ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿಯ ಹಾಸನ ಮಹಿಳಾ ಘಟಕದ ಉದ್ಘಾಟನೆ

Upayuktha
0

ಹಾಸನ: ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿಯ ಹಾಸನ ಮಹಿಳಾ ಘಟಕದ ಉದ್ಘಾಟನಾ ಸಮಾರಂಭವನ್ನು ಅಶೋಕ ಹೋಟೆಲ್‌ನಲ್ಲಿ ಶುಕ್ರವಾರ (ಆ.11) ಹಮ್ಮಿಕೊಂಡಿದ್ದು ಪ್ರಮಾಣ ಪತ್ರ, ಕಾರ್ಡ್ ಗಳನ್ನು ಪದಾಧಿಕಾರಿಗಳಿಗೆ ವಿತರಿಸಲಾಯಿತು.


ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಗೌರವಾಧ್ಯಕ್ಷ ಸುರೇಶ್ ಎ.ಎಸ್ ರವರು, ಈ ಸಮಿತಿಯಿಂದ ಒಳ್ಳೆಯ ಕೆಲಸಗಳು ಆಗಬೇಕಿದೆ. ಮಹಿಳೆಯರು ಪ್ರಬಲರಾಗಬೇಕು, ಏನೇ ಸಮಸ್ಯೆಗಳು ಬಂದರೂ ಸಹ ಅದಕ್ಕೆ ಹೆದರದೆ ಮುನ್ನುಗ್ಗಬೇಕು. ನಾವು ಈ ಸಮಿತಿಯಿಂದ ನಮ್ಮ ಕೈಲಾದಷ್ಟು  ಸಹಕಾರವನ್ನು ನೀಡುತ್ತೇವೆ. ಇಂದಿನ ಹೆಣ್ಣು ಮಕ್ಕಳನ್ನು ಅತಿಯಾದ ಮೊಬೈಲ್ ಬಳಕೆಯಿಂದಾಗಿ ಅವರ ಜೀವನದಲ್ಲಿ ಆಟ ಆಡುವವರು ಹೆಚ್ಚಾಗಿದ್ದಾರೆ. ಎಲ್ಲ ಹೆಣ್ಣು ಮಕ್ಕಳು ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು. ಮೊಬೈಲ್ ನ ಅನಾನುಕೂಲತೆಗಿಂತಲೂ ಅನುಕೂಲವಾಗುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.


ಅಧ್ಯಕ್ಷರಾದ ರವಿಕಿರಣ್ ಸಿ.ಎಸ್ ರವರು ಜೀವನದಲ್ಲಿ ಕಷ್ಟ ಸುಖಗಳು ಸಹಜ, ಎಲ್ಲವನ್ನು ಗಂಡಸರಿಗೆ ಹೇಳುವುದಕ್ಕೆ ಆಗುವುದಿಲ್ಲ ಹೆಣ್ಣಿನ ಕಷ್ಟ ಹೆಣ್ಣೇ ಕೇಳಬೇಕು. ಹೆಣ್ಣಿನ ಮನಸ್ಸು ಹೆಣ್ಣಿಗೆ ಬೇಗ ಅರ್ಥವಾಗುತ್ತದೆ. ನೊಂದವರಿಗಾಗಿ ಈ ಸಮಿತಿ  ಕಾರ್ಯ ನಿರ್ವಹಿಸುತ್ತದೆ ಎಂದರು.


ಈ ಸಮಿತಿಯ ಕಾನೂನು ಸಲಹೆಗಾರರಾದ ಯೋಗೀಶ್ ಅವರು, ಒಬ್ಬಂಟಿಯಾಗಿ ಯಾರು ಏನು ಮಾಡಲು ಸಾಧ್ಯವಿಲ್ಲ. ಹತ್ತು ಜನ ಸೇರಿ ಕೆಲಸ ಮಾಡಿದರೆ ಅದಕ್ಕೆ ಬಲ ಹೆಚ್ಚು. ಹಾಗೆಯೇ ಸಂಘ-ಸಂಸ್ಥೆಗಳು ಸಹ  ಗುಂಪಿನಲ್ಲಿದ್ದಾಗ ಮಾತ್ರ ಬಲ ಹೆಚ್ಚಾಗುತ್ತದೆ ಹೊರತು ಒಬ್ಬರಿಂದ ಏನೂ ಆಗದು ಎಂದರು.


ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಜೀವನ ಮಾಡಬೇಕು. ಇತರರಿಗೆ ಸ್ಪೂರ್ತಿಯಾಗುವಂತೆ ಬಾಳಬೇಕು ಎಂದರು. ಮಹಿಳಾ ಘಟಕದ ಹಾಸನದ ಜಿಲ್ಲಾಧ್ಯಕ್ಷರಾದಂತಹ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ಅವರು ಮಾತನಾಡಿ, ಇಂದಿನ ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳು ಎಲ್ಲಾ ರಂಗಗಳನ್ನು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಮನಸ್ಸು ಮಾಡಿ ಮುನ್ನುಗ್ಗಿದರೆ, ಒಳ್ಳೆ ಕಾರ್ಯ ಮಾಡುವ ನಿರ್ಧಾರವಿದ್ದರೆ ಏನು ಬೇಕಾದರೂ ಸಾಧಿಸಿ ತೋರಿಸಬಹುದು. ಹೆಣ್ಣು ಮಕ್ಕಳು ಛಲದಿಂದ ಬದುಕಿ ತೋರಿಸಬೇಕು ಎಂದು ಹೇಳಿದರು.


ಯಾವುದಕ್ಕೂ ಹೆದರದೆ ಒಳ್ಳೆ ರೀತಿಯಲ್ಲಿ ಬದುಕಿ ಬಾಳಬೇಕು ಎಂದರು. ಒಳ್ಳೆ ಕೆಲಸ ಮಾಡಬೇಕಾದರೆ ಹಲವು ವಿಘ್ನಗಳು  ಬರುವುದು ಸಹಜ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು ಜೀವನ ಮಾಡಿ ತೋರಿಸಬೇಕು ಎಂದರು.


ಕರ್ನಾಟಕ ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷರಾದ ರಘು ಗೌಡರು, ಎಲ್ಲಾ ಹೆಣ್ಣು ಮಕ್ಕಳು ನಮ್ಮ ಸಹೋದರಿಯರಂತೆ ಎಲ್ಲ ರಂಗದಲ್ಲೂ ಕಾರ್ಯನಿರ್ವಹಿಸಬೇಕೆಂದರು. ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಬಿ. ವಕೀಲರಾದ ಕುಮಾರಸ್ವಾಮಿ ಉಪಸ್ಥಿತರಿದ್ದರು.


ಎಲ್ಲಾ ಅತಿಥಿಗಳ ಸಮ್ಮುಖದಲ್ಲಿ ಐಡಿ ಕಾರ್ಡ್‌ಗಳನ್ನು ಮಹಿಳಾ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ   ನೀಡಲಾಯಿತು. ಮಂಜುಳಾ ಪ್ರಾರ್ಥಿಸಿದರು. ಅನಿತಾ ಅವರು ಸ್ವಾಗತಿಸಿದರು. ಎಚ್ಎಸ್ ಪ್ರತಿಮಾ ಹಾಸನ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಮಮತಾ ವಂದಿಸಿದರು. ಭೋಜನಕೂಟದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top