ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನ ವಿವಿಧೆಡೆಗಳಲ್ಲಿ ಯಶಸ್ವಿ ಅಭಿಯಾನ

Upayuktha
0

ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟಿ ರಾಷ್ಟ್ರೀಯ ಚಿಹ್ನೆಗಳ ಗೌರವ ಕಾಪಾಡಿ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟಿ ರಾಷ್ಟ್ರೀಯ ಚಿಹ್ನೆಗಳ ಗೌರವ ಕಾಪಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಂಗಳೂರಿನ ವಿವಿಧೆಡೆಗಳಲ್ಲಿ ಅಭಿಯಾನ ನಡೆಸಲಾಯಿತು. ಅಭಿಯಾನದ ಅಂತರ್ಗತ 30 ಕ್ಕೂ ಅಧಿಕ ಶಾಲೆಗಳಲ್ಲಿ ಮನವಿ ಸಲ್ಲಿಸಲಾಯಿತು. 15 ಕ್ಕೂ ಅಧಿಕ ಕಡೆಗಳಲ್ಲಿ ’ರಾಷ್ಟ್ರಧ್ವಜದ ಗೌರವ ಕಾಪಾಡಿ‘ ಈ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಪ್ರಬೋಧನೆ ಮಾಡಲಾಯಿತು. ಇದರ ಮೂಲಕ 3000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಬಾರಿಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜದ ಬಳಕೆ ಮಾಡುವುದಿಲ್ಲವೆಂದು ಪ್ರತಿಜ್ಞೆ ಸ್ವೀಕರಿಸಿದರು.

ಹಾಗೆಯೇ ಅಭಿಯಾನದ ಭಾಗವಾಗಿ ಇಂದು ನಗರದ ಗಾಂಧಿ ಬಜಾರ್ ಬಳಿ ಇರುವ ರಾಷ್ಟ್ರಧ್ವಜ ಮಾರಾಟ ಮಳಿಗೆಗಳಿಗೆ ತೆರಳಿ ಪ್ಲಾಸ್ಟಿಕ್ ಧ್ವಜಗಳ ಮಾರಾಟ ಮಾಡಬಾರದೆಂದು ಮನವಿ ಮಾಡಲಾಯಿತು. ಅಂಗಡಿ ಮಾಲೀಕರು ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡವುದಿಲ್ಲವೆಂದು ಸ್ಪಂದಿಸಿದರು.

ಈ ವೇಳೆ ರಾಷ್ಟ್ರೀಯ ಹಿಂದೂ ಪರಿಷತ್ತಿನ  ವಿಕ್ರಮ್ ಶೆಟ್ಟಿ,  ಸುರೇಶ್ ಗೌಡ, ಗಾಂಧಿ ಬಜಾರ್ ಅಸೋಸಿಯೇಶನ್ ಸದಸ್ಯ ವೆಂಕಟೇಶ್, ನ್ಯಾಯವಾದಿ ಮೋಹನ್ ಕುಮಾರ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.


‘ರಾಷ್ಟ್ರಧ್ವಜವು ರಾಷ್ಟ್ರದ ಆತ್ಮಾಭಿಮಾನವಾಗಿದೆ. 15 ಆಗಸ್ಟ್ ಹಾಗೂ 26 ಜನವರಿಯಂದು ಈ ರಾಷ್ಟ್ರಧ್ವಜವನ್ನು ಅಭಿಮಾನದೊಂದಿಗೆ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಇದೇ ಕಾಗದ/ಪ್ಲಾಸ್ಟಿಕ್‌ನ ಚಿಕ್ಕ ಚಿಕ್ಕ ರಾಷ್ಟ್ರಧ್ವಜಗಳು ರಸ್ತೆಗಳ ಮೇಲೆ, ಕಸದ ತೊಟ್ಟಿ ಮತ್ತು ಚರಂಡಿಗಳಲ್ಲಿ ಹರಿದ ಅವಸ್ಥೆಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ಪ್ಲಾಸ್ಟಿಕ್ ಧ್ವಜಗಳು ಕೂಡಲೇ ನಾಶವಾಗುವುದಿಲ್ಲ, ಆದುದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅನಾದರವಾಗುವುದನ್ನು ನೋಡಬೇಕಾಗುತ್ತದೆ. ಅದಕ್ಕಾಗಿ ನಾವೆಲ್ಲರೂ ನಮ್ಮ ರಾಷ್ಟ್ರ ಧ್ವಜದ ಅಪಮಾನವನ್ನು ತಡೆದು ಮತ್ತು ರಾಷ್ಟ್ರ ಧ್ವಜದ ಗೌರವವನ್ನು ಕಾಪಾಡೋಣ‘ ಎಂದು ಸ್ವಾತಂತ್ರ್ಯೋತ್ಸವದ ನಿಮಿತ್ತ ಅಭಿಯಾನದ ಮೂಲಕ ರಾಷ್ಟ್ರದ ನಾಗರಿಕರಿಗೆ ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top