ಅಮರ ವಾಜಪೇಯಿ

Upayuktha
0

 


ದಲಾವಣೆ ಜಗದ ನಿಯಮ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾರತದ ರಾಜಕೀಯ ವ್ಯವಸ್ಥೆಯು ಹಲವು ಏಳು ಬೀಳುಗಳನ್ನು ಕಾಣುತ್ತಿವೆ. ಇದರ ಉಗಮವನ್ನು ನಾವು ಸ್ವತಂತ್ರ ಪೂರ್ವದಿಂದಲೂ ಕಾಣಬಹುದು .ಆದರೆ ಹಿಂದಿನ ಮತ್ತು ಇಂದಿನ ರಾಜಕೀಯ ವ್ಯವಸ್ಥೆಗೆ ಅಜಗಜಾಂತರ  ವ್ಯತ್ಯಾಸವಿದೆ. ಈ ವ್ಯವಸ್ಥೆಯು ಮಲಿನಗೊಳ್ಳುವುದು ಸಹಜ, ದಕ್ಷ ನಾಯಕರಿಂದ ಮಾತ್ರವೇ ಮಲಿನಗೊಂಡ ರಾಜಕೀಯ ವ್ಯವಸ್ಥೆಯನ್ನು ಸರಿದೂಗಿಸಿ ,ದೇಶವನ್ನು ಮುನ್ನಡೆಸಲು ಸಾಧ್ಯ. ಅಂತಹ ಅಪ್ರತಿಮ ನಾಯಕರ ಸಾಲಿನಲ್ಲಿ ಮಿನುಗುವವರು, ಅಟಲ್ ಬಿಹಾರಿ ವಾಜಪೇಯಿ.


"ರಾಜಕೀಯ ಆಟ ಇದ್ದೇ ಇರುತ್ತದೆ. ಸರಕಾರ ಬರಬಹುದು, ಹೋಗಬಹುದು, ಆದರೆ ದೇಶದ ಪ್ರಜಾಪ್ರಭುತ್ವ ಶಾಶ್ವತ."


ಇಂದು ಭಾರತವನ್ನು "ಪ್ರಜಾಪ್ರಭುತ್ವದ ತಾಯಿ" ಎಂದು ಕರೆಯುತ್ತಾರೆ. ಆದರೆ ಇದನ್ನು ಹಲವು ವರ್ಷಗಳ ಹಿಂದೆಯೇ ಮನಗಂಡ ವಾಜಪೇಯಿಯವರು , ಈ ಮೇಲಿನಂತೆ ಲೋಕಸಭೆಯಲ್ಲಿ ನುಡಿದು, ಅವರು ಪ್ರಜಾಪ್ರಭುತ್ವದ ಮೇಲೆ ಇಟ್ಟಿದ್ದ ನಂಬಿಕೆಯನ್ನು ಎತ್ತಿತೋರಿಸಿದರು . ತಮ್ಮ ಅಪ್ರತಿಮ ಕೆಲಸ ಕಾರ್ಯಗಳ ಮೂಲಕ ಭಾರತೀಯ ರಾಜಕೀಯದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದರು.


ಅಟಲ್ ಬಿಹಾರಿ ವಾಜಪೇಯಿ ಅವರು 25 ಡಿಸೆಂಬರ್ 1924ರಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣದೇವಿ ದಂಪತಿಗಳ ಪುತ್ರನಾಗಿ  ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದರು. ಪ್ರೌಢ ಶಿಕ್ಷಣವನ್ನೇ ಪೂರ್ಣಗೊಳಿಸುವುದು ದೊಡ್ಡ ಸವಾಲು ಎನಿಸಿದ ಆ ಕಾಲದಲ್ಲಿ ಅವರು ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ರಾಷ್ಟ್ರೀಯ ಸ್ವಯಂಸೇವಕಸಂಘಕ್ಕೆ ಪಾದರ್ಪಣೆ ಮಾಡಿ ದೇಶ ಸೇವೆಯೇ ಪಣತೊಟ್ಟರು. ಸಾರ್ವತ್ರಿಕ ಚುನಾವಣೆಯಲ್ಲಿ ಗ್ವಾಲಿಯರ್ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಲೋಕಸಭೆಯ ಕದ ತೆರೆದರು. ಇವರು ಭಾರತದ 10ನೇ ಪ್ರಧಾನಮಂತ್ರಿಯಾಗಿ 1996ರಲ್ಲಿ ಆಯ್ಕೆ ಆದರು. ಆದರೆ, ರಾಜಕೀಯ ಷಡ್ಯಂತ್ರದಿಂದಾಗಿ 13 ದಿನದಲ್ಲೇ ರಾಜೀನಾಮೆ ನೀಡಿದರು. ನಂತರ ದ್ವಿತೀಯ ಬಾರಿಗೆ 1998ರಲ್ಲಿ 13 ತಿಂಗಳ ಕಾಲ ಪ್ರಧಾನಮಂತ್ರಿಯಾಗಿ  ದೇಶ  ಸೇವೆಯನ್ನು ಮಾಡಿದರು. 1999ರ ನಂತರ ಭಾರತ ಸುವರ್ಣ ಶಕೆ ಪ್ರಾರಂಭವಾಯಿತು, ವಾಜಪೇಯಿ ಅವರು ತೃತೀಯ ಬಾರಿಗೆ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದರು.


ಇಂದು ಭಾರತವನ್ನು ವಿಶ್ವಗುರು ಎಂದು ಕರೆಯುವಲ್ಲಿ ಇವರ ಪಾತ್ರ  ಮುಖ್ಯವಾದುದು. ಶಿಕ್ಷಣವು ಮಾನವನ ಮೂಲಭೂತ ಅಗತ್ಯವೆಂದು ಅರಿತ ಇವರು "ಸರ್ವ ಶಿಕ್ಷಣ ಅಭಿಯಾನ"ವನ್ನು ಪ್ರಾರಂಭಿಸಿದರು. ಭಾರತದ ಸ್ವಂತ ತಂತ್ರಜ್ಞಾನದ ಮೂಲಕ ಅಣುಬಾಂಬ್ ಸಿದ್ಧಪಡಿಸಿ ಜಗತ್ತಿಗೆ ಭಾರತದ ಹಿರಿಮೆಯನ್ನು ಸಾರಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಥಮ ಬಾರಿಗೆ ಚುನಾವಣೆ ನಡೆಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಅಂತರಾಷ್ಟ್ರೀಯ ಸಂಬಂಧದ ಮಹತ್ವವನ್ನು ತಿಳಿದಿದ್ದ ಇವರು ,ಶತ್ರು ದೇಶಗಳ ಜೊತೆ ಶಾಂತಿಯುತ ಸಂಬಂಧ ಬೆಳೆಸಿ ,ಸೌಹಾರ್ದತೆಯನ್ನು ಕಾಪಾಡಿದರು. 1999 ರಲ್ಲಿ ಕಾರ್ಗಿಲ್ ಯುದ್ಧವನ್ನು ಭಾರತ ಕಂಡಾಗ ,ಎದೆ ಗುಂದದೆ ಯುದ್ಧಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿ "ಆಪರೇಷನ್ ವಿಜಯ"ದಲ್ಲಿ ಭಾರತವು ವಿಜಯಪತಾಕೆ ಹಾರಿಸುವಲ್ಲಿ ಇವರ ಪಾತ್ರವು ಮುಖ್ಯವಾದದ್ದು.

"ಭಾರತ ಜಾತ್ಯತೀತ ದೇಶ ಅಲ್ಲದೆ ಹೋದರೆ ಭಾರತ ಭಾರತವೇ ಅಲ್ಲ"

ತಮ್ಮ ಧರ್ಮವಲ್ಲದೆ, ಇತರ ಧರ್ಮಗಳ  ಮೇಲೆಯೂ ಅಪಾರವಾದ ಗೌರವ ಉಳ್ಳವರಾಗಿದ್ದರು. ಅವರು ವಿರೋಧಪಕ್ಷದವರೊಂದಿಗೂ ಸೌಮ್ಯತೆಯಿಂದ ವರ್ತಿಸುತ್ತಿದ್ದರು ,ಗೌರವ ನೀಡುತ್ತಿದ್ದರು ಅವರ ಈ ಉತ್ತಮ ನಡವಳಿಕೆಯಿಂದ ಅವರಿಗೆ ಶತ್ರುಗಳೇ ಇರಲಿಲ್ಲ. ಹಾಗಾಗಿ ಜಗವು ಅವರನ್ನು "ಅಜಾತಶತ್ರು" ಎಂದು ಕರೆಯಿತು. ಇವರು ರಾಜಕೀಯ ನಾಯಕರಲ್ಲದೇ ಒಬ್ಬ ಉತ್ತಮ ಕವಿಯು ಆಗಿದ್ದರು .ಅವರು ಸುಮಾರು 20 ಪುಸ್ತಕಗಳನ್ನು ರಚಿಸಿದ್ದಾರೆ. ಇವರು ದೇಶಕ್ಕೆ ನೀಡಿದ ಕೊಡುಗೆಗಳಿಗಾಗಿ ಮತ್ತು ರಾಜಕೀಯ ಚಾಣಕ್ಯತನಕ್ಕೆ ಭಾರತ ಸರಕಾರವು ಇವರಿಗೆ ಶ್ರೇಷ್ಠ ನಾಗರಿಕ ಪ್ರಶಸ್ತಿ "ಭಾರತರತ್ನ"ವನ್ನು ನೀಡಿ ಗೌರವಿಸಿತು. 2014ರಲ್ಲಿ ಭಾರತ ಸರ್ಕಾರವು ಅವರ ಹುಟ್ಟುಹಬ್ಬವನ್ನು"GOOD GOVERNANCE DAY" ಎಂದು ಆಚರಿಸುವುದಾಗಿ ಘೋಷಿಸಿತ್ತು ,ಇದು ಇವರ ಜೀವನ ಸಾಧನೆಗೆ ದೊರೆತ ಇನ್ನೊಂದು ಗರಿ  . ಆಗಸ್ಟ್ 16 , 2018ರಲ್ಲಿ ತಮ್ಮ ಆದರ್ಶಗಳನ್ನು ನಮಗೆ ದಾರೆ ಏರೆದು  ಇಹಲೋಕವನ್ನು ತ್ಯಜಿಸಿದರು.


ವಾಜಪೇಯಿಯವರು ದೇಶ ಕಂಡ ಪ್ರಾಮಾಣಿಕ ಮತ್ತು ದಕ್ಷ ನಾಯಕ, ಇವರು ರಾಜಕೀಯ ನಾಯಕರಾಗಿ ಅಲ್ಲದೆ ಒಬ್ಬ ವ್ಯಕ್ತಿಯಾಗಿಯೂ ಬಹಳ ಉತ್ತಮರು. ತನ್ನೊಂದಿಗೆ ಎಲ್ಲರನ್ನು ಬೆಳೆಸಬೇಕು ಎಂಬ ಆಶಯ ಹೊಂದಿದ ವ್ಯಕ್ತಿತ್ವ ಅವರದು . ಇವರು ನಮ್ಮಿಂದ ದೂರವಾಗಿ 5 ವರ್ಷಗಳೇ ಕಳೆದರು ಅವರ ವ್ಯಕ್ತಿತ್ವವು ಶಾಶ್ವತವಾಗಿದೆ .ಇಂದು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಮತ್ತು ರಾಜಕೀಯ ನೀತಿಗಳಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ.

                                                            


ಕೃತಿಕಾ ಪುತ್ತಿಗೆ 

ದ್ವಿತೀಯ ಬಿಎ

 ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ )  ಪುತ್ತೂರು


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top