ವೈಜ್ಞಾನಿಕ ಸಂಶೋಧನೆಯಿಂದಲೂ ಸಾಬೀತಾದ ಅಧ್ಯಾತ್ಮದ ಮಹತ್ವ: ಶಾನ್ ಕ್ಲಾರ್ಕ್

Upayuktha
0

 ಭೋಪಾಲ: 'ಸಿ 20' ಸಭೆಯಲ್ಲಿ ಸಂಶೋಧನಾ ಮಾಹಿತಿ ಪ್ರಸ್ತುತ ಪಡಿಸಿದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ



ಭೋಪಾಲ್: ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಅದ್ವಿತೀಯ ವೈಜ್ಞಾನಿಕ ಸಂಶೋಧನೆ ನಡೆಯುತ್ತಿದೆ. ಒರಾ ಮತ್ತು ಎನರ್ಜಿ ಸ್ಕ್ಯಾನರ್ ಮುಂತಾದ ಉಪಕರಣಗಳ ಮೂಲಕ ನಡೆಸಲಾಗುವ ಈ ಸಂಶೋಧನೆಗಳು ಪ್ರಾಚೀನ ಭಾರತೀಯ ಶಿಕ್ಷಣದ ಜೊತೆಗೆ ಹೊಂದಾಣಿಕೆಯಾಗುತ್ತವೆ. ಹಾಗೂ ಸಾವಿರಾರು ವರ್ಷಗಳ ಹಿಂದೆ ನಮ್ಮ ಋಷಿಮುನಿಗಳು ವಿಶ್ವಕ್ಕೆ ನೀಡಿರುವ ಜ್ಞಾನ ಕೂಡ ಯಥಾರ್ಥವಾಗಿದೆ, ಎಂಬುದು ಈ ಸಂಶೋಧನೆಯಿಂದ ಸಿದ್ಧವಾಗಿದೆ. ಈ ಸಂಶೋಧನೆಯಿಂದ ನಮ್ಮ ಜೀವನದಲ್ಲಿ ಸೂಕ್ಷ್ಮ ಜಗತ್ತಿನ ಪ್ರಭಾವ ಹೇಗೆ ಆಗುತ್ತದೆ, ಎಂಬುದನ್ನು ಸಹ ಅಂದಾಜು ಮಾಡಬಹುದು ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶಾನ್ ಕ್ಲಾರ್ಕ್ ಮಾಹಿತಿ ನೀಡಿದರು.


ಇತ್ತೀಚಿಗೆ ಭೋಪಾಲದಲ್ಲಿ ಸೇವೆ- ಸೇವಾಭಾವ, ಪರೋಪಕಾರ ಮತ್ತು ಸ್ವಯಂಸೇವಾ ಈ ಕಾರ್ಯಕಾರಿ ತಂಡದಿಂದ 'ಸಿ 20' ಸಭೆಯ ಆಯೋಜನೆ ಮಾಡಲಾಗಿತ್ತು. ಈ ಸಭೆಯಲ್ಲಿ ಸ್ವತಂತ್ರ ಸೇವಾ ಯೋಗಿಯ 'ಸರ್ವೋತ್ತಮ ಪದ್ಧತಿ' ಎಂದರೆ 'ಏಕಲ ಸೇವಾ ಕಾರ್ಯಕರ್ತ' ಈ ಸತ್ರದಲ್ಲಿ ಕ್ಲಾರ್ಕ್ ಮಾತನಾಡುತ್ತಿದ್ದರು. ಈ ವರ್ಷದ 'ಜಿ 20' ಸಭೆಯ ಆತಿಥ್ಯದ ಜವಾಬ್ದಾರಿಯು ಭಾರತದ ಬಳಿಯಿದೆ. 'ಸಿ 20' ಇದು 'ಜಿ 20' ಸಭೆಯ ನಾಗರಿಕ ಶಾಖೆ ಆಗಿದೆ.


ಈ ಸಮಯದಲ್ಲಿ ಶಾನ್ ಕ್ಲಾರ್ಕ್ ಇವರು ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಇಲ್ಲಿಯವರೆಗೆ ನಡೆಸಲಾದ ಸಂಶೋಧನೆಗಳಲ್ಲಿನ ವೈಶಿಷ್ಟ್ಯ ಪೂರ್ಣ ಅಂಶಗಳ ಮೇಲೆ ಪ್ರಕಾಶ ಬೀರಿದರು. ಅಧ್ಯಾತ್ಮ ಇದು ಎಕ್ಸಿಮಾ, ವ್ಯಸನಾಧೀನ, ಮಾನಸಿಕ ರೋಗ ಇದರ ಜೊತೆಗೆ ಆರೋಗ್ಯಕ್ಕೆ ಸಂಬಂಧಿತ ವಿವಿಧ ಸಮಸ್ಯೆಗಳನ್ನು ಎದುರಿಸಲು ಸಹಾಯಕವಾಗಿದೆ. ಯಜ್ಞದ ಮಾಧ್ಯಮದಿಂದ ಕೂಡ ವನಸ್ಪತಿ ಮತ್ತು ಮನುಷ್ಯನಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭವಾಗುತ್ತದೆ. ಸಂಗೀತದಲ್ಲಿ ಕೂಡ ಈ ಆಧ್ಯಾತ್ಮಿಕ ನಿಯಮ ಅನ್ವಯವಾಗುತ್ತದೆ. ಸಂಗೀತದ ವಿವಿಧ ಶೈಲಿ ಮತ್ತು ಅವರ ಪ್ರಭಾವಲಯದ ಮೇಲಾಗುವ ಪರಿಣಾಮ ಈ ವಿಷಯದಲ್ಲಿ ಆಧ್ಯಾತ್ಮಿಕ ಸಂಶೋಧನೆ ಮಾಡಲಾಗಿದೆ. ಇದರಿಂದ ಉನ್ನತ ಆಧ್ಯಾತ್ಮಿಕ ಮಟ್ಟದ ಸಂತರು ಹಾಡಿರುವ ಭಕ್ತಿ ಗೀತೆಗಳು ವ್ಯಕ್ತಿಯ ಪ್ರಭಾವಲಯದ ಮೇಲೆ ಸಕಾರಾತ್ಮಕ ಪರಿಣಾಮ ಆಗುತ್ತದೆ, ಹಾಗೂ ಹೆವಿ ಮೆಟಲ್ ಸಂಗೀತದಿಂದ ವ್ಯಕ್ತಿಯ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಶಾನ್ ಕ್ಲಾರ್ಕ್ ಹೇಳಿದರು.


ಇತರ 'ಸಿ 20' ಸಭೆಗಳಲ್ಲಿ ಕೂಡ ಸಹಭಾಗಿ ಆಗುವಂತೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಆಮಂತ್ರಣ ನೀಡಲಾಗಿದೆ. ಜೂನ್ 9 ರಿಂದ ಜೂನ್ 12. 2023 ರ ಕಾಲಾವಧಿಯಲ್ಲಿ ಅರುಣಾಚಲ ಪ್ರದೇಶದ ನಾಮಸಾಯಿಯಲ್ಲಿ ಆಯೋಜಿಸಲಾದ ಸಭೆಯಲ್ಲಿ ಸಹ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಸಹಭಾಗಿಯಾಗಿತ್ತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top