ಉದ್ಯಮದ ಅಗತ್ಯಕ್ಕೆ ತಕ್ಕಂತೆ ನಾವು ಬದಲಾಗುವುದು ಜಾಣತನ: ಪ್ರೊ. ಯಜ್ಞನಾರಾಯಣ

Chandrashekhara Kulamarva
0

ನಿಟ್ಟೆ: 'ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಉದ್ಯೋಗಾವಕಾಶಕ್ಕೆ ಬೇಕಾದ ರೀತಿಯ ಎಲ್ಲಾ ಕೌಶಲ್ಯತೆಗಳೊಂದಿಗೆ ಅಣಿಗೊಳಿಸುವುದು ಪ್ರಸ್ತುತ ದಿನಗಳಲ್ಲಿ ಜಾಣತನದ ನಡೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಕಾಣಲಾಗುತ್ತಿರುವ ತಂತ್ರಜ್ಞಾನದ ಬೆಳವಣಿಗೆಗೆ ಒಗ್ಗಿಕೊಳ್ಳಲು ಪ್ರತಿದಿನದ ಅಪ್ಡೇಟ್ ಅತ್ಯಗತ್ಯ' ಎಂದು ಐಐಐಟಿ ಹೈದ್ರಾಬಾದ್ ನ ಪ್ರೊ. ಬಿ. ಯಜ್ಞನಾರಾಯಣ ಅಭಿಪ್ರಾಯಪಟ್ಟರು.


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗವು ಜು. 24 ರಿಂದ ಜು.28 ರವರೆಗೆ ಹಮ್ಮಿಕೊಂಡಿರುವ 5 ದಿನಗಳ 'ಮೆಥಮೆಟಿಕಲ್ ಫೌಂಡೇಶನ್ಸ್ & ರಿಸರ್ಚ್ ಟ್ರೆಂಡ್ಸ್ ಇನ್ ಕಮ್ಯೂನಿಕೇಶನ್' ಎಂಬ ವಿಷಯದ ಬಗೆಗಿನ ಶಿಕ್ಷಕರ ಜ್ಞಾನವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಇಂದಿನ ವೇಗದ ಬದುಕಿಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೃಜನಾತ್ಮಕವಾಗಿ ಯೋಚಿಸಿಬೇಕಿದೆ' ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ ಎನ್ ಚಿಪ್ಳೂಣ್ಕರ್ 'ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗವು ಮೆಥಮೆಟಿಕಲ್ ಫೌಂಡೇಶನ್ಸ್ & ರಿಸರ್ಚ್ ಟ್ರೆಂಡ್ಸ್ ಇನ್ ಕಮ್ಯೂನಿಕೇಶನ್ ಬಗೆಗಿನ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಜ್ಞಾನವರ್ಧನೆಗೆ ಉತ್ತಮ ವೇದಿಕೆ. ನಮ್ಮ ಸಂಸ್ಥೆಯು ಇಂದು ಪಠ್ಯ ಮತ್ತು ಪಠ್ಯೇತರವಾಗಿ ಮಾತ್ರವಲ್ಲದೆ ಪ್ರಾಯೋಗಿಕವಾಗಿಯೂ ಜ್ಞಾನವೃಧ್ದಿಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇಂತಹ ಪ್ರಾಯೋಗಿಕ ಜ್ಞಾನವೃದ್ಧಿ ಕಾರ್ಯಕ್ರಮಗಳ ಪೂರ್ಣ ಸದುಪಯೋಗವನ್ನು ಪ್ರಾಧ್ಯಾಪಕರು ಪಡೆದುಕೊಳ್ಳಬೇಕು' ಎಂದರು ಹೇಳಿದರು.


ನಿಟ್ಟೆ ತಾಂತ್ರಿಕ ಕಾಲೇಜಿನ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಎಸ್.ಎಸ್.ಎಸ್.ಎಸ್ ಸಾಯಿರಾಮ್ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಯರಾದ ಡಾ. ಶ್ರೀವಿದ್ಯಾ ಹಾಗೂ ಡಾ.ಪದ್ಮಾವತಿ ಪ್ರಾರ್ಥಿಸಿದರು.


ಕಾರ್ಯಾಗಾರದ ಸಂಯೋಜಕ ಡಾ. ನರೇಂದ್ರ ಕಾರ್ಯಾಗಾರದ ಬಗೆಗೆ ವಿವರಿಸಿದರು. ಸಹಪ್ರಾಧ್ಯಾಪಕಿ ಶ್ರೀಮತಿ ಸುಷ್ಮಾ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಾಗಾರ ಸಂಯೋಜಕ ಡಾ. ದುರ್ಗಾಪ್ರಸಾದ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಅನುಷಾ ಶರತ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
To Top