ಅನುಭವ ಪಾಠಕ್ಕೆ ಜಾಂಬೂರಿ ಅತ್ಯುತ್ತಮ ಅವಕಾಶ - ಡಾ.ಎಂ. ಮೋಹನ ಆಳ್ವ

Upayuktha
0

     ವಿಶ್ವ ಜಾಂಬೂರಿ:  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಬೀಳ್ಕೊಡುಗೆ ಸಮಾರಂಭ

ಮಂಗಳೂರು: ‘ವಿದ್ಯಾರ್ಥಿಗಳು ಅನುಭವದ ಮೂಲಕ ಜೀವನದ ಉತ್ತಮ ಪಾಠ ಕಲಿಯಬೇಕಿದ್ದು, ಜಾಂಬೂರಿ ಅತ್ಯುನ್ನತ ಅವಕಾಶ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.


ದಕ್ಷಿಣ ಕೊರಿಯಾದಲ್ಲಿ ಆಗಸ್ಟ್ 1ರಿಂದ 12ರ ವರೆಗೆ ನಡೆಯಲಿರುವ ವಿಶ್ವ ಜಾಂಬೂರಿಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಂಗಳೂರಿನ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಸೋಮವಾರ ಭಾರತ್  ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆ ಹಮ್ಮಿಕೊಂಡ ‘ಬೀಳ್ಕೊಡುಗೆ ಸಮಾರಂಭ’ದಲ್ಲಿ ಅವರು ಸೋಮವಾರ ಮಾತನಾಡಿದರು. 


ಜಾಂಬೂರಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದು ತಮ್ಮ ಅನುಭವದಿಂದ ಉತ್ತಮ ಪಾಠ ಕಲಿಯಬೇಕಿದೆ ಎಂದರು. 


ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಿಸ್ತು, ಸೇವಾ ಮನೋಭಾವ ಹಾಗೂ ಸ್ನೇಹ ಸೌಹಾರ್ದತೆ ಮೈಗೂಡಿಸಿಕೊಳ್ಳಬೇಕು. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹಿತವಚನ ಹೇಳಿದರು. 


ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ವಸಂತ್ ರಾವ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಜಿಲ್ಲಾ ಸಂಘಟನಾ ಆಯುಕ್ತೆ ಸುನೀತಾ, ಜಿಲ್ಲಾ ಕೋಶಾಧಿಕಾರಿ ಅನಿಲ್ ಕುಮಾರ್, ಹಿರಿಯ ಗೈಡ್ಸ್ ಶುಭಾ ವಿಶ್ವನಾಥ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶುಭಾ ವಿಶ್ವನಾಥ್ ಮತ್ತು ಸಂಧ್ಯಾ ಇದ್ದರು. 


ಜಿಲ್ಲಾ ಗೈಡ್ಸ್ ಆಯುಕ್ತೆ ಮತ್ತು ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ. ಜಿ. ಕಜೆ ವಂದಿಸಿದರು, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್‍ರಾಜ್ ಕಾರ್ಯಕ್ರಮ ನಿರ್ವಹಿಸಿದರು. 


ಆಳ್ವಾಸ್‍ನಲ್ಲಿ ನಡೆದಿದ್ದ ಸಾಂಸ್ಕೃತಿಕ ಜಾಂಬೂರಿ 

ಸರಾಸರಿ 5 ವರ್ಷಕ್ಕೊಮ್ಮೆ ವಿಶ್ವ ಜಾಂಬೂರಿ ನಡೆಯುತ್ತಿದ್ದು, 24ನೇ ವಿಶ್ವ ಜಾಂಬೂರಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೂಡುಬಿದಿರೆಯಲ್ಲಿ ಸಾಂಸ್ಕೃತಿಕ ಜಾಂಬೂರಿಯಾಗಿ ಅದ್ದೂರಿಯಿಂದ ಆಚರಿಸಿತ್ತು. ಆಳ್ವಾಸ್‍ನಲ್ಲಿ ಜರುಗಿದ್ದು ಸಾಂಸ್ಕೃತಿಕ ಜಾಂಬೂರಿಯಲ್ಲಿ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ 10 ಸಾವಿರಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.


25ನೇ ವಿಶ್ವ ಜಾಂಬೂರಿ ಆಗಸ್ಟ್ 1 ರಿಂದ 12ರ ವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿದೆ. ಇಲ್ಲಿ 153 ದೇಶಗಳ, 50 ಸಾವಿರ ಶಿಬಿರಾರ್ಥಿಗಳು ಭಾಗಿಯಾಗಲಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 58 ಶಿಬಿರಾರ್ಥಿಗಳು(28 ಸ್ಕೌಟ್ಸ್, 18 ಗೈಡ್ಸ್, 5 ಶಿಕ್ಷಕರು, 7 ಐಎಸ್‍ಟಿ) ಸೇರಿದಂತೆ ರಾಜ್ಯದ 124 ಹಾಗೂ ದೇಶದ 380 ಶಿಬಿರಾರ್ಥಿಗಳು ಪಾಲ್ಗೊಳ್ಳುವರು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ. ಎಂ. ಮೋಹನ ಆಳ್ವ ತಿಳಿಸಿದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top