42ನೇ ಮಾನ್ಸೂನ್ ಚೆಸ್ ಟೂರ್ನಮೆಂಟ್: ಸಂತ ಅಲೋಶಿಯಸ್ ಕಾಲೇಜಿನ ಲಾರೆನ್ಸ್ ಪಿಂಟೋ ಪ್ರಥಮ

Upayuktha
0

ಪುತ್ತೂರು: ಚದುರಂಗ ಆಟವು ಒಂದು ಚತುರತೆಯ ಆಟ. ಇದು ಬುದ್ದಿಗೆ ಕೆಲಸ‌ ನೀಡುವ ಆಟವಾಗಿದ್ದು ನಿರಂತರವಾಗಿ ಅಭ್ಯಾಸಿಸಿದರೆ ಮಾತ್ರ ಉತ್ತಮ ಪರಿಣಾಮ ಕಾಣಬಹುದು. ಹಾಗಾಗಿ ವಿದ್ಯಾರ್ಥಿಗಳು ಚುರುಕಾಗಬೇಕಾದರೆ ಚೆಸ್ ಆಡಿದರೆ ಉತ್ತಮ ಎಂದು ದ.ಕ ಜಿಲ್ಲೆಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಕೋಟೆ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಾಲೇಜು ಕಲಾ ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜು ಹಾಗೂ ದೈಹಿಕ ಶಿಕ್ಷಣ ವಿಭಾಗ ಮತ್ತು  ಐಕ್ಯೂಎಸಿ ಸಹಯೋಗದಲ್ಲಿ ಅಂತರ್ ಕಾಲೇಜು ಹಾಗೂ ಅಂತರ್ ಜಿಲ್ಲಾ ಮಟ್ಟದ 42ನೇ ಮಾನ್ಸೂನ್ ಚೆಸ್ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದರು.


ವಿವೇಕಾನಂದ ಕಾಲೇಜು ಸಾಂಸ್ಕೃತಿಕ, ಕ್ರೀಡಾ,ಕಲಿಕಾ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುವ ಶಿಕ್ಷಣ ಸಂಸ್ಥೆಯಾಗಿದೆ.ಚದುರಂಗ ಆಟದಿಂದ ಆಟಗಾರರ ಜೀವನ ಶೈಲಿಯಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು ಅಲ್ಲದೇ ಚೆಸ್‌ನಿಂದಾಗಿ ಅಧ್ಯಯನ ಪ್ರವೃತಿ, ಸಂಶೋಧನಾ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)ದ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಅಭಿಪ್ರಾಯಪಟ್ಟರು.


ಈ ಚೆಸ್ ಪಂದ್ಯಾವಳಿಯಲ್ಲಿ ಒಟ್ಟು 43 ಸ್ಪರ್ಧಿಗಳು ಭಾಗವಹಿಸಿದ್ದರು.ಪಂದ್ಯಾವಳಿಯ ಆರ್ಬಿಟರ್ ಆಗಿ ಪ್ರವೀಣ್ ಕಾಮತ್ ಸಹಕರಿಸಿದರು.


ಸಮಾರೋಪ ಸಮಾರಂಭ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ ವಿಶ್ವೇಶ್ವರ ಭಟ್ ಮಾತನಾಡಿ, 

ಚದುರಂಗದ ಆಟವನ್ನು ಬಾಲ್ಯದಿಂದಲೇ ಅಭ್ಯಾಸ ಮಾಡಿದರೆ ಯಶಸ್ಸು ಗಳಿಸಲು ಸಾಧ್ಯ. ಹಾಗೆ ಪ್ರಸ್ತುತ ಕಾಲಘಟ್ಟದಲ್ಲಿ ಇದು ಕೇವಲ ಆಟವಾಗದೆ ಜೀವನ ಸಾಗಿಸಲು ಆರ್ಥಿಕ ನೆರವನ್ನು ನೀಡುತ್ತದೆ. ಚದುರಂಗದಂತಹ ಆಟಗಳು ಕೇವಲ ಕಾಲೇಜು ಮಟ್ಟಗಳಿಗೆ ಸೀಮಿತವಾಗದೆ ಮುಂದಿನ ಜೀವನದಲ್ಲೂ ಮುಂದುವರಿಸಿಕೊಂಡು ಹೋಗಬೇಕು. ಜೀವನದಲ್ಲಿ ಬರುವ ಒತ್ತಡದಂತಹ ಸಮಸ್ಯೆಗಳಿಗೆ ಚೆಸ್ ಆಟ ಪರಿಹಾರವಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕರಾದ ಮುರಳಿ ಕೃಷ್ಣ ಕೆಎನ್, ಇತಿಹಾಸ ವಿಭಾಗದ ಮುಖ್ಯಸ್ಥ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್, ಮುಖ್ಯ ತೀರ್ಪುಗಾರ ರಾಷ್ಟ್ರೀಯ ಕ್ರೀಡಾಪಟು ಪ್ರಶಾಂತ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು  ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಯತೀಶ್ ಸ್ವಾಗತಿಸಿ, ಡಾ. ಜ್ಯೋತಿ ಕುಮಾರಿ ನಿರ್ವಹಿಸಿದರು.‌


2 ದಿನಗಳ ಕಾಲ ನಡೆದ ಚದುರಂಗದ ಸ್ಪರ್ಧೆಯಲ್ಲಿ ಪ್ರಥಮ ‌ಬಹುಮಾನವನ್ನು ಜೋನ್ಸ್ ಲಾರೆನ್ಸ್ ಪಿಂಟೋ ಸೆಂಟ್ ಅಲೋಶಿಯಸ್ ಕಾಲೇಜು ಮಂಗಳೂರು, ದ್ವಿತೀಯ  ಬಹುಮಾನವನ್ನು ಕಿರಣ್ ಹೆಗ್ಡೆ ಡಾ. ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರ ಹಾಗೂ ತೃತೀಯ ಬಹುಮಾನವನ್ನು ದಿವ್ಯಾ.ಡಾ. ಬಿ.ಬಿ ಹೆಗ್ಡೆ‌ ಕಾಲೇಜು ಕುಂದಾಪುರ ಪಡೆದುಕೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top