ವಿಹಿಂಪ ಮುಖಂಡರ ಮೇಲೆ ಕೇಸು ದಾಖಲು: ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಖಂಡನೆ

Upayuktha
0



ಮಂಗಳೂರು: ಉಡುಪಿ ಕಾಲೇಜಿನ ಶೌಚಾಲಯದಲ್ಲಿ ನಡೆದ ವಿಡಿಯೊ ಚಿತ್ರೀಕರಣ ಪ್ರಕರಣವನ್ನು ಖಂಡಿಸಿ ವಿಶ್ವಹಿಂದೂ

ಪರಿಷತ್, ಬಜರಂಗದಳದ ವತಿಯಿಂದ ನಿನ್ನೆ ಉಡುಪಿಯಲ್ಲಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಹಿಳಾ ಜಾಗೃತಿ

ಬಗ್ಗೆ ಭಾಷಣ ಮಾಡಿದ ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹಾಗೂ ಜಿಲ್ಲಾ

ಮುಖಂಡ ದಿನೇಶ್ ಮೆಂಡನ್ ಮೇಲೆ ಕೇಸು ದಾಖಲಿಸಿದ ಪೊಲೀಸ್ ಕ್ರಮವನ್ನು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ

ಸುದರ್ಶನ ಎಂ. ಖಂಡಿಸಿದ್ದಾರೆ.


ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಕೇಸು ದಾಖಲಿಸಲು ಮೀನ ಮೇಷ ಎಣಿಸಿದ ಪೊಲೀಸ್ ಇಲಾಖೆ,

ಪ್ರತಿಭಟನೆ ನಡೆದ ತಕ್ಷಣ ಸಂಘಟನೆಯ ಪ್ರಮುಖರ ಮೇಲೆ ಕೇಸು ದಾಖಲಿಸಿ ಕಾಂಗ್ರೆಸ್ ಸರಕಾರದ ಕೈ

ಗೊಂಬೆಯಂತೆ ವರ್ತಿಸುತ್ತಿದೆ. ಕಾಂಗ್ರೆಸ್ ಸರಕಾರದ ತುಷ್ಟೀಕರಣದ ನೀತಿಯಿಂದ ಸಮಾಜದಲ್ಲಿ ಸಾಮರಸ್ಯ

ಕೆಡುತ್ತಿದೆ. ಗೋ-ಹಂತಕರ ವಿರುದ್ದ, ಮತಾಂತರಿಗಳ ವಿರುದ್ದ, ಲವ್ ಜಿಹಾದ್ ವಿರುದ್ದ, ಪಾಕ್ ಪರ ಘೋಷಣೆ

ಹಾಕಿದವರ ವಿರುದ್ದ ಕ್ರಮ ಜರುಗಿಸುವುದು ಬಿಟ್ಟು ಧರ್ಮ ರಕ್ಷಣಾ ಕಾರ್ಯ ಮಾಡುವ ಹಿಂದೂ ಕಾರ್ಯಕರ್ತರ

ಮೇಲೆ ಕ್ರಮ ಜರುಗಿಸುತ್ತಿರುವ  ಪೊಲೀಸ್ ಇಲಾಖೆಯ ಮೇಲೆ ಜನರು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ

ಎಂದು ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top