ಮಂಗಳೂರು: ಬಜೆಟ್ ಭಾಷಣವಾಗಬೇಕಿದ್ದನ್ನು ಮತ್ತೊಂದು ರಾಜಕೀಯ ಭಾಷಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿವರ್ತಿಸಿದರು. ಕಾಂಗ್ರೆಸ್‌ನ ಭರವಸೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಬಜೆಟ್ ಮಂಡನೆಯ ಉದ್ದಕ್ಕೂ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುತ್ತಲೇ ಇದ್ದರು. (ಬಿಜೆಪಿ ಮತ್ತು ಮೋದಿ ಮಾತ್ರ ಭರವಸೆಗಳನ್ನು ಈಡೇರಿಸಬಲ್ಲರು ಎಂಬುದನ್ನು ಒಪ್ಪಿಕೊಂಡಂತೆ ಕಾಣುತ್ತದೆ).
ಸಿದ್ದರಾಮಯ್ಯ ಬಜೆಟ್‌ನಲ್ಲಿ-
• ಮೂಲಸೌಕರ್ಯ, ನಾವೀನ್ಯತೆ ಅಥವಾ ಉದ್ಯೋಗದ ಮೇಲೆ ಗಮನಹರಿಸಿಲ್ಲ.
• ಕರಾವಳಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
• ಬಿಜೆಪಿ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಗೋಶಾಲೆಯಂತಹ ಯೋಜನೆಗಳನ್ನು ಘೋಷಿಸಿತು ಮತ್ತು ಸರ್ಕಾರಿ ಶಾಲೆಗಳ ಸುಧಾರಣೆಗೆ ಕ್ರಮ ಕೈಗೊಂಡಿತು. ಅವನ್ನೆಲ್ಲ ಈಗ ಕಾಂಗ್ರೆಸ್ ಸರಕಾರ ಕೈಬಿಟ್ಟಿದೆ. ಶಾಲೆಗಳ ಅಭಿವೃದ್ಧಿಯ ಬದಲು ಮುಚ್ಚುವ ಹುನ್ನಾರ ನಡೆಸಿದೆ. ಶಾಲೆಗಳ ಬದಲಾಗಿ ಶಾದಿ ಮಹಲ್ ಮತ್ತು ವಕ್ಫ್ ಆಸ್ತಿ ನಿರ್ವಹಣೆಗೆ ಕೋಟಿಗಟ್ಟಲೆ ಹಣ ಮಂಜೂರು ಮಾಡಲಾಗಿದೆ.
• ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ 100 ಕೋಟಿ ವಿನಿಯೋಗಿಸಲಾಗಿದೆ, ಹಿಂದೂ ಅಭಿವೃದ್ಧಿ ಮಂಡಳಿಯ ಬಗ್ಗೆಯೂ ಉಲ್ಲೇಖಿಸಿಲ್ಲ.
- ಡಾ. ವೈ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ ಕ್ಷೇತ್ರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ