ಮಂಗಳೂರು: ಫಿಜಾ ಬೈ ನೆಕ್ಸಸ್ ಮಾಲ್‍ನಲ್ಲಿ ಗ್ರಾಹಕರಲ್ಲಿ ಕುತೂಹಲದ ಕಿಡಿ ಹೊತ್ತಿಸುವ ಉದ್ದೇಶದಿಂದ ಈ ತಿಂಗಳ 15 ರಿಂದ 17 ಹಾಗೂ ಮತ್ತು 22ರಿಂದ 23ರವರೆಗೆ "ವಿಜ್ಞಾನ ಉತ್ಸವ" ಅನ್ನು ಆಚರಿಸಲು ನಿರ್ಧರಿಸಿದೆ.
ವಿಜ್ಞಾನವನ್ನು ಅತ್ಯಾಕರ್ಷಕ, ವಿನೋದ ಮತ್ತು ಸ್ಮರಣೀಯವಾಗಿಸಲು, ವೈಜ್ಞಾನಿಕ ಅದ್ಭುತಗಳು, ಪ್ರಯೋಗಗಳು ಮತ್ತು ಆವಿಷ್ಕಾರಗಳ ಸಂಭ್ರಮಗಳ ವಿನ್ಯಾಸಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ವಿಜ್ಞಾನ ಉತ್ಸವದಲ್ಲಿ ವೀಕ್ಷಣೆ ಮಾತ್ರವಲ್ಲದೇ ಸಕ್ರಿಯ ಭಾಗವಹಿಸುವಿಕೆ, ಕಾರ್ಯಾಗಾರಗಳು ಮತ್ತು ವಿಜ್ಞಾನದ ಜಗತ್ತನ್ನು ಅನ್ವೇಷಿಸುವ ಅವಕಾಶವೂ ದೊರೆಯಲಿದೆ ಇದರ ಜತೆಗೆ ಮಾಲ್‍ನಲ್ಲಿರುವ ಮಳಿಗೆಯಲ್ಲಿ ಗ್ರಾಹಕರಿಗೆ ಜುಲೈ 31 ರವರೆಗೆ ಅತ್ಯಾಕರ್ಷಕ ವೋಚರ್‍ಗಳ ಕೊಡುಗೆಯೂ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ