ಪುಸ್ತಕ ಪರಿಚಯ: ಕೃಷ್ಣಪ್ರಜ್ಞೆಗೆ ಆರೋಹಣ

Upayuktha
0

ನಮ್ಮ ಭಾರತೀಯ ಸಂಸ್ಕೃತಿಯ ಜ್ಞಾನಭಂಡಾರವು ಅಪಾರ ವಿಫುಲ ಸಾಹಿತ್ಯ ಪರಂಪರೆಯಿಂದ ತುಂಬಿ ತುಳುಕುತ್ತಿದೆ. ಸಕಲ ಜೀವರಾಶಿಗಳ ಕ್ಷೇಮವೊಂದೇ ಈ ಎಲ್ಲ ಧರ್ಮ ಸಾಹಿತ್ಯದ ಮೂಲೋದ್ದೇಶ. ಸುಂದರ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ತಮ್ಮ ಅಪೂರ್ವ ಲೇಖನಿಯಿಂದ ಸಾರಸ್ವತ ಲೋಕದಲ್ಲಿ ಮನ್ನಣೆ ಗಳಿಸಿರುವ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರ ಪ್ರಸ್ತುತ ಕೃತಿ ‘ಕೃಷ್ಣನ ಹೆಸರೇ ಲೋಕಪ್ರಿಯ’ ದಲ್ಲಿ ಕೃಷ್ಣತತ್ವದ, ಮಹಿಮೆಯ ಸಂಗತಿಗಳು ಆಕೃತಿಗೊಂಡು ನೆಲೆನಿಂತಿವೆ. 

ಭಾಷಾಸು ಮುಖ್ಯ ಮಧುರಾ ದಿವ್ಯಾಗೀರ್ವಾಣಭಾರತೀ | ತಸ್ಮಾದ್ಧಿ ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಂ ||


ಸುಭಾಷಿತ ರತ್ನಬಾಂಢಾಗಾರ ಸಂಕಲನ ಗ್ರಂಥದ ಒಂದು ಮಾತಿದು. ಇದರಂತೆ ಭಾಷೆಗಳಲ್ಲಿ ಮಧುರ, ಮುಖ್ಯ ಆದದ್ದು ಸಂಸ್ಕøತಭಾಷೆ. ಅದರಿಂದ ಆ ಭಾಷೆಗೂ ಕಾವ್ಯ ಮಧುರ ಅದ್ದಕ್ಕಿಂತಲೂ ಸುಭಾಷಿತ ಮಧುರ. ಇಲ್ಲಿ ಸುಭಾಷಿತ ಎಂದರೆ, ಒಳ್ಳೆಯ ಮಾತು ಮೌಲ್ಯವುಳ್ಳದ್ದು, ವ್ಯಕ್ತಿಹಿತ- ಒಳಗೊಂಡಿದ್ದು, ಇದು ಸಂಸ್ಕøತಭಾಷೆಗೆ ಅನ್ವಯಿಸುವಂತೆಯೇ ತರುಣ ವಿದ್ವಾಂಸ ಬರಹದ ಕಲೆಯನ್ನು ರೂಢಿಸಿಕೊಂಡು ಬೆಳೆಯುತ್ತಿರುವ ಸಹೃದಯಿ ಡಾ|| ಗುರುರಾಜ ಪೋಶೆಟ್ಟಿಹಳ್ಳಿಯವರಿಗೆ ಅನ್ವಯಿಸುತ್ತದೆ.  ಸರಳ ನಿರೂಪಣೆ, ಸಹಜವಾಗಿ ಓದಿಸಿಕೊಂಡು ಹೋಗುವ ಧಾಟಿ, ಅಷ್ಟೇ ಗಂಭೀರವಾಗಿ ವಿಷಯ ಸಂವಹನಗೊಳಿಸುವ ಶೈಲಿಯಿಂದ ಶ್ರೀಮಂತವಾಗಿದೆ.


ಅವರು ಆಶಿಸಿರುವಂತೆ ಶಾಲೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ವಿದ್ಯಾರ್ಥಿಗಳನ್ನು ಸನ್ಮಾನಿಸುವ,  ಅಭಿನಂದಿಸುವ ಅವರಿಗೆ ಸಹಾಯಧನ ವಿತರಿಸುವ ಸಮಯದಲ್ಲಿ ಇಂತಹ ಪುಸ್ತಕವನ್ನು ಅವರ ಕೈಗೆ ನೀಡಿದಲ್ಲಿ ಅದು ಅವರ ಶ್ರೇಯೋಭಿವೃದ್ಧಿಗೆ ಪೂರಕವಾಗುವುದರಲ್ಲಿ ಸಂದೇಹವಿಲ್ಲ. ಪುಸ್ತಕದ ವಿನ್ಯಾಸ, ಮುದ್ರಣ ಬಹಳ ಸೊಗಸಾಗಿದ್ದು, ಅದರ ಹೂರಣವೂ ಅಷ್ಟೇ ಸಿಹಿಯಾಗಿದೆ.


ಕೃತಿ ವಿವರ 

ಕೃತಿಯ ಹೆಸರು: ಕೃಷ್ಣನ ಹೆಸರೇ ಲೋಕಪ್ರಿಯ

ಲೇಖಕರು: ಡಾ.ಗುರುರಾಜ ಪೋಶೆಟ್ಟ್ಟಿಹಳ್ಳಿ

ಪುಟ: 84

ಪ್ರಕಾಶಕರು: ಪ್ರಣವ ಮೀಡಿಯಾ ಹೌಸ್ ಪ್ರಕಾಶನ, ಬೆಂಗಳೂರು

ಸಂಪರ್ಕ: 90356 18076

*********


- ಅಶ್ವಿನಿ ಪ್ರಸಾದ 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top