ಬಿಎಂಎಸ್‌ ಮಹಿಳಾ ಮಹಾವಿದ್ಯಾಲಯ: ಎರಡು ದಿನಗಳ ಸಾಂಸ್ಕೃತಿಕ ಹಬ್ಬ 'ಕಲಾಪರ್ವ್' ಜು.27, 28ರಂದು

Chandrashekhara Kulamarva
0

ಬೆಂಗಳೂರು: ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ, ಬಸವನಗುಡಿ, ಇಲ್ಲಿ, ಜುಲೈ 27 ಹಾಗೂ 28 ಅಂತರ ಕಾಲೇಜು ಸಾಂಸ್ಕೃತಿಕ ಹಬ್ಬ ‘ಕಲಾಪರ್ವ್’ ಅನ್ನು ಹಮ್ಮಿಕೊಳ್ಳಲಾಗಿದೆ.


ಶ್ರೀಯುತ ರಾಜ್ ಬಿ ಶೆಟ್ಟಿರವರು ತಮ್ಮ 'ಟೋಬಿ' ಚಲನಚಿತ್ರ ತಂಡದವರೊಂದಿಗೆ ಆಗಮಿಸಿ, ಸಾಂಸ್ಕೃತಿಕ ಹಬ್ಬದ ಶೀರ್ಷಿಕೆಯನ್ನು ಬಿಎಂಎಸ್ ತಾಂತ್ರಿಕ ಕಾಲೇಜಿನ ಒಳಕ್ರೀಡಾಂಗಣದಲ್ಲಿ ಅನಾವರಣಗೊಳಿಸಲಿದ್ದಾರೆ.


ಡಿಜೆ ಹ್ಯಾರಿ ಕಾರ್ಯಕ್ರಮ, ತರ್ಲೇ ಬಾಕ್ಸ್ ಖ್ಯಾತಿಯ ಅಕ್ಷಯ್ ಮತ್ತು ತಂಡದವರಿAದ ಸ್ಟಾö್ಯಂಡ್-ಅಪ್ ಕಾಮಿಡಿ ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಚಲನಚಿತ್ರ ನಟಿಯಾದ ಅರ್ಚನ ಕೊಟ್ಟಿಗೆಯವರು ನೆರವೇರಿಸಲಿದ್ದಾರೆ.


ಡಾ. ಬಿ.ಎಸ್. ರಾಗಿಣಿ ನಾರಾಯಣ್, ಅಧ್ಯಕ್ಷರು, ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ, ಅಧ್ಯಕ್ಷರು, ದಾನಿಗಳು ಮತ್ತು ಸದಸ್ಯ ಕಾರ್ಯದರ್ಶಿಗಳು, ಬಿ.ಎಂ.ಎಸ್. ಶಿಕ್ಷಣ ದತ್ತಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.


ಬಿ.ಎಂ.ಎಸ್. ಶಿಕ್ಷಣ ದತ್ತಿಯ ಆಜೀವನ ಧರ್ಮದರ್ಶಿಗಳಾದ ಡಾ. ಪಿ. ದಯಾನಂದ ಪೈರವರು, ಬಿ.ಎಂ.ಎಸ್. ಶಿಕ್ಷಣ ದತ್ತಿಯ ಧರ್ಮದರ್ಶಿಗಳಾದ ಶ್ರೀ ಅವಿರಾಮ್ ಶರ್ಮಾರವರು ಹಾಗೂ ಶ್ರೀ ರವಿ ವೆಂಕಟೇಸAರವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ.


ಪ್ರಾಂಶುಪಾಲರಾದ ಡಾ. ಡಿ.ಇ. ವಸುಂಧರ, ಉಪಪ್ರಾಂಶುಪಾಲರಾದ ಶ್ರೀಮತಿ ಎ. ಗಾಯತ್ರಿರವರು, ಡೀನ್ ಅಕ್ಯಾಡೆಮಿಕ್ಸ್ರಾದ ಡಾ. ರೀಟಾ ಭಟ್ಟಾಚಾರ್ಜಿರವರು, ಡೆಪ್ಯುಟಿ ಡೀನ್‌ರಾದ ಡಾ. ಗೀತಶ್ರೀರವರು ಹಾಗೂ ಐಕ್ಯುಎಸಿ ಕೊ-ಆರ್ಡಿನೇಟರ್‌ರಾದ ಡಾ. ರಘು ಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.


ಖ್ಯಾತ ಸಂಗೀತ ಸಂಯೋಜಕರಾದ ಮಣಿಕಾಂತ್ ಕದ್ರಿ ಹಾಗೂ ಖ್ಯಾತ ಹಿನ್ನಲೆ ಗಾಯಕಿ ಹಂಸಿಕ ಅಯ್ಯರ್‌ರವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
To Top