ವಿಟ್ಲ: ಸಪ್ತ ಜ್ಯುವೆಲ್ಸ್ ಲಕ್ಕಿ ಕೂಪನ್ ಡ್ರಾ; 1 ಪವನ್ ನೆಕ್ಲೆಸ್ ಗೆದ್ದ ಗ್ರಾಹಕರು

Chandrashekhara Kulamarva
0

ಜು.12ರಂದು ಬಹುಮಾನ ವಿತರಣೆ



ವಿಟ್ಲ: ಸಪ್ತ ಜ್ಯುವೆಲ್ಸ್ ವಿಟ್ಲ- ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಕಟ್ಟಡಕ್ಕೆ ಸ್ಥಳಾಂತರಗೊಂಡು ಸಂಪೂರ್ಣ ಹವಾನಿಯಂತ್ರಿತ ವಿಶಾಲವಾದ ಆಭರಣ ಮಳಿಗೆ ಉದ್ಘಾಟನಾ ಸಮಾರಂಭದ ಅಂಗವಾಗಿ ಜೂನ್ 30ರ ವರೆಗೆ 5 ಸಾವಿರಕ್ಕಿಂತ ಅಧಿಕ ಮೌಲ್ಯದ ಚಿನ್ನ ಖರೀದಿಸಿದ ಗ್ರಾಹಕರಿಗೆ ನೀಡಿದ ಕೂಪನ್ ನ ಅದೃಷ್ಟಶಾಲಿ ಗ್ರಾಹಕರ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು.


ಸಪ್ತ ಜ್ಯುವೆಲ್ಸ್ ಜೂ.5ರಂದು ಉದ್ಘಾಟನೆಗೊಂಡಿದ್ದು, ಜೂನ್ 30ರವರೆಗೆ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿತ್ತು. ಸಾವಿರಾರು ಅದೃಷ್ಟ ಚೀಟಿಗಳನ್ನು ಗ್ರಾಹಕರು ಪೆಟ್ಟಿಗೆಯಲ್ಲಿ ಹಾಕಿದ್ದು, ಗ್ರಾಹಕರಾದ ಅಳಿಕೆಯ ನಿವೃತ್ತ ಮುಖ್ಯ ಶಿಕ್ಷಕ ಪುಂಡರೀಕ ರಾವ್ ಪುಣಚ ಅದೃಷ್ಟ ಶಾಲಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು. ಅದೃಷ್ಟ ಚೀಟಿ ಸಂಖ್ಯೆ 3355 ಆಯ್ಕೆಯಾಗಿ 1 ಪವನ್ ನೆಕ್ಲೆಸ್ ಅನ್ನು ಗೆದ್ದುಕೊಂಡಿದೆ.


ಸಪ್ತ ಜ್ಯುವೆಲ್ಸ್ ಸ್ಥಳಾಂತರಿತ ಮಳಿಗೆ ಉದ್ಘಾಟನೆಯ ಅಂಗವಾಗಿ ಹಮ್ಮಿಕೊಂಡ ಆಯ್ಕೆಗೊಂಡ ಅದೃಷ್ಟ ಚೀಟಿ ಸಂಖ್ಯೆ 3355 ಹೊಂದಿರುವ ಗ್ರಾಹಕರಿಗೆ ಅದೃಷ್ಟದ ಬಹುಮಾನವಾದ 1 ಪವನ್ ನೆಕ್ಲೆಸ್ ವಿತರಣೆ ಜುಲೈ 12ರಂದು ಸಾಯಂಕಾಲ 5 ಗಂಟೆಗೆ ಮಳಿಗೆಯಲ್ಲಿ ನಡೆಯಲಿದೆ.


Today's Gold Rate:

 Date: 10/07/2023

 Gold  Rate 22KT : Rs.5,445/-


إرسال تعليق

0 تعليقات
إرسال تعليق (0)
To Top