ಮಂಗಳೂರು/ ಬೆಂಗಳೂರು: ಮಳೆ ಹೆಚ್ಚಾಗಿ ರಸ್ತೆಯಲ್ಲಿ ನೀರು ನಿಂತು ಮನೆಯೊಳಗೆ ಬಂದಾಗ ಬೆಂಗಳೂರು ನಗರ ಸರಿ ಇಲ್ಲ, ಮಂಗಳೂರು ನಗರ ಸರಿ ಇಲ್ಲ, ಸರ್ಕಾರ ಸರಿ ಇಲ್ಲ ಅಂತ ಕಿರುಚುವ ಮೊದಲು ಸರ್ಕಾರದ ಜೊತೆಗೆ ನಾವು ಕೂಡಾ ಸರಿಯಿಲ್ಲ ಅನ್ನೋದನ್ನು ನಾವು ಅರಿತುಕೊಳ್ಳಬೇಕು. ಸರ್ಕಾರ ಮಾಡಬೇಕಾದ ಒಳಚರಂಡಿ ವ್ಯವಸ್ಥೆ ವೈಜ್ಞಾನಿಕವಾಗಿ ಮಾಡದೆ ಇರಬಹುದು. ಆದರೆ ಅಲ್ಪಸ್ವಲ್ಪ ಇರುವ ವ್ಯವಸ್ಥೆ ಕೆಟ್ಟು ಹೋಗಲು ನಾವು ಬಿಸಾಡಿದ ಕಸ ಕಡ್ಡಿ, ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಉತ್ಪನ್ನಗಳೇ ನೇರ ಕಾರಣ.
ಸರೋವರ, ಕೆರೆ, ನದಿಗಳ ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡಿ ಹಣ ಮಾಡುವ ಕಂಪನಿಗಳು ಇಂದು ಅದೇ ಸರೋವರ ನದಿಗಳ ನೀರಿಗೆ ಮಾರಕವಾಗುತ್ತಿದೆ. ಇಂತಹ ಕಂಪೆನಿಗೂ ಸಾಮಾಜಿಕ ಪ್ರಜ್ಞೆ ಇಲ್ಲ. ಅದನ್ನು ಕುಡಿದು ಎಲ್ಲೆಂದರಲ್ಲಿ ಬಿಸಾಡುವ ಜನರಿಗೆ ಅದಕ್ಕಿಂತ ಮೊದಲು ತಲೆ ಸರಿ ಇಲ್ಲ ಎನ್ನದೆ ವಿಧಿಯಿಲ್ಲ.
ಸ್ವಚ್ಚತೆ ಬಗ್ಗೆ ಜಾಗೃತಿ ಇನ್ನೂ ಬಂದಿಲ್ಲ ಎನ್ನುವುದು ನಮ್ಮ ದುರಂತ. ಅದರಲ್ಲೂ ಕೆಲವು ವರ್ಗದವರು ಶುಚಿತ್ವ ತಮ್ಮ ಜವಾಬ್ದಾರಿ ಅಲ್ಲ ಎಂಬ ಭಾವನೆ ಹೊಂದಿದ್ದಾರೆ.
(ಜನಾಕ್ರೋಶದ ಧ್ವನಿ: ವಾಟ್ಸಪ್ ಮೂಲ)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ