ಪ್ರಸಿದ್ಧ ಚೆಂಡೆವಾದಕ ಶ್ರೀನಿವಾಸ ಪ್ರಭುಗೆ 'ಸೃಷ್ಟಿ ಯಕ್ಷ ಏಕಲವ್ಯ' ಪ್ರಶಸ್ತಿ ಪ್ರದಾನ

Upayuktha
0

ಯಕ್ಷಗಾನದಿಂದ ಕನ್ನಡಕ್ಕೆ ಜೀವಂತಿಕೆ: ರವಿ ಸುಬ್ರಹ್ಮಣ್ಯ


ಪ್ರಸಿದ್ಧ ಚೆಂಡೆವಾದಕ ಶ್ರೀನಿವಾಸ ಪ್ರಭು (ಗುಂಡ) ಅವರಿಗೆ ಸೃಷ್ಟಿ ಯಕ್ಷ ಏಕಲವ್ಯ ಪ್ರಶಸ್ತಿ ಪ್ರದಾನ  ಮಾಡಲಾಯಿತು. ಶಾಸಕ ರವಿ ಸುಬ್ರಹ್ಮಣ್ಯ, ಸೃಷ್ಟಿ ಅಧ್ಯಕ್ಷ ಛಾಯಾಪತಿ ಕಂಚಿಬೈಲ್, ಗೌರವಾಧ್ಯಕ್ಷ ಶ್ರೀಕಾಂತ್ ಎಂ.ಜಿ., ಕಲಾವಿದರುಗಳಾದ ಸುಬ್ರಾಯ ಹೆಬ್ಬಾರ್, ಅಕ್ಷಯ ಆಚಾರ್ಯ ನಿತ್ಯಾನಂದ ನಾಯಕ್, ಅರ್ಜುನ್ ಕೊರ್ಡೇಲ್, ಭರತ್ ರಾಜ್ ಪರ್ಕಳ ಇದ್ದರು.


ಬೆಂಗಳೂರು:‌ ಯಕ್ಷಗಾನದಿಂದ ಕನ್ನಡ ಭಾಷೆಯು ಇನ್ನಷ್ಟು ಜೀವಂತವಾಗಿರುತ್ತದೆ, ದೈಹಿಕ ಮಾನಸಿಕ ಸ್ವಾಸ್ಥ್ಯ ಕಾಪಾಡುವುದರಲ್ಲಿ ಯಕ್ಷಗಾನ ಅತ್ಯಂತ ಪ್ರಯೋಜನಕಾರಿ ಎಂದು ಎಂದು ಶಾಸಕ ರವಿ ಸುಬ್ರಹ್ಮಣ್ಯ ಹೇಳಿದರು.


ಚೆನ್ನಮ್ಮನಕೆರೆ ಅಚ್ಚುಕಟ್ಟು ಬಳಿಯ ಪರಂಪರಾ ಸಭಾಂಗಣದಲ್ಲಿ ಭಾನುವಾರ ಸೃಷ್ಟಿ ಕಲಾ ವಿದ್ಯಾಲಯದ 23ನೇ ಸೃಷ್ಟಿ ಸಂಭ್ರಮ ಅಂಗವಾಗಿ ಪ್ರಸಿದ್ಧ ಚೆಂಡೆವಾದಕ ಶ್ರೀನಿವಾಸ ಪ್ರಭು( ಗುಂಡ) ಅವರಿಗೆ ಸೃಷ್ಟಿ ಯಕ್ಷ ಏಕಲವ್ಯ ಪ್ರಶಸ್ತಿ ಪ್ರದಾನ  ಮಾಡಿ ಮಾತನಾಡಿದರು.


ಸೃಷ್ಟಿ ಕಲಾವಿದ್ಯಾಲಯವು ನಿರಂತರ ಯಕ್ಷಗಾನ ತರಬೇತಿ, ಕಲಾಸೇವೆ ಮೂಲಕ ಬಸವನ ಗುಡಿ ಕ್ಷೇತ್ರದ ಗೌರವವನ್ನು ಹೆಚ್ಚಿಸಿದೆ ಎಂದರು.



ಪ್ರಶಸ್ತಿ ಸ್ವೀಕರಿಸಿದ ಶ್ರೀನಿವಾಸ ಪ್ರಭು, ಸೃಷ್ಟಿಯ ಈ ಪ್ರಶಸ್ತಿ ನನ್ನ ಕಲಾ ಬದುಕಿನಲ್ಲಿ ಅತ್ಯಂತ ಮಹತ್ವದ್ದು  ಹಾಗೂ ಮರೆಯಲಾರದ್ದು ಎಂದರು.


ಸೃಷ್ಟಿ ಅಧ್ಯಕ್ಷ ಛಾಯಾಪತಿ ಕಂಚಿಬೈಲ್, ಗೌರವಾಧ್ಯಕ್ಷ ಶ್ರೀಕಾಂತ್ ಎಂ.ಜಿ., ಕಲಾವಿದರುಗಳಾದ ಸುಬ್ರಾಯ ಹೆಬ್ಬಾರ್, ಅಕ್ಷಯ ಆಚಾರ್ಯ ನಿತ್ಯಾನಂದ ನಾಯಕ್ , ಅರ್ಜುನ್ ಕೊರ್ಡೇಲ್, ಭರತ್ ರಾಜ್ ಪರ್ಕಳ ಇದ್ದರು.


ಈ ಸಂದರ್ಭ ಸುಬ್ರಾಯ ಹೆಬ್ಬಾರ್‌ ಮತ್ತು ಭರತ್‌ ರಾಜ್‌ ಪರ್ಕಳ ನಿರ್ದೇಶನದಲ್ಲಿ, ನಿತ್ಯಾನಂದ ನಾಯಕ್‌ ಪರಿಕಲ್ಪನೆಯಲ್ಲಿ ಸೃಷ್ಟಿ ಕಲಾ ವಿದ್ಯಾಲಯ ವಿದ್ಯಾರ್ಥಿಗಳಿಂದ ಕುಮಾರ ವಿಜಯ ಯಕ್ಷಗಾನ ಪ್ರದರ್ಶನ ಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   


Post a Comment

0 Comments
Post a Comment (0)
To Top