿ – ಡಾ.ಎಂ.ಬಿ.ಹೂಗಾರ ರವರ ‘ವಚನ ಸಾಹಿತ್ಯ’

ಮಹಿಳಾ ಸಾಹಿತ್ಯ ವಿಭಾಗದಲ್ಲಿ 6. ಶ್ರೀಮತಿ ಗಿರಿಜಮ್ಮ ಮತ್ತು ಚಂದ್ರಪ್ಪ ಸ್ಮರಣಾರ್ಥ  ಪ್ರಶಸ್ತಿ – ಅಕ್ಷತಾ ಕೃಷ್ಣಮೂರ್ತಿ ರವರ ‘ಇಸ್ಕೂಲು’ 

ಪುಸ್ತಕ ಪ್ರಶಸ್ತಿ ವಿಭಾಗದಲ್ಲಿ 7. ಡಿ.ಸತ್ಯನಾರಾಯಣ ಸ್ಮರಣಾರ್ಥ ಪ್ರಶಸ್ತಿ– ಡಾ.ದಯಾನಂದ ಈ ನೂಲಿ ರವರ ‘ಮರಳುಶಂಕರದೇವರು’

8. ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ) ಪುಸ್ತಕ ಪ್ರಶಸ್ತಿ– ಜಯಂತಿ ಚಂದ್ರಶೇಖರ್ ರವರ ‘ರಾಧಾ ಮಾಧವ’

ಮಕ್ಕಳ ಸಾಹಿತ್ಯ ವಿಭಾಗದಲ್ಲಿ 9. ಶ್ರೀಮತಿ ಚನ್ನಮ್ಮ ಮತ್ತು ಸಿ.ಚಿಕ್ಕಣ್ಣ (ಮೈಸೂರು) ಸ್ಮರಣಾರ್ಥ ಪ್ರಶಸ್ತಿ - ನಿರ್ಮಲ ಸುರತ್ಕಲ್ ರವರ ‘ತ್ರಿವಿಕ್ರಮನಾದ ರೋಹನ’

ಆಧ್ಯಾತ್ಮಿಕ ಸಾಹಿತ್ಯ ವಿಭಾಗದಲ್ಲಿ 10. ಪಿ.ಆರ್.ಸುಬ್ಬರಾವ್ ಸ್ಮರಣಾರ್ಥ ಪ್ರಶಸ್ತಿ (ಸಂಸ್ಕøತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಪ್ರಾಯೋಜಿತ)-  ಡಾ.ಗುರುದೇವಿ ಉ.ಹುಲೆಪ್ಪನವರಮಠ ರವರ ‘ಚಿತ್ಪ್ರಭೆ’ ಕೃತಿಗಳನ್ನು ಆಯ್ಕೆ ಮಾಡಲಾಘಿದೆ ಎಂದು ಪ್ರಕಟಣೆ ತಿಳಿಸಿದೆ.


ವಿವರಗಳಿಗೆ: 78926 88670



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top