ಸುರತ್ಕಲ್: ನಿರ್ದಿಷ್ಟ ಗುರಿ ಹಾಗೂ ನಿರಂತರ ಜ್ಞಾನಾರ್ಜನೆಯ ಹಂಬಲವಿದ್ದಾಗ ಯಶಸ್ವಿ ಶಿಕ್ಷಕನಾಗಲು ಸಾಧ್ಯ. ಸಾಹಿತ್ಯ ಬೋಧನೆಯ ಅನುಭವಗಳು ವಿಶಿಷ್ಟವಾದವು ಎಂದು ಗೋವಿಂದದಾಸ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ.ಮಾರ್ಸೆಲ್ ಲೂಯಿಸ್ ಮಸ್ಕರೇನ್ಹಸ್ ನುಡಿದರು. ಅವರು ವಯೋನಿವೃತ್ತಿಯ ಸಂದರ್ಭದಲ್ಲಿ ಗೋವಿಂದದಾಸ ಕಾಲೇಜಿನ ಸ್ಟಾಫ್ ಅಸೋಸಿಯೇಶನ್ ಆಯೋಜಿಸಿದ್ದ ವಿದಾಯ ಕೂಟದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮುಖ್ಯ ಅತಿಥಿ ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಶ್ರೀರಂಗ ಹೊಸಬೆಟ್ಟು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯವನ್ನು ತಿಳಿಸುವ ಮೂಲಕ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಕಾರ್ಯ ಮಹತ್ವದಾಗಿದೆ ಎಂದರು.
ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್.ಹೆಚ್. ಮಾತನಾಡಿ ಪ್ರಸಕ್ತ ಸಂದರ್ಭದಲ್ಲಿ ಭಾಷಾ ಕಲಿಕೆಗೆ ವಿಶೇಷ ಪ್ರಾಶಸ್ತ್ಯ ಲಭ್ಯವಾಗಿದ್ದು ಪ್ರೊ. ಮಾರ್ಸೆಲ್ ಲೂಯಿಸ್ ಮಸ್ಕರೇನ್ಹಸ್ ತನ್ನ ಕಾರ್ಯ ಸಾಧನೆಗಳಿಂದ ಯಶಸ್ವಿ ಶಿಕ್ಷಕರಾಗಿದ್ದಾರೆಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಪಿ. ಮಾತನಾಡಿ ಶಿಸ್ತು, ಕಾರ್ಯಬದ್ದತೆ, ಜೀವನ, ಪ್ರೀತಿ ಹಾಗು ಕಲಿಕಾಸಕ್ತಿ ಯಶಸ್ವಿ ಶಿಕ್ಷಕರ ಗುಣಗಳಾಗಿದ್ದು ಪ್ರೊ.ಮಾರ್ಸೆಲ್ ಲೂಯಿಸ್ ಮಸ್ಕರೇನ್ಹಸ್ ತಮ್ಮ ಸೇವಾವಧಿಯಲ್ಲಿ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆಂದು ಶ್ಲಾಘಿಸಿದರು.
ಪ್ರಾಧ್ಯಾಪಕರಾದ ಡಾ.ಕಾರ್ತಿಕ್ ಹಾಗೂ ದೀಪ ಶೆಟ್ಟಿ ಅಭಿನಂದನೆ ನುಡಿಗಳನ್ನಾಡಿದರು.
ಶೈಲ ಪಿರೇರಾ, ಮೀತೇಶ್ ಮಸ್ಕರೇನ್ಹಸ್, ಮಿಲಿಶಾ ಮಸ್ಕರೇನ್ಹಸ್ ಹಾಗೂ ಕಾಲೇಜಿನ ಉಪಪ್ರಾಂಶುಪಾಲ ರಮೇಶ್ ಭಟ್‍ಎಸ್.ಜಿ. ಮತ್ತಿತರರು ಉಪಸ್ಥಿತರಿದ್ದರು.
ಸ್ಟಾಫ್ ಅಸೋಸಿಯೇಶನ್ ನ ಕಾರ್ಯದರ್ಶಿ ಗೀತಾ ಕೆ ಸ್ವಾಗತಿಸಿದರು.ದಯಾ ಸುವರ್ಣ ವಂದಿಸಿದರು. ರಮಿತಾ ಅಭಿನಂದನ ಪತ್ರವಾಚಿಸಿದರು. ಕ್ಯಾ.ಸುಧಾಯು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ