ಅಂಚೆ ಇಲಾಖೆ ಪತ್ರ ಬರೆಯುವ ಸ್ಪರ್ಧೆ: ಕರ್ನಾಟಕದ ಮೂವರು ವಿದ್ಯಾರ್ಥಿಗಳಿಗೆ ಬಹುಮಾನ

Upayuktha
0

ಬೆಂಗಳೂರು: ಭಾರತ ಸರ್ಕಾರದ ಅಂಚೆ ಇಲಾಖೆಯು ಮಾರ್ಚ್-2023 ರಲ್ಲಿ “ಯುನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು)-2023” ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ಅಂತರರಾಷ್ಟ್ರೀಯ ಪತ್ರ ಬರೆಯುವ ಸ್ಪರ್ಧೆಯನ್ನು ನಡೆಸಲಾಗಿತ್ತು.


'ನೀವು ಸೂಪರ್ ಹೀರೋ ಎಂದು ಊಹಿಸಿಕೊಳ್ಳಿ ಮತ್ತು ಪ್ರಪಂಚದಾದ್ಯಂತದ ಎಲ್ಲಾ ರಸ್ತೆಗಳನ್ನು ಮಕ್ಕಳಿಗಾಗಿ ಸುರಕ್ಷಿತವಾಗಿಸುವುದು ನಿಮ್ಮ ಉದ್ದೇಶವಾಗಿದೆ. ನಿಮ್ಮ ಧ್ಯೇಯವನ್ನು ಸಾಧಿಸಲು ನೀವು ಯಾವ ಸೂಪರ್ ಪವರ್‌ಗಳ ಅಗತ್ಯವಿದೆ ಎಂಬುದನ್ನು ವಿವರಿಸುವ ಯಾರಿಗಾದರೂ ಪತ್ರ ಬರೆಯಿರಿ' ಎಂಬ ವಿಷಯದ ಮೇಲೆ ಪತ್ರ ಬರೆಯಲು ಸ್ಪರ್ಧಾಳುಗಳಿಗೆ ಸೂಚಿಸಲಾಗಿತ್ತು.


ರಾಷ್ಟ್ರಮಟ್ಟದ ಅತ್ಯುತ್ತಮ ಮೂರು ನಮೂದುಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳು, ಕುಂ. ಆಸ್ಫಿಯಾ ಸಮ್ರೀನ್, ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್, ಮೈಸೂರು ಮತ್ತು ಕುಂ. ಅಂಕಿತಾ ಕೆ ಆರ್, ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬೆಂಗಳೂರು ರಾಷ್ಟ್ರೀಯ ಮಟ್ಟದಲ್ಲಿ ಮೊದಲನೆ ಮತ್ತು ಮೂರನೆಯ ಸ್ಥಾನವನ್ನು ಹಾಗು ಕರ್ನಾಟಕ ರಾಜ್ಯ ಮಟ್ಟದಲ್ಲಿ ಮೊದಲನೆ ಮತ್ತು ಎರಡನೆ ಸ್ಥಾನವನ್ನು ಪಡೆದಿದ್ದಾರೆ. ಕುಂ. ಖುಷಿ ಎ, ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್, ಮೈಸೂರು ಇವರು ಕರ್ನಾಟಕ ರಾಜ್ಯ ಮಟ್ಟದಲ್ಲಿ ಮೂರನೆಯ ಸ್ಥಾನವನ್ನು ಪಡೆದಿದ್ದಾರೆ.


ನಿಗದಿತ ಸಮಯದಲ್ಲಿ ರಾಷ್ಟ್ರಮಟ್ಟದ ವಿಜೇತರಿಗೆ ದೆಹಲಿಯಲ್ಲಿ ಹಾಗು ರಾಜ್ಯಮಟ್ಟದ ವಿಜೇತರಿಗೆ ಬೆಂಗಳೂರಿನಲ್ಲಿ ಸಮಾರಂಭವನ್ನು ಆಯೋಜಿಸುವ ಮೂಲಕ ವಿಜೇತರಿಗೆ ಪ್ರಮಾಣಪತ್ರಗಳೊಂದಿಗೆ ನಗದು ಬಹುಮಾನವನ್ನು ವಿತರಿಸಲಾಗುತ್ತದೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top