ಫ್ಲಿಪ್‍ಕಾರ್ಟ್ ಸೇಲ್: ಫ್ಯಾಷನ್ ಉತ್ಪನ್ನಗಳಿಗೆ ಅಧಿಕ ಬೇಡಿಕೆ

Upayuktha
0

ಮಂಗಳೂರು: ಫ್ಲಿಪ್ ಕಾರ್ಟ್ ನ ಎಂಡ್ ಆಫ್ ಸೀಸನ್ ಸೇಲ್ ಜೂನ್ ಅಂತ್ಯಕ್ಕೆ ಮುಕ್ತಾಯಗೊಂಡಿದ್ದು, ಲಕ್ಷಾಂತರ ಭಾರತೀಯ ಗ್ರಾಹಕರು ಫ್ಯಾಶನ್ ಅನ್ನು ಹೆಚ್ಚು ಇಷ್ಟಪಟ್ಟಿದ್ದಾರೆಂಬುದು ಸಾಬೀತಾಗಿದೆ. ಭಾರತದ ದೇಶೀಯ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್‍ನಲ್ಲಿ ಅತ್ಯಧಿಕ ಸಂಖ್ಯೆಯ ಗ್ರಾಹಕರು ಫ್ಯಾಶನ್ ಬ್ರ್ಯಾಂಡ್‍ಗಳು ಮತ್ತು ಮಾರಾಟಗಾರರ ಲೇಬಲ್‌ಗಳ ಮೇಲೆ ಹೆಚ್ಚು ಗಮನ ನೀಡಿದ್ದಾರೆ.


ಸ್ಪೋಟ್ರ್ಸ್ ರನ್ನಿಂಗ್ ಶೂಗಳು, ಸೂಟ್ ಕೇಸ್, ಪುರುಷರ ಕ್ಯಾಶುವಲ್ ವೇರ್ ಮತ್ತು ಮಹಿಳೆಯರ ಎಥ್ನಿಕ್ ವೇರ್ ಖರೀದಿಯಲ್ಲಿ ಹೆಚ್ಚಳ ಕಂಡುಬಂದಿದೆ. ಇದಲ್ಲದೇ, ಪೂಮಾ, ಸಫಾರಿ, ಅಡಿಡಾಸ್, ನೈಕ್, ಕ್ರಾಕ್ಸ್‍ನಂತಹ ಪಾದರಕ್ಷೆ ಬ್ರ್ಯಾಂಡ್‌ಗಳನ್ನು ಖರೀದಿಸುವಲ್ಲಿ ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ವಿಶೇಷವಾಗಿ ಮಿಲೇನಿಯಲ್ಸ್ ಮತ್ತು ಜೆನ್ ಝೆಡ್ ಗ್ರಾಹಕರಿಗೆ ಫಿಟ್ನೆಸ್ ಪರಿಕರಗಳು ಆದ್ಯತೆಯ ಉತ್ಪನ್ನವಾಗಿದ್ದವು ಎಂದು ಫ್ಲಿಪ್ ಕಾರ್ಟ್ ಫ್ಯಾಶನ್ ನ ಹಿರಿಯ ನಿರ್ದೇಶಕ ಅಭಿಷೇಕ್ ಮಲೂ ಹೇಳಿದ್ದಾರೆ.


ಈ ಎಂಡ್ ಆಫ್ ಸೀಸನ್ ಸೇಲ್‌ನಲ್ಲಿ ದೇಶಾದ್ಯಂತ 2,00,000ಕ್ಕೂ ಮಾರಾಟಗಾರರು 10,000 ಕ್ಕೂ ಅಧಿಕ ಬ್ರ್ಯಾಂಡ್‌ಗಳ 10 ಲಕ್ಷಕ್ಕೂ ಹೆಚ್ಚು ಶೈಲಿಗಳ ಉತ್ಪನ್ನಗಳನ್ನು ಮಾರಾಟಕ್ಕೆ ಗ್ರಾಹಕರ ಮುಂದಿಟ್ಟಿದ್ದರು. ದೇಶಾದ್ಯಂತದ ಗ್ರಾಹಕರಲ್ಲಿ ಹೆಚ್ಚಿನವರು ಫ್ಯಾಶನ್ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಮೇಜ್ ಸರ್ಚ್, ವಿಡಿಯೋ ಕ್ಯಾಟಲಾಗ್, ವರ್ಚುವಲ್ ಟ್ರೈ-ಆನ್ಸ್, ವಿಡಿಯೋ ಕಾಮರ್ಸ್ ಮತ್ತು ನ್ಯಾವಿಗೇಟೆಡ್ ಎಕ್ಸ್‌ಪೀರಿಯನ್ಸ್‌ನಂತಹ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಬಳಸಿಕೊಂಡು ದೇಶದ ಗ್ರಾಹಕರು ತಮಗಿಷ್ಟವಾದ ಫ್ಯಾಶನ್ ಉತ್ಪನ್ನಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಕಳೆದ ತಿಂಗಳಿಗೆ ಹೋಲಿಸಿದರೆ ವಿಡಿಯೋ ಕಾಮರ್ಸ್ ಬಳಕೆ ಮಾಡಿದ ಗ್ರಾಹಕರ ಸಂಖ್ಯೆ ದ್ವಿಗುಣವಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
To Top