ಮಂಗಳೂರು: ಹೊಸ ಪೀಳಿಗೆಯ ಫ್ಯಾಶನ್ ಅಗತ್ಯತೆಗಳನ್ನು ಪೂರೈಸುವ ಉದ್ದೇಶದಿಂದ ಫ್ಲಿಪ್ ಕಾರ್ಟ್ ಹೊಸದಾಗಿ ಸ್ಪಾಯ್ಲ್ ಹೆಸರಿನ ಆ್ಯಪ್ ಇನ್ ಆ್ಯಪ್ ಪರಿಚಯಿಸಿದೆ. ಝೆಡ್ ಜನರೇಶನ್ ಶಾಪಿಂಗ್‍ಗಾಗಿಯೇ ಈ ವಿನೂತನ ಪರಿಕಲ್ಪನೆ ವಿನ್ಯಾಸಗೊಳಿಸಲಾಗಿದೆ.
ಉತ್ಪನ್ನಗಳ ಮೌಲ್ಯ ಮತ್ತು ಟ್ರೆಂಡ್ ಸೆಟ್ಟಿಂಗ್ ಸ್ಟೈಲ್ ಗಳ ಮೇಲೆ ಗಮನ ಹರಿಸಲಾಗಿದ್ದು, ಈ ಪ್ಲಾಟ್‍ಫಾರ್ಮ್ ನಲ್ಲಿ 40,000 ಕ್ಕೂ ಅಧಿಕ ಉತ್ಪನ್ನಗಳು ಲಭ್ಯವಾಗಲಿವೆ. ಈ ಪೈಕಿ ವೆಸ್ಟರ್ನ್ ವೇರ್, ಅಕ್ಸೆಸರೀಸ್, ಪಾದರಕ್ಷೆಗಳು ಸೇರಿದಂತೆ ಹತ್ತು ಹಲವಾರು ಉತ್ಪನ್ನಗಳಿವೆ. ವ್ಯಕ್ತಿಗಳು ಅಥವಾ ಶಾಪರ್‍ಗಳು ತಮ್ಮ ವೈಯಕ್ತಿಕ ಸ್ಟೈಲ್ ಅನ್ನು ಮತ್ತಷ್ಟು ಕ್ರಾಂತಿಕಾರಿಗೊಳಿಸುವ ಉದ್ದೇಶವನ್ನು ಸ್ಪಾಯ್ಲ್ ಹೊಂದಿದೆ ಎಂದು ಫ್ಲಿಪ್ ಕಾರ್ಟ್ ಫ್ಯಾಶನ್ ನ ಉಪಾಧ್ಯಕ್ಷ ಸಂದೀಪ್ ಕಾರ್ವ ಹೇಳಿದ್ದಾರೆ.
ಜಾಗತಿಕವಾಗಿ ಭಾರತ ಮೂರನೇ ಅತಿದೊಡ್ಡ ಆನ್ ಲೈನ್ ಶಾಪರ್ ಗಳ ಮಾರುಕಟ್ಟೆಯಾಗಿದ್ದು, ಆನ್‍ಲೈನ್ ಖರೀದಿದಾರರಲ್ಲಿ ಮೂರನೇ ಒಂದರಷ್ಟು ಯುವಜನತೆ ಸೇರಿದ್ದಾರೆ. ಅವರಿಗಾಗಿಯೇ ಈ ವಿಶಿಷ್ಟ ವರ್ಗ ಆರಂಭಿಸಲಾಗಿದೆ. ಭಾರತದ ಯುವ ಫ್ಯಾಶನ್ ಶಾಪರ್ ಗಳಿಗೆ ಶಾಪಿಂಗ್ ಅನುಭವವನ್ನು ರೋಮಾಂಚನಗೊಳಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಯೂನಿಸೆಕ್ಸ್ ಪ್ರಾಡಕ್ಟ್ ನ್ಯಾವಿಗೇಶನ್ ಪರಿಚಯಿಸಲಾಗಿದೆ. ಇದರ ಮೂಲಕ ಶಾಪರ್ ಗಳು ತಮಗೆ ಸಂಬಂಧಿಸಿದ ವಿಭಾಗಕ್ಕೆ ಭೇಟಿ ನೀಡಿ ತಮಗಿಷ್ಟವೆನಿಸಿದ ಉತ್ಪನ್ನಗಳನ್ನು ಸುಲಭವಾಗಿ ಖರೀದಿಸಬಹುದಾಗಿದೆ ಎಂದು ವಿವರಿಸಿದ್ದಾರೆ.
ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ `ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ತನ್ನ ಬೆಂಬಲವನ್ನು ಮುಂದುವರಿಸಿದೆ ಮತ್ತು ಈ ನಿಟ್ಟಿನಲ್ಲಿ ಸ್ಪಾಯ್ಲ್ ಆರಂಭಿಸಿರುವುದು ಫ್ಲಿಪ್ ಕಾರ್ಟ್ ನ ದಿಟ್ಟ ಹೆಜ್ಜೆ ಆಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ