ಪೇಂಟಿಂಗ್‍ ಚೆನ್ನಾಗಿ ಕಾಣಿಸಬೇಕೆಂದರೆ ಕಲಾ ಗ್ಯಾಲರಿ ಬೇಕು: ಕೆ.ಟಿ.ಶಿವಪ್ರಸಾದ್

Upayuktha
0

ಹಾಸನ: ಪೇಂಟಿಂಗ್‍ ಎಂಬುದು ತುಂಬಾ ಹಳೆಯದು. ನಮ್ಮ ಪೂರ್ವಿಕರು ಪಕ್ಷಿ ಪ್ರಾಣಿಗಳ ಚಿತ್ರಗಳನ್ನು ಗುಹೆಗಳಲ್ಲಿ ಬರೆಯುತ್ತಿದ್ದರು. ಅಲ್ಲಿಂದ ಇಲ್ಲಿಯವರೆಗೂ ಚಿತ್ರಕಲೆ ಬೆಳೆದುಬಂದಿದೆ. ಪೈಂಟಿಂಗ್‍ ಚೆನ್ನಾಗಿ ಕಾಣಿಸಬೇಕೆಂದರೆ ಅದಕ್ಕೆ ಉತ್ತಮವಾದ ಲೈಟಿಂಗ್ಸ್ ವ್ಯವಸ್ಥೆ ಇರಬೇಕಾಗುತ್ತದೆ. ಇದಕ್ಕಾಗಿ ಹಾಸನ ನಗರದಲ್ಲಿ ಒಂದು ಕಲಾ ಗ್ಯಾಲರಿ ಅಗತ್ಯವಾಗಿ ಬೇಕಾಗಿದೆ ಎಂದು ಖ್ಯಾತ ಅಂತಾರಾಷ್ಟ್ರೀಯ ಚಿತ್ರಕಲಾವಿದರಾದ ಕೆ.ಟಿ.ಶಿವಪ್ರಸಾದ್ ತಿಳಿಸಿದರು.


ಅವರು ಹಾಸನದ ಹಾಸನಾಂಬ ಕಲಾಕ್ಷೇತ್ರದ ಹೊರಾಂಗಣದಲ್ಲಿ ಏರ್ಪಡಿಸಿರುವ  ಚಿತ್ರಕಲಾ ಶಿಕ್ಷಕರು ಕಲಾವಿದರು ವಸಂತಕುಮಾರ್‍ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 


ಲ್ಯಾಂಡ್ ಸ್ಕೇಪ್‍ ಎಂದರೆ ಮರಗಿಡಗಳ ಪ್ರಕೃತಿ ಪರಿಸರದಲ್ಲೇ ಕುಳಿತು ಅಲ್ಲಿ ಕಾಣುವ ದೃಶ್ಯವನ್ನು ವೀಕ್ಷಿಸುತ್ತಾ ಚಿತ್ರಿಸುವುದಾಗಿದೆ. ವಸಂತಕುಮಾರ್‍ ಅವರ ಪ್ರಕೃತಿ ಚಿತ್ರಗಳ ಚೆನ್ನಾಗಿ ಬಂದಿವೆ. ಇವುಗಳನ್ನು ಲೈಟಿಂಗ್‍ನಲ್ಲಿ ನೋಡಿದಲ್ಲಿ ಇನ್ನೂ ಆಕರ್ಷಕವಾಗಿ ಕಂಡು ಬರುತ್ತದೆ ಎಂದರು. 



ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಕಲೆಯು ಮಾನವನ ಹುಟ್ಟಿನೊಂದಿಗೆ ದೈವದತ್ತವಾಗಿ ಬೆಳೆದು ಬಂದ ಚಮತ್ಕಾರವಾಗಿದೆ. ಒಂದುಕಾಲದ ಸಂಸ್ಕೃತಿಯಿಂದ ಇನ್ನೊಂದು ಕಾಲದ ಸಂಸ್ಕೃತಿಗೆ ಸಂಬಂಧವನ್ನು ಜೋಡಿಸುವ ಸಂಪರ್ಕ ಮಾಧ್ಯಮವಾಗಿದೆ ಎಂದು ತಿಳಿಸಿದ. ಅನಂತರಾಜು ತಾವು ಚಿತ್ರಕಲಾವಿದರ ಕುರಿತಾಗಿ ಕೃತಿಯೊಂದನ್ನು ಪ್ರಕಟಿಸುತ್ತಿದ್ದು ಕಲಾವಿದರು ತಮ್ಮ ಪರಿಚಯವನ್ನು ಕಳಿಸಿಕೊಡಬೇಕಾಗಿ ಕೋರಿದರು.


ಭೀಮ ವಿಜಯ ದಿನಪತ್ರಿಕೆ ಸಂಪಾದಕರು ನಾಗರಾಜ್ ಹೆತ್ತೂರು, ಲೇಖಕಿ ಸುವರ್ಣ ಕೆ.ಟಿ.ಶಿವಪ್ರಸಾದ್, ಕ.ಸಾ.ಪ. ಹಾಸನ ಜಿಲ್ಲಾ ಗೌ. ಕಾರ್ಯದರ್ಶಿ ಜಾವಗಲ್ ಪ್ರಸನ್ನ ಮಾತನಾಡಿದರು. ಸುನಂದಕೃಷ್ಣ ಭಾವಗೀತೆಗಳನ್ನು ಹಾಡಿದರು. ಕಾರ್ಯಕ್ರಮ ಆಯೋಜಿಸಿದ್ದ ವಸಂತಕುಮಾರ್‍ ಕಾರ್ಯಕ್ರಮ ನಿರೂಪಿಸಿದರು ಮತ್ತು ಇವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಫರ್ಧೆ ವಿಜೇತರಿಗೆ ಇದೇ ಸಂದರ್ಭ ಅತಿಥಿಗಣ್ಯರಿಂದ ಬಹುಮಾನ ವಿತರಿಸಲಾಯಿತು.


ಕಾಡು ಬೆಳೆಸಿ ಭೂಮಿ ಉಳಿಸಿ ಶೀರ್ಷಿಕೆಯಡಿ ವಸಂತಕುಮಾರ್‍ ಅವರ ಹೊಸದಾಗಿ ಚಿತ್ರಿಸಿದ್ದ 10 ಪ್ರಕೃತಿ ಚಿತ್ರಗಳೊಂದಿಗೆ ಒಟ್ಟು 30 ಪೇಂಟಿಂಗ್ಸ್‍ಗಳು ಪ್ರದರ್ಶನದಲ್ಲಿದ್ದು ಭಾನುವಾರ, ಸೋಮವಾರ ಎರಡು ದಿನ ಪ್ರೇಕ್ಷಕರಿಗೆ ವೀಕ್ಷಿಸಬಹುದಾಗಿದೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top