6 ರಂದು ನೃತ್ಯ ಕುಸುಮಾಂಜಲಿ ಸ್ತುತಿಶ್ರೀ ಭರತನಾಟ್ಯ ರಂಗ ಪ್ರವೇಶ

Upayuktha
0

ಬೆಂಗಳೂರು:  ನಟನ ತರಂಗಿಣಿ ಕಲಾ ಶಾಲೆಯ ಗುರು  ವೈ.ಜಿ. ಶ್ರೀಲತಾ ಅವರ ಶಿಷ್ಯೆ ಸ್ತುತಿಶ್ರೀ ತಿರುಮಲೈ ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ. ‘ನೃತ್ಯ ಕುಸುಮಾಂಜಲಿ’ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಜಯನಗರ 8ನೇ ಬಡಾವಣೆಯ ಜೆಎಸ್‌ಎಸ್ ಸಭಾಂಗಣದಲ್ಲಿ ಆ. 6ರ ಸಂಜೆ 5.30ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಬೆಂಗಳೂರಿನ ಹಾರ್ಡ್‌ವೇರ್ ಇಂಜಿನಿಯರ್ ವೆಂಕಟೇಶ್ ಮತ್ತು ಮಾಧುರಿ ಮೈಸೂರು ಅವರ ಪುತ್ರಿ ಸ್ತುತಿಶ್ರೀ ಅವರು ಎ.ಎಸ್.ಸಿ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ವಿದುಷಿಯರಾದ ರಂಜನಿ ಉಮೇಶ್, ರೇವತಿ ನರಸಿಂಹನ್ ಅವರಲ್ಲಿ ನೃತ್ಯ ಕಲಿತು ಇದೀಗ ಬಹುಶ್ರುತ ವಿದುಷಿ ವೈ.ಜಿ. ಶ್ರೀಲತಾ ಅವರ ಕಲಾ ಶಾಲೆಯಲ್ಲಿ ಉನ್ನತ ಅಭ್ಯಾಸ ಮುಂದುವರಿಸಿದ್ದಾರೆ.


‘ನೃತ್ಯ ಕುಸುಮಾಂಜಲಿ’ ಶೀರ್ಷಿಕೆಯಡಿ ಯುವ ಕಲಾವಿದೆ  ಸ್ತುತಿಶ್ರೀ ಹೊಸ ಭರವಸೆಯನ್ನು ಮೂಡಿಸಲು ಪದಾರ್ಪಣೆ ಮಾಡು ತ್ತಿರುವ ಸಂದರ್ಭದಲ್ಲಿ ಮೈಸೂರಿನ ವಿದುಷಿ  ಕೃಪಾ ಫಡ್ಕೆ, ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ಪ್ರವಚನ ರತ್ನ ವಿದ್ವಾನ್ ಜಿ.ಎನ್. ರಾಮಪ್ರಸಾದ್, ಬೇಕಲ್ನ  ವಿದ್ವಾನ್ ವಿಷ್ಣು ಪ್ರಸಾದ್ ಹೆಬ್ಬಾರ್ ಅತಿಥಿಗಳಾಗಿ ಆಗಮಿಸಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
To Top