ಉಡುಪಿ: ಜೇಸಿಐ ಭಾರತ ವಲಯ 15ರ ಪ್ರತಿಷ್ಠಿತ ವ್ಯವಹಾರ ಮತ್ತು ಬೆಳವಣಿಗೆ ಸಮ್ಮೇಳನ ಹಾಲಾಡಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ವಲಯಾಧಿಕಾರಿ, ಜೇಸಿಐ ಉಡುಪಿ ಸಿಟಿ ಇದರ ನಿಕಟ ಪೂರ್ವಅಧ್ಯಕ್ಷ ಡಾ. ವಿಜಯ್ ನೆಗಳೂರು ರವರಿಗೆ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಲಯಾಧ್ಯಕ್ಷ ಪುರುಷ್ಯೋತ್ತಮ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ನಿಕಟ ಪೂರ್ವ ವಲಯಾದ್ಯಕ್ಷ ರೋಯನ್ ಉದಯ್ ಕ್ರಾಸ್ತಾ, ವಲಯ ಉಪಾದ್ಯಕ್ಷೆ ಜಯಶ್ರೀ ಮಿತ್ರ, ವಲಯಾಧಿಕಾರಿಗಳಾದ ಮರಿಯಪ್ಪ, ಅಕ್ಷತಾ ಗಿರೀಶ್, ಡಾ. ಚಿತ್ರಾ ನೆಗಳೂರು, ಪೂರ್ವ ವಲಯ ಉಪಾದ್ಯಕ್ಷ ರಾಘವೇಂದ್ರ ಪ್ರಭು, ಕರ್ವಾಲು ಮುಂತಾದವರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ