ಹಿಂದುಗಳ ಧ್ವನಿ ಹತ್ತಿಕ್ಕಲು ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗದು : ಡಾ. ಭರತ್ ಶೆಟ್ಟಿ ವೈ

Upayuktha
0

ಸುರತ್ಕಲ್: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿರುವ ಹಿಂದೂ ಸಂಘಟನೆಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಲೇ ಬಂದಿದ್ದು, ಇದು ಸಾಧ್ಯವಾಗದ ವಿಚಾರ. ಅನ್ಯಾಯ,ದೌರ್ಜನ್ಯದ ವಿರುದ್ದ ಹಿಂದೂ ಸಮಾಜ ಎದ್ದು ನಿಂತರೆ ಕಾಂಗ್ರೆಸ್ ಸರಕಾರದ  ಗ್ಯಾರಂಟಿಯ ವಾರಂಟಿ ಶೀಘ್ರ ಕೊನೆಗೊಂಡರೂ ಅಚ್ಚರಿಯಿಲ್ಲ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ  ವೈ ಗಂಭೀರ ಎಚ್ಚರಿಕೆ ನೀಡಿದ್ದಾರೆ.


ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯ  ಮುಸ್ಲಿಂ ಸಮುದಾಯಕ್ಕೆ ಸೇರಿದ ಮೂವರು ವಿದ್ಯಾರ್ಥಿನಿಯರು  ಮೊಬೈಲ್ ಕ್ಯಾಮರಾ ಅಳವಡಿಸಿ ಮೀಡಿಯಾ ಚಿತ್ರೀಕರಣ ಮಾಡುವ ಗಂಭೀರ ಅಪರಾಧವನ್ನು ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ.


ಇದರ ವಿರುದ್ಧ ಧ್ವನಿ ಎತ್ತಿರುವ ಹಿಂದೂ ಸಮಾಜದ ಮುಖಂಡ ಶರಣ್ ಪಂಪ್ ವೆಲ್, ದಿನೇಶ್ ಮೆಂಡನ್ ವೀಣಾ ಶೆಟ್ಟಿ ಸೇರಿದಂತೆ ಹಲವರ ಮೇಲೆ ಪೋಲಿಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ಪೊಲೀಸ್ ಇಲಾಖೆಯನ್ನ ಕಾಂಗ್ರೆಸ್ ಸರ್ಕಾರ ಹೈಜಾಕ್ ಮಾಡಿದ್ದು,  ಎಫ್ಐಆರ್ ದಾಖಲಿಸದೆ ಹೋದರೆ ಹಿರಿಯ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ಎಚ್ಚರಿಕೆಯನ್ನು ನೀಡಿ ತನಗೆ ಬೇಕಾದ ಹಾಗೆ ಕಾನೂನು ಮಾತ್ರವಲ್ಲ ಬಳಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಉಡುಪಿ ಘಟನೆಯ ವಿವರಗಳನ್ನು ದಾಖಲೆ ಸಮೇತ ರಾಜ್ಯದ ರಾಜ್ಯಪಾಲರಿಗೆ ಕರಾವಳಿ ಬಿಜೆಪಿ ಶಾಸಕರ ನಿಯೋಗ ಹಸ್ತಾಂತರಿಸಿದ್ದು ಪ್ರಕರಣದ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸುವಂತೆ ಸರಕಾರಕ್ಕೆ ಸೂಚಿಸುವಂತೆ ಒತ್ತಾಯವನ್ನ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ವಿಡಿಯೋ ಪ್ರಕರಣವನ್ನು ಎಸ್ ಐ ಟಿ ತನಿಖೆಗೆ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮಾಜಿ ಸಚಿವರು,ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.


ಈ ಸಂಧರ್ಭ ಮಂಗಳೂರು ಉತ್ತರ ಶಾಸಕ ಭರತ್‌ ಶಟ್ಟಿ,  ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ,ಉಡುಪಿ ಶಾಸಕ ಯಶ್ಪಲ್‌ ಸುವರ್ಣ, ಭೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌, , ಕುಂದಾಪುರ ಶಾಸಕ ಕಿರಣ್‌ ಕೊಡ್ಗಿ, ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಉಳೆಪಾಡಿ, ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top