ಆ.13: ನಯನ ರಂಗ ಮಂದಿರದಲ್ಲಿ 'ಮೈಕೋ ಶಿವಣ್ಣ ನೆನಪು-2023'

Chandrashekhara Kulamarva
0

ಬೆಂಗಳೂರು: ಆಗಸ್ಟ್‌ 13ರಂದು ಭಾನುವಾರ ಸಂಜೆ 5:00 ಗಂಟೆಗೆ ನಯನ ರಂಗ ಮಂದಿರದಲ್ಲಿ ಬೆಂಗಳೂರಿನ ರಂಗ ಚಂದಿರ ಟ್ರಸ್ಟ್ ವತಿಯಿಂದ ಎನ್‌.ಆರ್‌ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಕಾರ್ಮಿಕ, ರಂಗ ನಿರ್ದೇಶಕ, "ಮೈಕೋ ಶಿವಣ್ಣ ನೆನಪು" 2023 ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ. ಮಾತಾ ಮಂಜಮ್ಮ ಜೋಗತಿ ಜೀವನ ಆಧಾರಿತ ನಾಟಕ ಪ್ರದರ್ಶನವನ್ನು ಡಾಕ್ಟರ್ ಬೇಲೂರು ರಘುನಂದನ್ ನಿರ್ದೇಶನದಲ್ಲಿ ಅರುಣ್ ಕುಮಾರ್ ರವರು ಅಭಿನಯಿಸುತ್ತಾರೆ.


ಈ ನಾಟಕ ಪ್ರದರ್ಶನಕ್ಕೆ ಮುಖ್ಯ ಅತಿಥಿಗಳಾಗಿ: ಬಿಎಸ್ ನಾಗರಾಜ್, ಪ್ರೊ. ಎಸ್‌.ಜಿ ಸಿದ್ದರಾಮಯ್ಯ, ಆರ್ ಕೆ ಹೆಗಡೆ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕವಿ, ಚಿಂತಕ ಸುಬ್ಬು ಹೊಲೆಯಾರ್ ಅವರಿಗೆ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ರಂಗಾಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಂಗ ಅಭಿನಂದನೆ ನೆರವೇರಿಸಲು ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ನಾಡೋಜ ಡಾಕ್ಟರ್ ಸಿಎನ್ ಮಂಜುನಾಥ್. ನಿರ್ದೇಶಕರು ಜಯದೇವ ಹೃದ್ರೋಗ. ನೆರವೇರಿಸಲಿದ್ದಾರೆ.


ಅಲ್ಲದೆ ಸಂಜೆ 5ರಿಂದ 5 ಗಂಟೆಗೆ ಪದ ದೇವರಾಜ್ ತಂಡದವರಿಂದ ತತ್ವ ಪದ ಗಾಯನ ಹಮ್ಮಿಕೊಳ್ಳಲಾಗಿದೆ ಎಂದು ರಂಗಚಂದಿರ ಟ್ರಸ್ಟ್ ಕಾರ್ಯದರ್ಶಿ ಜಿಪಿಒ ಚಂದ್ರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
To Top