ಕೆ.ಎಲ್.ಕುಂಡಂತಾಯರ 'ನೇಮನಿಷ್ಠೆಯ ಹಬ್ಬಗಳು' ಪುಸ್ತಕ ಬಿಡುಗಡೆ

Chandrashekhara Kulamarva
0

ಅದಮಾರು:  ನಮ್ಮ ಹಬ್ಬಗಳ ಆಚರಣೆಯಲ್ಲಿ ಸಂಸ್ಕೃತಿಯ ಅನಾವರಣ ಇದೆ.ಇಂತಹ ಹಬ್ಬಗಳು ಸನ್ನಿಹಿತವಾಗುವ ವೇಳೆ ಮನೆಯ ಹಿರಿಯರು ಆಚರಣೆ ವಿಧಾನ ಹಾಗೂ ಅವುಗಳ ಮಹತ್ವವನ್ನು ಮನೆಯ ಮಕ್ಕಳಿಗೆ ವಿವರಿಸಬೇಕಾದ ಅಗತ್ಯವಿದೆ ಎಂದು ನಿವೃತ್ತ ಪಾಂಶುಪಾಲ ಬಿ.ಆರ್.ನಾಗರತ್ನ ಅವರು ಅಭಿಪ್ರಾಯಪಟ್ಟರು.

        

ಅವರು ಅದಮಾರಿನ ಸುದರ್ಶನ ನಿಲಯದಲ್ಲಿ ಕೆ.ಎಲ್.ಕುಂಡಂತಾಯರ 'ನೇಮನಿಷ್ಠೆಯ ಹಬ್ಬಗಳು' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.


ತೊಂಬತ್ತಾರರ ಹರೆಯದ ನಿವೃತ್ತ ಶಿಕ್ಷಕ,ಶಿಕ್ಷಣ ಪ್ರೇಮಿ  ವೈ.ಎಂ.ಶ್ರೀಧರ ರಾವ್ ,ಪುಸ್ತಕದ ಪ್ರಕಾಶಕರಾದ ಕಿನ್ನಿಗೋಳಿಯ ಗಾಯತ್ರೀ ಪ್ರಕಾಶನ ಸಂಸ್ಥೆಯ ಸಚ್ಚಿದಾನಂದ ಉಡುಪ,ಗುರುರಾಜ ಮಂಜಿತ್ತಾಯ,ಉದ್ಯಮಿ‌ ಸತೀಶ ಕುಂಡಂತಾಯ,


ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್. ಉಪಸ್ಥಿತರಿದ್ದರು. ಕೆ.ಎಲ್.ಕುಂಡಂತಾಯ ಪ್ರಸ್ತಾವಿಸಿದರು, ಸುದರ್ಶನ ಅವರು ಸ್ವಾಗತಿಸಿ,ವಂದಿಸಿದರು.

ಅದಮಾರು ಯುವಕ ಸಂಘದ ಅಧ್ಯಕ್ಷ ಸಂತೋಷ ಜೆ.ಶೆಟ್ಟಿ ಪಾಲ್ಗೊಂಡಿದ್ದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
To Top