ರಾಮಾಯಣ ಹಕ್ಕಿನೋಟ-10: ಪ್ರತಿದಿನ ರಾಮಾಯಣ ಕಿರು ಮಾಹಿತಿ

Upayuktha
0



ಶ್ರೀರಾಮಾಯನಮ:


ಈಗ ನಾನು ಉಲ್ಲೇಸಲಿರುವ ಘಟನೆ ವಾಲ್ಮೀಕಿ ರಾಮಾಯಣದ್ದಲ್ಲ.ಮಹಾಕವಿ ಭಾಸನ 'ಯಜ್ಞಫಲ'( ಎಸ್ ವಿ ಪರಮೇಶ್ವರ ಭಟ್ಟರ ಭಾಸ ಮಹಾಸಂಪುಟದಿಂದ ಆಯ್ದ ಭಾಗ) ನಾಟಕದಲ್ಲಿರುವ ಒಂದು ದೃಶ್ಯ.


ರಾಮಲಕ್ಷ್ಮಣರು ವಿಶ್ವಾಮಿತ್ರರೊಂದಿಗೆ ಹಳ್ಳಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗೊಲ್ಲರ ಮುದುಕಿಯೊಬ್ಬಳು ಹುಲ್ಲಿನ ಹೊರೆ ಹೊತ್ತುಕೊಂಡು ಎದುರಾದಳು.ವಿಶ್ವಾಮಿತ್ರರು ಆಕೆಯಲ್ಲಿ ಯೋಗಕ್ಷೇಮ ವಿಚಾರಿಸಿದರು.ಆಕೆ ನಮಸ್ಕರಿಸಿ ವಿಶ್ವಾಮಿತ್ರರಲ್ಲಿ ಪರಿಚಯ ಕೇಳದೆ ಈ ಬಾಲಕರು ಯಾರು? ಅವರ ಕೈಯಲ್ಲಿ ಬಿಲ್ಲು ಬಾಣಗಳೇಕೆ? ಎಂದು ವಿಚಾರಿಸಿದಳು.ಆಗ ವಿಶ್ವಾಮಿತ್ರರು ಅವರನ್ನು ಪರಿಚಯಿಸಿ ಅವರು ಯಜ್ಞ ರಕ್ಷಣೆಗಾಗಿ ರಾಕ್ಷಸರನ್ನು ಕೊಲ್ಲಲು ನನ್ನೊಡನೆ ಬಂದವರು.ನಿಮಗೆ ತೊಂದರೆ ಕೊಡುವ ಅಪಕಾರಿ ಮೃಗಗಳನ್ನು ಬೇಟೆಯಾಡುತ್ತಾರೆ ಎಂದು ಹೇಳಿದರು.ರಾಮಲಕ್ಷಣರಿಬ್ಬರೂ ತಮ್ಮ ಪರಿಚಯವನ್ನು ಹೇಳುತ್ತಾ ಅಜ್ಜಿಗೆ ನಮಸ್ಕರಿಸಿದಾಗ ಅವಳು ಅವರನ್ನು ಆಶೀರ್ವದಿಸಿದಳು.ಬಳಿಕ ಅವರಲ್ಲಿ ಮೃಗಗಳನ್ನು ಬೇಟೆಯಾಡಬೇಡಿ,ನಮಗೆ ತೊಂದರೆ ಕೊಡಲು ಬಂದಾಗ ನಾವೇ ಮಣ್ಣಿನ ಗಟ್ಟಿಯನ್ನೆಸೆದು ಓಡಿಸುತ್ತೇವೆ.ಅವುಗಳು ಓಡುವುದನ್ನು ನೋಡುವುದೇ ಒಂದು ಚೆಂದ! ಎಂದು ಉದ್ಗರಿಸಿದಳು.'ಅಪಕಾರಿಗಳಿಂದ ತೊಂದರೆಯಾಗುವುದಿಲ್ಲವೇ?'ಎಂದು ವಿಶ್ವಾಮಿತ್ರರು ಕೇಳಿದಾಗ ಅವುಗಳೊಂದಿಗೆ ಬದುಕುವುದು ನಮಗೆ ಅಭ್ಯಾಸವಾಗಿದೆ ಎಂದಳು.
ವಿಶ್ವಾಮಿತ್ರರು ಹಳ್ಳಿಗರ ಈ ಕ್ಷಮಾಗುಣ-ಸಹನಶೀಲತೆಯ ಪರಿಚಯವನ್ನು ಕೋಸಲದ ಭಾವೀ ರಾಜನಿಗೆ ಪರಿಚಯಿಸಿದ ಪರಿ ಸೊಗಸಾಗಿದೆ.ರಾಮ ಲಕ್ಷ್ಮಣರಿಬ್ಬರೂ ತಾವು ಕಂಡುಕೊಂಡ ಹಳ್ಳಿಗರ ಬಗೆಗಿನ ವಿಚಾರಗಳನ್ನು ವಿಶ್ವಾಮಿತ್ರರಲ್ಲಿ ಹಂಚಿಕೊಂಡರು. ಆ ಅಜ್ಜಿಯ ಕರೆಯ ಮೇರೆಗೆ ಅಂದಿರುಳು ಅತಿಥಿಗಳಾಗಿ ಆಕೆಯ ಮನೆಯಲ್ಲುಳಿದು ಆತಿಥ್ಯವನ್ನು ಸ್ವೀಕರಿಸಿದ್ದು ಮನಮುಟ್ಟುವಂತಿದೆ.

ಇಲ್ಲಿ ನಾವು ಗಮನಿಸಬಹುದಾದ ವಿಚಾರಗಳು-
ಅಜ್ಜಿಗೆ ಅಯೋಧ್ಯೆಯ ವಿಚಾರ ಗೊತ್ತಿಲ್ಲ,
ರಾಮ ಲಕ್ಷ್ಮಣರ ಬಗ್ಗೆ ಹೇಳುವಾಗ ಸಾಮಾನ್ಯ ಪ್ರತಿಕ್ರಿಯೆಯೊಂದಿಗೆ ತನ್ನ ಮುಗ್ಧತೆಯನ್ನು ತೋರುತ್ತಾ ರಾಜಕುಮಾರರೆಂದು ಗೊತ್ತಾದರೂ ತನ್ನ ಮೊಮ್ಮಕ್ಕಳಿಗೆ ಹಿತವಚನ ಹೇಳುವಂತೆ ಅಹಿಂಸೆಯನ್ನು ಬೋಧಿಸುವುದು.
ತನ್ನ ಬಡ ಮನೆಗೆ ಅವರನ್ನು ಆಹ್ವಾನಿಸಿ ಸತ್ಕರಿಸುವ ಆತಿಥ್ಯ ಮನೋಭಾವ
ಬಡವಳ ಆತಿಥ್ಯವನ್ನು ಸ್ವೀಕರಿಸಿದ ವಿಶ್ವಾಮಿತ್ರರ ಸಹೃದಯತೆ,
ರಾಮ ಲಕ್ಷ್ಮಣರಿಗೆ ಮಾದರಿ ನೀತಿ ಸಂಹಿತೆಯನ್ನು ಜಾಣ್ಮೆಯಿಂದ ಬೋಧಿಸಿದ ರೀತಿ..
ವಿಶ್ವಾಮಿತ್ರರು ಸುಮ್ಮನೇ ರಾಮನನ್ನು ಕರೆದಿಲ್ಲ! ಅಲ್ಲವೇ?


ಈ ರೀತಿಯ ಧನಾತ್ಮಕ ಚಿತ್ರಣಗಳು ನಮ್ಮ ಆಧುನಿಕ ವಿಚಾರವಾದೀ ಚಿಂತಕರಲ್ಲಿ ಮೂಡಿಬಂದಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ಲವೇ!?


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top