ಸ್ನೇಹ- ಅಪರಿಚಿತರಿಂದ ಚಿರಪರಿಚಿತರಾದರು

Upayuktha
0

"ಎನಿತು ಜೀವದಲಿ ಎನಿತು ಜೀವಂಗೆ ಎನಿತು ನಾವು ಋಣಿಯೋ ಅರಿತು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ "ಎಂಬ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಸಾಲಿನಂತೆ ಈ ಪ್ರಪಂಚದಲ್ಲಿ ಪ್ರತಿ ಹೆಜ್ಜೆಯಲ್ಲೂ ಸಿಕ್ಕ ಅದೆಷ್ಟೋ ಜನರಿಗೆ ನಾವು ಋಣಿಯಾಗಬೇಕೋ. ಅವರೆಲ್ಲರೂ ಒಂದ ಲ್ಲೊಂದು ರೀತಿಯಲ್ಲಿ ನಮ್ಮ ಸ್ನೇಹಿತರೆ ಹೌದು, ಒಟ್ಟಿಗೆ ಹುಟ್ಟದಿದ್ದರೂ ಒಡಹುಟ್ಟಿದವರಂತೆಯೇ ಪ್ರೀತಿ ಕಾಳಜಿ ಮಾಡುವ ಸಂಬಂಧವೇ ಸ್ನೇಹ. ಸ್ನೇಹಿತೆ ಅಥವಾ ಸ್ನೇಹಿತನೇ ಇರಬಹುದು ಒಟ್ಟಿಗೆ ಒಡಹುಟ್ಟದಿದ್ದರೂ ಯಾವುದೇ ಜಾತಿ‐ಧರ್ಮ ಇವುಗಳನ್ನು ಲೆಕ್ಕಿಸದೆ ಅದನ್ನು ಮೀರಿ ಬೆಸೆದುಕೊಂಡಂತಹ ಬಿಗಿಯಾದ ಸಂಬಂಧ. ಕಣ್ಣಿವೆಯಲ್ಲಿ ಬತ್ತಿ ಹೋದ ಕಣ್ಣೀರನ್ನು ಕಾಣುವವನು.. ಬಡ ಕುಚೇಲನ ಹಿಡಿ ಅವಲಕ್ಕಿಯನ್ನೇ ಸಂತೃಪ್ತಿ ಪಡುವ ಕೃಷ್ಣನಂತವನು! ಇಂತಹ ಸ್ನೇಹಿತರು ಸಿಗುವುದು ನಮ್ಮ ಬಾಳಿನ ಸೌಭಾಗ್ಯವೇ ಸರಿ.


ಕಾಲಚಕ್ರ ಉರಳಿದಂತೆ ನಮ್ಮ ಜೀವನದ ಹಂತ ಹಂತದವರೆಗೂ ಅದೆಷ್ಟೋ ಹೊಸ ವ್ಯಕ್ತಿಗಳು ಪರಿಚಯವಾಗುತ್ತಾರೆ.ಅಷ್ಟೇನೂ ಒಡನಾಟವಿಲ್ಲದವರ ಜೊತೆ ಗಾಢ ಭಾಂದವ್ಯ ಬೆಸೆದು ಅವರು ಯಾವುದೇ ತೊಂದರೆಯಲ್ಲಿ ಇದ್ದರೂ ಜೊತೆಯಾಗಿ ನಿಲ್ಲುತ್ತೇನೆ,ನಿನ್ನ ಸುಖ- ದುಃಖ ನೋವು ನಲಿವುಗಳಲ್ಲಿ ನಾನು ಭಾಗಿಯಾಗುತ್ತೇನೆ, ಎಂದು ಹೇಳುವುದೇ ಸ್ನೇಹ ಎಂಬ ಪುಟ್ಟ ಪ್ರಪಂಚ.


ಸ್ನೇಹ ಎಂದ ಮೇಲೆ ಅದರಲ್ಲಿ ಜಾತಿ ಧರ್ಮ, ಶ್ರೀಮಂತ- ಬಡವ, ಕೆಳ ಜಾತಿ- ಮೇಲ್ಜಾತಿ,ಗಂಡು- ಹೆಣ್ಣು ಎಂಬ ಭೇದ ಭಾವಕ್ಕೆ ಜಾಗವೇ ಇಲ್ಲ. ಇದನ್ನೆಲ್ಲಾ ಮರೆತು ಜೊತೆಗೆ ಉತ್ತಮ ಸ್ನೇಹಿತರಾಗಿರುತ್ತಾರೆ. ನಮ್ಮನ್ನು ಅರ್ಥ ಮಾಡಿಕೊಳ್ಳುವ ಸಾಯುವವರೆಗೂ ನಮ್ಮ ಎಲ್ಲ ವಿಷಯದಲ್ಲಿ ಜೊತೆಯಾಗಿರುತ್ತೇನೆ ಎನ್ನುವ ಒಬ್ಬ ಸ್ನೇಹಿತ ಸಿಕ್ಕರೆ ನಮ್ಮ ಜೀವನದ ಪುಣ್ಯ ಎನ್ನಬಹುದು. ಏಕೆಂದರೆ ಒಂದು ವೇಳೆ ನಮ್ಮ ಕುಟುಂಬದವರು ನಮ್ಮನ್ನು ಅಪಾರ್ಥ ಮಾಡಿಕೊಂಡು ನಮ್ಮನ್ನು ಗೇಲಿ ಮಾಡಿಕೊಂಡು, ಮತ್ತೊಬ್ಬರಲ್ಲಿ ದೂರಿಕೊಂಡು ನಮ್ಮನ್ನು ಹೀಯಾಳಿಸಬಹುದು, ಆದರೆ ಅಂತಹ ಸಂದರ್ಭದಲ್ಲಿ ಸ್ನೇಹಿತರು ಜೊತೆಯಾಗಿ ನಿಲ್ಲುತ್ತಾರೆ. ಮನುಷ್ಯ ಜೀವನದಲ್ಲಿ ಏನು ಬೇಕಾದರೂ ಸಂಪಾದಿಸಲಿ ಆದರೆ ಸ್ನೇಹ ಎಂಬ ಚೌಕಟ್ಟನ್ನು ಬಿಟ್ಟು ಬದುಕಲು ಅಸಾಧ್ಯ.

 "ಕೇನ ರತ್ನಮಿದಂ ಸೃಷ್ಟಂ ಮಿತ್ರ ಮಿತ್ರಕ್ಷರದ್ವಯಿಂ" ಎಂಬಂತೆ ಮಿತ್ರ ಎಂಬ ರತ್ನವನ್ನು ಯಾರು ಸೃಷ್ಟಿಸಿದರೋ... ನಿಜವಾಗಿಯೂ ಅವರಂಥ ಮಿತ್ರರು ಮನುಕುಲಕ್ಕೆ ಇನ್ನೊಬ್ಬರಿಲ್ಲ .ಸ್ನೇಹಿತರು ಸುಖ-ದುಃಖ ಎರಡರಲ್ಲೂ ಜೊತೆಗೆ ಇದ್ದು ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ನಾವು ಯಾವುದಾದರೂ ಕಾರಣಗಳಿಂದ ಬೇಸರಗೊಂಡಿದ್ದರೆ ನಮ್ಮ ಜೊತೆಗೆ ಇದ್ದು ನಮ್ಮನ್ನು ಸಂತೈಸುತ್ತಾರೆ. ಹಾಗೆಯೇ ಜಗಳ ಚರ್ಚೆಗಳನ್ನು ಮಾಡಿಕೊಂಡು ಕೆಲವೊಮ್ಮೆ ಕೋಪದಿಂದ ಇದ್ದರೂ ಸಹ ಕೆಲವೇ ಸಮಯದಲ್ಲಿ ಕೋಪವನ್ನು ಮರೆತು ಪ್ರೀತಿಯಿಂದ ವರ್ತಿಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ? ಸಮಾಜ ಜೀವಿಯಾದ ಮನುಷ್ಯ ಜೀವನದಲ್ಲಿ ಸ್ನೇಹ ಎಂಬ ಬಂಧವಿಲ್ಲದೆ ಬದುಕಲಾರ.



-ವನಶ್ರೀ ಗೌಡ ಬಳ್ಪ

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top