ಕಲಾಭಿ ಥಿಯೇಟರ್ ರಂಗ ಸಂಗೀತ ಕಾರ್ಯಾಗಾರ ಸಮಾರೋಪ

Upayuktha
0

ಮಂಗಳೂರು: ಕಲಾಭಿ ಥಿಯೇಟರ್ ಮಂಗಳೂರು, ಕೆನರಾ ಕಲ್ಚರಲ್ ಅಕಾಡೆಮಿಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ರಂಗಸಂಗೀತ ಕಾರ್ಯಾಗಾರ ಎರಡು ದಿನಗಳ ರಂಗಸಂಗೀತ ಕಾರ್ಯಾಗಾರ ಭಾನುವಾರ (ಆ.13) ಸಂಜೆ ನಗರದ ಕೆನರಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಾರೋಪಗೊಂಡಿತು.


ಶಿಬಿರದ ನಿರ್ದೇಶಕರಾಗಿದ್ದ ಶ್ರೀಪಾದ ತೀರ್ಥಹಳ್ಳಿಯವರು ಕನ್ನಡ ರಂಗಭೂಮಿಯ ಅನೇಕ ರಂಗಗೀತೆಗಳನ್ನು ಶಿಬಿರಾರ್ಥಿಗಳಿಗೆ ಕಲಿಸಿಕೊಟ್ಟರು. 20ಕ್ಕೂ ಹೆಚ್ಚು ಶಿಬಿರಾರ್ಥಿಗಳು ರಂಗಗೀತೆಗಳನ್ನು ಕಲಿತು ಸಮಾರೋಪ ಸಮಾರಂಭದಲ್ಲಿ ಪ್ರಸ್ತುತಪಡಿಸಿದರು.


ಸಮಾರೋಪ ಸಮಾರಂಭದ ಮುಖ್ಯ ಅಥಿತಿಗಳಾಗಿ ಭಾಗವಹಸಿದ್ದ RJ ಅಭಿಷೇಕ್ ಶೆಟ್ಟಿ ಮಾತನಾಡಿ, ಮಂಗಳೂರಿನಂತಹ ನಗರದಲ್ಲಿ ಈ ರೀತಿಯ ನಿರಂತರ ರಂಗಚಟುವಟಿಕೆಗಳನ್ನು ನಡೆಸುತ್ತಿರುವ ಕಾರ್ಯ ಶ್ಲಾಘನೀಯ, ಇನ್ನಷ್ಟು ಚಟುವಟಿಕೆಗಳನ್ನು ನಡೆಸುವ ಶಕ್ತಿ ಸಿಗಲಿ ಎಂದು ಶುಭ ಹಾರೈಸಿದರು. ಮತ್ತು ರೇಡಿಯೋ ಜೀವನದ ತಮ್ಮ ಅನುಭವಗಳನ್ನು ಹಂಚಿಕೊಂಡರು.


ಕಲಾಭಿ ಥಿಯೇಟರ್‌ನ ಕಾರ್ಯದರ್ಶಿ ಉಜ್ವಲ್ ಯುವಿ ಮಾತನಾಡಿ, ಕಲಾಭಿ ಥಿಯೇಟರ್ ಮಂಗಳೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ಕಲೆಯ ಕೆಲಸಗಳನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲೂ ಈ ರೀತಿಯ ಕಾರ್ಯಾಗಾರಗಳು, ಶಿಬಿರಗಳು, ಕಲೆಗೆ ಸಂಭಂದಿಸಿದ ಅನೇಕ ಚಟುವಟಿಕೆಗಳು ನಡೆಯಲಿದ್ದು ಮಂಗಳೂರಿನ ಕಲಾಸ್ತಕರು ಇದರ ಸದುಪಯೋಗ ಪಡೆಯಬೇಕೆಂಬುದು ನಮ್ಮ ತಂಡದ ಆಶಯ ಎಂದರು.


ಮನೆಮನೆಗೆ ರಂಗಭೂಮಿ ಎಂಬ ಪರಿಕಲ್ಪನೆಯಲ್ಲಿ ಮನೆಮನೆಗೆ ಭೇಟಿಕೊಟ್ಟು ರಂಗಸಂಗೀತ, ರಂಗಪ್ರಸ್ತುತಿ ಅಥವಾ ಇನ್ನಿತರ ರಂಗಪ್ರಕಾರಗಳಲ್ಲಿ ಆ ಕುಟುಂಬದ ಸದಸ್ಯರೊಂದಿಗೆ ಆಪ್ತವಾಗಿ ಪ್ರಸ್ತುತಪಡಿಸಿ ಈ ಪ್ರಯೋಗದ ಆಗು-ಹೋಗುಗಳನ್ನು ಚರ್ಚಿಸುವ ಮತ್ತು ರಂಗಭೂಮಿಯ ಪರಿಧಿಯನ್ನು ಮೀರುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಕಲಾಭಿ ಥಿಯೇಟರ್‌ನ ಗೌರವಾಧ್ಯಕ್ಷರಾದ ಸುರೇಶ್.ಬಿ. ವರ್ಕಾಡಿ, ಅಧ್ಯಕ್ಷರಾದ ಡಾ.ಮೀನಾಕ್ಷಿ ರಾಮಚಂದ್ರ, ಸದಸ್ಯರುಗಳು, ಕಲಾವಿದರು ಉಪಸ್ಥಿತರಿದ್ದರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top