ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ರಾಮಾಯಣ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ ದೀಪ ಬೆಳಗಿಸಿ ದಿನದ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು.
ಗುರುವಂದನೆ, ರಾಮತಾರಕ ಮಂತ್ರ ಜಪ, ರಾಮರಕ್ಷಾಸ್ತೋತ್ರ ಪಠಣ, ಭಜನೆ ನಡೆಯಿತು. ನಂತರ ರಾಮಾಯಣಕ್ಕೆ ಸಂಬಂಧಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕುಂಬಳೆ ಸೀಮೆಯ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಪರ್ಯಟನೆಯ ಮೂಲಕ ರಾಮಾಯಣ ಮಾಸಾಚರಣೆಯನ್ನು ಅರ್ಥವತ್ತಾಗಿ ಪ್ರವಚನಗೈಯುತ್ತಿರುವ ಕೀರ್ತನ ಪ್ರವೀಣ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ಕಥಾಪ್ರವಚನವನ್ನು ನಡೆಸಿಕೊಟ್ಟರು.
ಆಡಳಿತ ಮಂಡಳಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ, ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೇಮಾರ್ಗ, ಚಿತ್ರಕಲಾ ಅಧ್ಯಾಪಕ ಶಿವಾನಂದ ಆಚಾರ್ಯ, ಅಧ್ಯಾಪಕ ವೃಂದ, ರಕ್ಷಕರು ಪಾಲ್ಗೊಂಡಿದ್ದರು. ಅಧ್ಯಾಪಕ ಹರಿಪ್ರಸಾದ ಸ್ವಾಗತಿಸಿ, ಸಂಸ್ಕೃತ ಅಧ್ಯಾಪಕ ಬಾಲಕೃಷ್ಣ ಶರ್ಮ ಅನಂತಪುರ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ