ಗುರುರಾಯರ ಸನ್ನಿಧಿಯಲ್ಲಿ ಅನನ್ಯ ಗಾಯನ ಸೇವೆ

Upayuktha
0

ಬೆಂಗಳೂರು: ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಪವಮಾನಪುರದ ಒಂದನೇ ಮುಖ್ಯರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 10, ಗುರುವಾರ ಸಂಜೆ ಏರ್ಪಡಿಸಿದ್ದ "ಹರಿದಾಸ ಮಂಜರಿ" ಗಾಯನ ಕಾರ್ಯಕ್ರಮದಲ್ಲಿ  ಕು|| ಅನನ್ಯ ಬೆಳವಾಡಿ ಅವರು "ವಂದಿಪೆ ನಿನಗೆ ಗಣನಾಥ" ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಆರಂಭಿಸಿ ದೇವರ ನಾಮಗಳ ಗಾಯನ ನಡೆಸಿಕೊಟ್ಟರು.


"ರಥವನೇರಿದ ರಾಘವೇಂದ್ರ", "ರೋಗಹರನೆ ಕೃಪಾಸಾಗರ", "ತುಂಗಾ ತೀರದಿ ನಿಂತ", "ಯಾಕೆ ಮೂಕನಾದ್ಯೋ", "ಮಾರುತಿಯೇ ಏಳೆಂದು", "ಎದ್ದುನಿಂತ ಹನುಮಂತ", "ಬಂದಾಳ್ ನೋಡೇ ಬಂದಾಳ್ ನೋಡೇ ಭಾಗ್ಯದ ದೇವಿ", "ನಾನೇನ ಮಾಡಿದೆನೋ", "ಕೈಯ್ಯ ತೋರೋ ಕರುಣಿಗಳರಸನೆ", "ನಂದತನಯ ಗೋವಿಂದ", "ದೃಷ್ಟಿ ನಿನ್ನ ಪಾದದಲ್ಲಿ", "ತಾರಕ್ಕ ಬಿಂದಿಗೆ", "ರಾಮ ಎಂಬ ಎರಡಕ್ಷರ", "ದಾಸನಾಗು ವಿಶೇಷನಾಗು" ಹಾಡುಗಳನ್ನು ಹಾಡಿ, ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.


ವಾದ್ಯ ಸಹಕಾರದಲ್ಲಿ ಅಮಿತ್ ಶರ್ಮಾ ಕೀ-ಬೋರ್ಡ್‌ ಹಾಗೂ ಸರ್ವೋತ್ತಮ ತಬಲಾ ವಾದನಗಳಲ್ಲಿ ಸಾಥ್ ನೀಡಿದರು. ಕೊನೆಯಲ್ಲಿ ಶ್ರೀಮಠದ ವ್ಯವಸ್ಥಾಪಕರು ಎಲ್ಲಾ ಕಲಾವಿದರಿಗೂ ಗುರುಗಳ ಪ್ರಸಾದ ನೀಡಿ, ಶಾಲು ಹೊದಿಸಿ ಗೌರವಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top