ಇವರು ನಾಗಿಣಿ ಎಸ್. ಶ್ರೀಮತಿ ಗೀತಾ ಕೃಷ್ಣ ದಂಪತಿಯ ಸುಪುತ್ರಿ.ಆಗಸ್ಟ್ 11 ಕುಬಂನೂರ್ ಗ್ರಾಮದಲ್ಲಿ ಜನಿಸಿದ ಇವರು ತಂದೆ ಕೂಲಿ ತಾಯಿ ಬೀಡಿಯನ್ನು ಕಟ್ಟಿ ಮಗಳಿಗೆ ಉತ್ತಮ ಶಿಕ್ಷಣವನ್ನು ನೀಡಿದ್ದಾರೆ. ಅಕ್ಕನ ಜೊತೆಗೆ ಶಾಲೆಗೆ ಹೋಗುತ್ತಾ ಇದ್ದ ಇವರು ಕನ್ನಡ ಭಾಷೆ ಎಷ್ಟೇ ಪ್ರಯತ್ನಿಸಿದರೂ ಬರುತ್ತಿರಲಿಲ್ಲವಂತೆ. 5 ನೇ ತರಗತಿಗೆ ತಲುಪಿದಾಗ ಕ್ಲಾಸ್ ಗೆ ಫಸ್ಟ್ ಬಂದ್ರು ಅದೇ ಮುಂದುವರೆದು ಪಿಜಿಯವರೆಗೆ ಟಾಪರ್ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಜೀವನದಲ್ಲಿ ಅನೇಕ ಅಡೆತಡೆಗಳು ಎದುರಾಗಬಹುದು. ಬಡತನ, ಅನಾರೋಗ್ಯ, ಸೋಲು ಕಷ್ಟಗಳಿಗೆ ಹೆದರದೆ -ಅಳುಕದೆ ನಿರಂತರ ಪರಿಶ್ರಮದಿಂದ ಮಹಾನ್ ವ್ಯಕ್ತಿಗಳಾದವರು ಅನೇಕರಿದ್ದಾರೆ.
ಉದಾಹರಣೆ ನಮ್ಮ ದೇಶ ಕಂಡಂತಹ ಪ್ರತಿಭಾವಂತ ಕ್ರಿಕೆಟಿಗ ಬಿ. ಎಸ್ ಚಂದ್ರಶೇಖರ್ ಅವರ ಕೈ ಪೋಲಿಯೋ ಪೀಡಿತವಾಗಿದ್ದರೂ ಅವರು ತಮ್ಮ ನಿರಂತರ ಪರಿಶ್ರಮ ಅಭ್ಯಾಸದಿಂದ ವಿಶ್ವದ ಶ್ರೇಷ್ಠ ಬೌಲರ್ ಆಗಲು ಸಾಧ್ಯವಾಯಿತ್ತು. ಎ. ಪಿ. ಜೆ ಅಬ್ದುಲ್ ಕಲಾಂ ಬಾಲ್ಯದಲ್ಲಿ ಮನೆ ಮನೆಗೆ ಪೇಪರ್ ಹಾಕಿಯೇ ವಿಜ್ಞಾನಿಯಾದದ್ದು, ರಾಷ್ಟ್ರಪತಿಯಾದದ್ದು. ಎ. ಪಿ. ಜೆ ಅಬ್ದುಲ್ ಕಲಾಂ ಒಂದು ಮಾತು ಹೇಳಿದ್ರು "ನಮ್ಮ ಜೀವನವೆಂಬುದು ಒಂದು ಖಾಲಿ ಹಾಳೆ ಅದರಲ್ಲಿ ನಮ್ಮ ವ್ಯಕ್ತಿತ್ವದ ಚಿತ್ರಣವನ್ನು ನಾವೇ ಚಿತ್ರಿಸಿಕೊಳ್ಳುತ್ತೇವೆ. ನಮ್ಮ ಜೀವನದ ಶಿಲ್ಪಿಗಳು ನಾವೇ ಎಂದು. "ಟಾಪರ್"ಎನ್ನುವ ಪಟ್ಟವನ್ನು ಪಡೆಯಬೇಕಾದರೆ ನಿರಂತರ ಅಭ್ಯಾಸ, ಪರಿಶ್ರಮದಿಂದ ಮಾತ್ರ ಸಾಧ್ಯ.ಕಾಲೇಜು ದಿನಗಳಲ್ಲಿ ಕ್ವಿಜ್ ಕಾಂಪಿಟೇಷನ್ ಗೆ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದ ಇವರು ಬಾಲ್ಯದಿಂದಲೇ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಛಲ ಮತ್ತು ಪ್ರಯತ್ನದಿಂದ ಕಂಡಂತಹ ಕನಸನ್ನು ನನಸಾಗಿಸಿದ್ದಾರೆ.
ಮನುಷ್ಯನಾಗಿ ಹುಟ್ಟಿದ ಮೇಲೆ ಜಗದಲ್ಲಿ ಸಾಧಿಸು ಏನಾದರೂ ಛಲದಲ್ಲಿ..ಗುರಿ ಸೇರಿಸುವುದು ಅದೇ.ಸರಳ ಹಾಗೂ ಅಪರೂಪದ ಮಾನವೀಯ ಮೌಲ್ಯಗಳನ್ನು ಹೊಂದಿರುವ ಇವರು ಪ್ರಾಥಮಿಕ ಶಿಕ್ಷಣದಿಂದಲೇ "ಟಾಪರ್ "ಎನ್ನುವ ಪಟ್ಟವನ್ನು ಪಡೆದುಕೊಂಡಿದ್ದಾರೆ.ಇವರು ಪ್ರಾಥಮಿಕ ಶಿಕ್ಷಣವನ್ನು ಕುಬಂನೂರ್ ನಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಧರ್ಮತಡ್ಕ, ಪಿ.ಯು. ಸಿ ಶಿಕ್ಷಣ ಸರಕಾರಿ ಕಾಲೇಜು ಕನ್ಯಾನ, ಡಿಗ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ದಲ್ಲಿ ಮುಗಿಸಿ ಮುಂದಿನ ಉನ್ನತ ಶಿಕ್ಷಣವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯಲ್ಲಿ ಪೂರ್ಣಗೊಳಿಸಿದ್ದರು. ಪ್ರಸುತ್ತ ಇವರು ಇಂಗ್ಲಿಷ್ ಮೀಡಿಯಂ ಸ್ಕೂಲ್ ಶಿರಿಯದಲ್ಲಿ ಸಮಾಜಶಾಸ್ತ್ರ ಶಿಕ್ಷಕಿಯಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.
"Nothing is impossible success is never ending, failure is not final try and try again "ಎಂಬಂತೆ ಛಲ ಬಿಡದೆ ಕಂಡಂತಹ ಕನಸನ್ನು ನನಸಾಗಿಸಿದ ಇವರು ಬಿಡುವಿನ ಸಮಯದಲ್ಲಿ ಕಥೆಯನ್ನು ಓದುವ ಸಣ್ಣ ಕಥೆಯನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.ಗಾಂಧೀಜಿ ಹೇಳಿದ ಮಾತಿನಂತೆ ಪುಸ್ತಕ ಓದುವ ಹವ್ಯಾಸವುಳ್ಳವನು ಎಲ್ಲಿ ಹೋದರೂ ಸಂತೋಷವಾಗಿರಬಲ್ಲ. ಗೆಲುವು ಅರಸಿ ಬರುವುದು ನಿನ್ನ ಹಿಂದೆ ಆದರೆ ಗುರಿ ತಲುಪುವರೆಗೆ ವಿಶ್ರಾಂತಿ ಪಡೆಯದಿರು. ಇನ್ನಷ್ಟು ಯಶಸ್ಸು ಕಾಣಲಿ ಎನ್ನುವುದೇ ನನ್ನ ಆಶಯ.ಇವರ ಮುಂದಿನ ಉಜ್ವಲ ಭವಿಷ್ಯಕ್ಕೆ ನನ್ನ ಪ್ರಜ್ವಲ ಹಾರೈಕೆಗಳು.
- ರಮ್ಯ ಎನ್ ನೆಕ್ಕರಾಜೆ ವೀರಕಂಭ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ