ಗುಡ್‍ಸ್ಲೀಪ್ ಗುಡ್‍ಹೆಲ್ತ್ : ವಿಶೇಷ ಅಭಿಯಾನ

Upayuktha
0

ಮಂಗಳೂರು: ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ನಿದ್ದೆ ಎಂಬ ವಿಶೇಷ ಪ್ರಚಾರ ಅಭಿಯಾನವನ್ನು ಡ್ಯುರೊಫ್ಲೆಕ್ಸ್ ಆರಂಭಿಸಿದೆ. ಅಭಿಯಾನದ ಅಂಗವಾಗಿ ಪ್ರಚಾರ ರಾಯಭಾರಿ ವಿರಾಟ್ ಕೊಹ್ಲಿ ಮೂಲಕ ಅಸಾಧಾರಣ ಸಂಶೋಧನೆ ಆಧರಿತ ಹಾಸಿಗೆಗಳನ್ನು ಅನಾವರಣಗೊಳಿಸಿದೆ.


ಜೀವನದ ಯಾವುದೇ ಹಂತದಲ್ಲಿ ಸಕ್ರಿಯ ಜೀವನಶೈಲಿಯನ್ನು ಬೆಳೆಸುವಲ್ಲಿ ಗುಣಮಟ್ಟದ ನಿದ್ರೆಯ ಶಕ್ತಿಯನ್ನು ಈ ಅಭಿಯಾನಪ್ರತಿಪಾದಿಸುತ್ತದೆ. ಗ್ರಾಹಕರ ವಿಶಿಷ್ಟ ಅಗತ್ಯಗಳನ್ನು ಈಡೇರಿಸುವಂತೆ ವಿನ್ಯಾಸಗೊಳಿಸಲಾದ ಗುಣಮಟ್ಟದ ನಿದ್ರೆಯ ಪರಿಹಾರಗಳನ್ನು ಒದಗಿಸಲು ಸುಧಾರಿತ ತಂತ್ರಜ್ಞಾನವನ್ನು ಬಳಸುವ ಅವರ ಬದ್ಧತೆಯನ್ನು ಡ್ಯುರೊಫ್ಲೆಕ್ಸ್‍ನ '#ಗುಡ್‍ಸ್ಲೀಪ್‍ಗುಡ್‍ಹೆಲ್ತ್' ಗ್ರಾಹಕರಿಗೆ ಎತ್ತಿ ತೋರಿಸುತ್ತದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋಹನರಾಜ್ ಜಗನ್ನಿವಾಸನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


"ಆರೋಗ್ಯ ಮತ್ತು ಫಿಟ್‍ನೆಸ್‍ಗೆ ಜಿಮ್ ಮಾತ್ರ ಸಹಕಾರಿಯಲ್ಲ; ಜೀವನಶೈಲಿಯೂ ಮುಖ್ಯ. ಜೀವನಶೈಲಿಯಲ್ಲಿ ನಿದ್ದೆ ಪ್ರಧಾನ ಅಂಶ. ನಿಮ್ಮ ದೇಹವು ಒಳ್ಳೆಯ ದೈಹಿಕ ಚಟುವಟಿಕೆ ಮತ್ತು ಉತ್ತಮ ಆಹಾರಕ್ರಮಕ್ಕೆ ಪ್ರತಿಕ್ರಿಯಿಸಲು ಆರೋಗ್ಯಕರ ಎಂಟು ಗಂಟೆಗಳ ನಿದ್ರೆಯನ್ನು ಪಡೆಯುವುದು ಮುಖ್ಯವಾಗಿದೆ. ಒಳ್ಳೆಯ ನಿದ್ದೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಪ್ರಮುಖ ಅಂಶವಾಗಿದೆ" ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top