ಬಾಲ್ಯ ಎನ್ನುವುದು ಪ್ರತಿಯೊಬ್ಬರಿಗೂ ಮರುಕಳಿಸುವ ಪಿಡುಗು. ಮನುಜ ಎಂದ ಮೇಲೆ ತಾನು ಕಳೆದ ಕ್ಷಣವೆಲ್ಲವೂ ವೃದ್ಧಾಪ್ಯ ಬಂದು ಮರಣದವರೆಗೂ ನೆನಪಾಗುತ್ತಿರುತ್ತದೆ ಇದೇ ಬಹಳ ವಿಶೇಷ. ಮೊದಲಿಗೆ ನೆನಪಿಗೆ ಬರುವುದು ವರ್ಷ ಕಳೆದಾಗ ಎದ್ದು ಬಿದ್ದುಕೊಂಡು ನಡೆಯುವಾಗ ಮಗು ಬೀಳುತ್ತೆ ಎನ್ನುವ ಕೂಗಿ ನೊಂದಿಗೆ ಓಡೋಡಿ ಬರುವ ಮನೆಯವರ ಇಂದು ನೋಡಿದರೆ ನಿಲ್ಲದಷ್ಟು ನಗು ಬರುತ್ತದೆ. ಅದರೊಂದಿಗೆ ತೊದಲು ನುಡಿಯಲ್ಲಿ ನಮಗೆ ಬೇಕಾದನ್ನು ಹೇಳಿದರೆ ಅದು ಮನೆಯವರಿಗೆ ಅರ್ಥವಾಗದೆ ಇದ್ದಾಗ ಬರುತ್ತಿದ್ದ ಕೋಪಕ್ಕೆ ಮನೆಯವರು ಯಾರು ಅಲ್ಲಿ ನಿಲ್ಲಬೇಕೆಂದು ಇರಲಿಲ್ಲ. ಕೈಗಳಿಗೆ ಏನೆಲ್ಲ ಸಿಗುತ್ತದೆಯೋ ಅದನ್ನೆಲ್ಲ ಬಿಸಾಡಿಕೊಂಡು ಕಿರುಚಾಟದಲ್ಲಿಯೇ ಇರುತ್ತಿದ್ದೆನು. ಇಂದು ಇದೆಲ್ಲಾ ನೆನಪಾದರೆ ನಾನು ಹಾಗೆ ಇದ್ದೇಯಾ ಎಂದು ನಾಚಿಕೆಗೆ ಒಳಗಾಗುತ್ತೇನೆ.
ಇದರೊಂದಿಗೆ 5 ವರ್ಷ ಆಗುತ್ತಿದ್ದಂತೆ ಶಾಲೆಗೆ ಸೇರಿಸುತ್ತಾರೆ ಅಲ್ಲಿ ಹೇಗೆಂದರೆ ಯಾರು ಏನು ಎಂದು ಅರಿವಿರುವುದಿಲ್ಲ ಹುಡುಗ ಹುಡುಗಿಯರೆನ್ನದೆ ಏಕ ಬಿಟ್ಟಿಯಾಗಿ ಇರುತ್ತಿದ್ದೆವು ಅಂದಿನ ಗೆಳೆಯರು ಹೆಚ್ಚೆಂದರೆ 7ನೇ ತರಗತಿ ಇಲ್ಲವೋ 10ನೇ ತರಗತಿಯವರಿಗೆ ಜೊತೆ ಇರುತ್ತೇವೆ ತದನಂತರ ಕಾಲೇಜ್ ಎಂದು ಬಂದಾಗ ಜೊತೆ ಇರುವುದು ಒಬ್ಬ ಇಬ್ಬರು ಅಷ್ಟೇ ಇದ್ದರೂ ಮೊದಲಿನ ತರಹ ಯಾವುದೇ ಮಾತು ಕಥೆ ಇರುವುದಿಲ್ಲ.
ಪ್ರೌಢಾವಸ್ಥೆಯ ಬಿಡುವಾಗ ನಾವು ತೊರೆದ ಗೆಳೆಯರು ಮುಂದೊಂದು ದಿನ ಎಲ್ಲೋ ಒಂದು ಕಡೆ ಅಪರಿಚಿತರಂತೆ ಭೇಟಿ ಆಗುತ್ತೇವೆ. ಮಾತನಾಡುತ್ತಾ ಬಾಲ್ಯದ ಗೆಳೆಯರು ಎಂದು ಮರುಕಳಿಸುವುದು ಸಹಜ ಕೆಲವೇ ಜನರಿಗೆ ಹಾಗೆ ಮರುಕಳಿಸಿದಾಗ ಆಗುವ ಸಂತೋಷವಿದೆಯಲ್ಲ ಅದನ್ನು ವರ್ಣಿಸಲು ಸಾಧ್ಯವಿಲ್ಲ.
ಅಚಾನಕವಾಗಿ ಭೇಟಿಯಾದ ಗೆಳೆಯರೊಂದಿಗೆ ಯಾವುದಾದರೂ ಸ್ಥಳದ ವೀಕ್ಷಣೆ ಮಾಡಬೇಕು ಅಂದಿನಂತೆಯೇ ಆಟವಾಡುತ್ತ ದಿನ ಕಳೆಯಬೇಕು ಎಂದೆನಿಸಿದರು ನಮಗೆ ಹಾಗೆ ಇರಲು ಸಾಧ್ಯವಾಗುವುದಿಲ್ಲ ಯಾಕೆಂದರೆ ಹಾಗೆ ಇರುವ ವಯಸ್ಸು ನಮ್ಮದಾಗಿರುವುದಿಲ್ಲ.
ಬಾಲ್ಯದ ನೆನಪುಗಳು ಮರುಕಳಿಸಿ ದಂತೆ ನಾವು ನಮ್ಮನ್ನೇ ಮರೆತು ಬಿಡುತ್ತೇವೆ ಯಾಕೆಂದರೆ ಅಷ್ಟು ಆಳವಾಗಿ ಅದರಲ್ಲಿ ಮುಳುಗಿ ಹೋಗಿರುತ್ತೇವೆ.
ಮದುವೆ ವಯಸ್ಸು ಬಂದಾಗಂತೂ ಗೆಳೆಯರನ್ನು ಆಹ್ವಾನಿಸಲು ಪಡುವ ಕಷ್ಟವಿದೆಯಲ್ಲ ಅದಂತೂ ಅಷ್ಟಿಷ್ಟು ಅಲ್ಲ ಯಾಕಂದರೆ ಎಲ್ಲರದ್ದು ದೂರವಾಣಿ ಸಂಪರ್ಕವಿರುವುದಿಲ್ಲ ಎಲ್ಲಿದ್ದಾರೆ ಹೇಗಿದ್ದಾರೆ ಇದು ಗೊತ್ತಿರುವುದಿಲ್ಲ.
ಸಂಪರ್ಕದಲ್ಲಿರುವ ಗೆಳೆಯರೊಂದಿಗೆ ಕೇಳಿಕೊಳ್ಳುತ್ತಾ ಕರೆಸಿಕೊಳ್ಳಲು ಪ್ರಯತ್ನಿಸುತ್ತೇವೆ ಆದರೂ ಎಲ್ಲರನ್ನು ಭೇಟಿಯಾಗಲು ಸಾಧ್ಯವಿಲ್ಲದೆ ಕೆಲವರಿಗೆ ಮಾತ್ರ ತಿಳಿದಂತೆ ಮದುವೆಯಾಗುತ್ತೇವೆ .
ವೃದ್ಧಾಪ್ಯ ಬಂದಾಗ ನಮ್ಮ ಬಾಲ್ಯದ ಸಿಹಿ ಕಹಿ ನೆನಪುಗಳ ಮಕ್ಕಳು,ಮೊಮ್ಮಕ್ಕಳೊಂದಿಗೆ ಹಂಚಿಕೊಳ್ಳುವುದರಲ್ಲಿ ಬಹಳ ಸಂತೋಷವಿದೆ ಬಾಲ್ಯದ ನೆನಪಿಗೆ ನಮ್ಮೆಲ್ಲಾ ನೋವು ಮರೆಸುವ ಶಕ್ತಿ ಇದೆ ಎನ್ನಬಹುದು.
-ಅನನ್ಯ ಎಚ್ ಸುಬ್ರಹ್ಮಣ್ಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ