ಶಿಕ್ಷಣವೆಂಬುದು ಬದುಕಿನ ಪ್ರಮುಖ ಘಟ್ಟ. ಅದು ನಮ್ಮನ್ನು ಜೊತೆಗೆ ಕರೆದೊಯ್ಯುವ ಪಥ, ನಮ್ಮ ಬೆಳವಣಿಗೆಯೊಂದಿಗೆ ಶಿಕ್ಷಣದ ಪ್ರಗತಿಯು ನಡೆಯುತ್ತದೆ. ನಾವು ವರ್ಷ ಕಳೆದ ಹಾಗೆ ಮುಂದಿನ ತರಗತಿಗೆ ಉತ್ತೀರ್ಣರಾಗುತ್ತೇವೆ.
ಬಾಲ್ಯವು ಜಾರಿ ಪ್ರೌಢಶಾಲಾ ಶಿಕ್ಷಣ ಮುಗಿಸಿದ ನಂತರ ಕಾಡುವ ಪ್ರಶ್ನೆ "ಮುಂದೇನು?" . ಒಂದು ದಾರಿಯಲ್ಲಿ ನಡೆಯುತ್ತಿರುವ ಮಗುವಿಗೆ ಹಲವು ದಾರಿಗಳು ಒಮ್ಮೆಲೇ ತೆರೆದುಕೊಳ್ಳುತ್ತದೆ. ಕೆಲವರು ತಮ್ಮ ಹೆತ್ತವರು, ಸಮಾಜದ ಒತ್ತಡಕ್ಕೆ ಅವರದಲ್ಲದ ದಾರಿಯನ್ನು ಆಯ್ಕೆ ಮಾಡುತ್ತಾರೆ, ಕೆಲವರು ತಮ್ಮ ಇಚ್ಛೆಯಂತೆ ತಮ್ಮ ಆಯ್ಕೆಯಲ್ಲಿ ನಡೆಯುತ್ತಾರೆ.
ಸಾಮಾನ್ಯವಾಗಿ ಹೆಚ್ಚಿನ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣದ ನಂತರ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡದೆ ಪದವಿ ಪೂರ್ವ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಆಯ್ಕೆಯ ಪ್ರಕ್ರಿಯೆಯಲ್ಲಿ ಎದುರಾಗುವುದು ಮೂರು ಪ್ರಮುಖ ವಿಷಯಗಳು, ಇದು ನಮಗೆಲ್ಲ ತಿಳಿದಿರುತ್ತದೆ.
ವಿದ್ಯಾರ್ಥಿಗಳು ತಮ್ಮ ಕನಸಿಗೆ ಪೂರಕವಾದ ವಿಷಯವನ್ನು ಆರಿಸುತ್ತಾರೆ. ಇಲ್ಲಿ ಯಾವುದು ಕೀಳಲ್ಲ ಮೇಲಲ್ಲ .ಪ್ರತಿಯೊಂದು ವಿಭಾಗಕ್ಕೂ ಸಮಾಜದಲ್ಲಿ ಜವಾಬ್ದಾರಿಗಳು ಹಾಗೂ ಪ್ರಾಮುಖ್ಯತೆ ಇದೆ. ಪ್ರತಿಯೊಂದು ವಿಷಯ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧವನ್ನು ಹೊಂದಿಕೊಂಡು ನಡೆಯುತ್ತದೆ.
ಈಗ, ಮೊದಲ ಪ್ರಶ್ನೆಗೆ ಬರೋಣ" ಪ್ರೌಢಶಾಲಾ ಶಿಕ್ಷಣದ ನಂತರ ಮುಂದೇನು ?" ಎನ್ನುವ ಪ್ರಶ್ನೆ ಎಲ್ಲರಿಗೂ ಈ ಸಮಾಜವು ಕೇಳಿಯೇ ಕೇಳಿರುತ್ತದೆ. ಈ ಪ್ರಶ್ನೆಗೆ ನನ್ನ ಉತ್ತರವಾಗಿದ್ದು "ಕಲಾ ವಿಭಾಗ". ಈ ವಿಭಾಗದ ಹೆಸರು ಕೇಳಿದ ತಕ್ಷಣ ಊರಿಗೆ ಬೆಂಕಿ ಬಿದ್ದ ಹಾಗೆ ಸಮಾಜವು ನನ್ನಲ್ಲಿ ವ್ಯವಹರಿಸಿತ್ತು . ಇದು ನನ್ನ ಆಯ್ಕೆ, ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇರಲಿಲ್ಲ ಆದರೂ ಈ ಸಮಾಜವು ಪ್ರಶ್ನಿಸಿತು. "ಇಷ್ಟು ಅಂಕಗಳು ಇಟ್ಟುಕೊಂಡು ಕಲಾ ವಿಭಾಗ ಏಕೆ? ಬೇರೆ ಒಳ್ಳೆಯ ಆಯ್ಕೆ ಇರಲಿಲ್ಲವೇ?" ನನ್ನಲ್ಲಿ ಉತ್ತರವಿರಲಿಲ್ಲ, ಮೂಕಿಯಾದೆ...
ಕಲಾ ವಿಭಾಗದಿಂದ ನಾನು ಕಲಿತದ್ದು ಬಹಳಷ್ಟು. ಮಾನವ ಸಂಘ ಜೀವಿ, ಸಮಾಜದ ಕೊಂಡಿ ಇಲ್ಲದೆ ಅವನು ಬದುಕಲು ಸಾಧ್ಯವಿಲ್ಲ ಎಂಬ ಸತ್ಯ ಸಂಗತಿ ನಮಗೆಲ್ಲ ತಿಳಿದಿದೆ. ಅನೇಕ ಸಾಮಾಜಿಕ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವನ್ನು ಕಂಡುಕೊಂಡೆ. ಇನ್ನು ಅತಿ ಹೆಚ್ಚು ಮಕ್ಕಳು ಅಂಕ ಕಡಿಮೆ ಬಂದಿದೆ ಎಂದು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದರೆ ಅದರಲ್ಲಿ ಕಲಾ ವಿಭಾಗದ ಕೊಡುಗೆ ಬಹುಶಃ ಶೂನ್ಯವಾಗಿದೆ. ಅಂಕವೇ ಜೀವನದ ಕೊನೆ ಅಲ್ಲ ಅದರ ಹೊರತು ಬೇರೊಂದು ಅದ್ಭುತವಾದ ಪ್ರಪಂಚವಿದೆ ಎಂಬ ಸತ್ಯದ ಅರಿವು ನಮ್ಮಲ್ಲಿ ಇದೆ.
ಪ್ರಿಯ ಓದುಗರೇ... ಮಾನವನು ಸರಿಯಾದ ಜೀವನ ನಡೆಸಲು ಸಕಲವು ಬೇಕು, ಪ್ರತಿಯೊಬ್ಬನ ಬಾಳ ಹಾದಿ ಬೇರೆಬೇರೆ. ವಿದ್ಯಾರ್ಥಿಗಳು ತಮ್ಮಗೆ ಇಪ್ಟವಿರುವ ಪಥವನ್ನು ಆರಿಸುತ್ತಾರೆ. ಇಲ್ಲಿ ಯಾವುದು ಚಿಕ್ಕದು ಅಲ್ಲಾ, ಎಲ್ಲದಕ್ಕೂ ಒಂದು ಗುಣಮಟ್ಟವಿರುತ್ತದೆ.
ಎಲ್ಲರ ಆಯ್ಕೆಗೆ ಮಾನ್ಯತೆ ಮತ್ತು ಗೌರವ ನೀಡಿ.
-ಕೃತಿಕಾ ಪುತ್ತಿಗೆ
ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ