ನಿಸ್ವಾರ್ಥ ಜೀವಿ ಯೋಧ

Upayuktha
1 minute read
0

ದೇಶಕ್ಕಾಗಿ ದುಡಿಯ ನಿಸ್ವಾರ್ಥ ಜೀವಿ ಎಂದರೆ ಯೋಧರು. ಆ ಭಗವಂತ ಹೇಗೆ ನಮ್ಮನ್ನು ಕಾಯ್ತನೋ ಹಾಗೇ, ಭಾರತದ ಗಡಿಯಲ್ಲಿ ತಮ್ಮ ಎಲ್ಲ ಆಸೆ, ಕನಸನ್ನು ಬಿಟ್ಟು ತಮ್ಮ ಪ್ರಾಣದ ಹಂಗನ್ನು ತೊರೆದು ನಮ್ಮನ್ನೆಲ್ಲ ಕಾಯುವ ಯೋಧರು ಕೂಡ ನಮ್ಮ ಪ್ರಾಣದಾತರು ಅಂತ ಹೇಳಿದರೆ ತಪ್ಪಾಗಲಾರದು. ಗಡಿಯಲ್ಲಿ ಚಳಿ, ಮಳೆ, ಬಿಸಿಲು ಯಾವುದನ್ನು ಲೆಕ್ಕಿಸದೆ ಬೇಧ, ಭಾವ ಇಲ್ಲದೆ ಸೇವೆ ಸಲ್ಲಿಸುತ್ತಿರುತ್ತಾರೆ. ತಮ್ಮ ಮಕ್ಕಳನ್ನು ಗಡಿಯಲ್ಲಿ ಸೇವೆ ಸಲ್ಲಿಸಲು ಬಿಟ್ಟು ಮನೆಯಲ್ಲಿ ತಮ್ಮ ಎದೆಯನ್ನು ಗಟ್ಟಿ ಮಾಡಿಕೊಂಡು ನಮ್ಮ ಮಕ್ಕಳು ಹೇಗೋ ದೇಶದಲ್ಲಿರುವ ಜನರು ಹಾಗೇ ಅಂದುಕೊಂಡು ಯೋಧರಿಗೆ ಪ್ರೋತ್ಸಾಹಿಸುತ್ತಿರುವ ತಂದೆ ತಾಯಿಗೆ ಒಂದು ಸಲಾಂ ಹೊಡಿಲೇ ಬೇಕು ಅಲ್ಲವೇ?


ಒಬ್ಬ ಯೋಧ ಜನರ ಕಷ್ಟವನ್ನೆಲ್ಲ ಬಗೆಹರಿಸುತ್ತಾನೆ ಆದರೆ ತನ್ನ ಕಷ್ಟಗಳನ್ನು ಎದೆಯಲ್ಲಿಯೇ ಬಚ್ಚಿಟ್ಟುಕೊಂಡು ಮೊದಲು ನನ್ನ ದೇಶ ಆಮೇಲೆ ಎಲ್ಲಾ ಅಂತ ಅಂದುಕೊಂಡು ದೇಶ ಕಾಯುತ್ತಾನೆ. ಅದೇ ಅವರು ನನ್ನ ಜೀವ ಅಥವಾ ಜೀವನ ಮೊದಲು ಅಂತ ಯೋಚಿಸಿದ್ದರೆ ನಾವು ಈ ರೀತಿಯ ಜೀವನ ನಡೆಸಲು ಸಾಧ್ಯವಿರುತ್ತಿರಲಿಲ್ಲ. ಸರ್ಕಾರ ಯೋಧರಿಗೆ ಎಲ್ಲಾ ಸೌಲಭ್ಯ ಕೊಡಬಹುದು ಆದರೆ ಅವರ ಸೇವೆಗೆ ಬೆಲೆಕಟ್ಟಲಾಗದು.


ಈಗಿನ ಕಾಲದಲ್ಲಿ ನಿನ್ನ ಇಷ್ಟವಾದ ನಾಯಕ ಅಥವಾ ನಾಯಕಿ ಯಾರೆಂದು ಕೇಳಿದಾಗ ಸಿನಿಮಾ ನಟರ ಹೆಸರನ್ನು ಹೇಳುತ್ತೇವೆ ಹೊರತು ಅದೇ ನಮ್ಮ ಜೀವವನ್ನು ಕಾಯುವ ಯೋಧರು ನನ್ನ ನಾಯಕ ಅಥವಾ ನಾಯಕಿ ಅಂತ ಯಾರೂ ಹೇಳುವುದಿಲ್ಲ. ನಮಗೆ ಮನೋರಂಜನೆ ಕೊಡುವ ಸಿನಿಮಾ ನಟರು ನಮ್ಮ ಜೀವನದ ನಾಯಕರು ಎಂದಾದರೆ ನಮಗೆ ಪ್ರಾಣಭಿಕ್ಷೆ ನೀಡಿರುವ ಯೋಧರು ನಮ್ಮ ಜೀವನದ ನಿಜವಾದ ನಾಯಕರು ಅಥವಾ ನಮ್ಮ ಸ್ಫೂರ್ತಿ ಯಾಕೆ ಆಗಬಾರದು? ಅವರ ಆ ಸಮವಸ್ತ್ರ ಧರಿಸಲೂ ಪುಣ್ಯಮಾಡಿರಬೇಕು ಆ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ. ಅವರು ಮರಣ ಹೊಂದಿದಾಗ ಗೌರವಾರ್ಪಣವಾಗಿ ನಮ್ಮ ರಾಷ್ಟ್ರಧ್ವಜವನ್ನು ಅವರ ದೇಹದ ಮೇಲೆ ಹೊದಿಸಿ ಗೌರವವನ್ನು ನೀಡುತ್ತಾರೆ. ನಮ್ಮ ಸೈನಿಕರು ನಮ್ಮ ಹೆಮ್ಮೆ.  



- ಲಾವಣ್ಯ, ನಾಗತೀರ್ಥ

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top