ಎಸ್‌ಡಿಎಂ ಪಿಯು ಕಾಲೇಜು: ವೃತ್ತಿ ಜೀವನದ ಪ್ರಯಾಣ- ಮಾರ್ಗದರ್ಶನ ಕಾರ್ಯಕ್ರಮ

Upayuktha
0

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಸಹಯೋಗದಲ್ಲಿ ವೃತ್ತಿ ಜೀವನದ ಪ್ರಯಾಣ ಎನ್ನುವ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.


ಕಾಲೇಜಿನ ಹಿರಿಯ ವಿದ್ಯಾರ್ಥಿನಿ,  ಮಂಗಳೂರಿನ ಯೂನಿವರ್ಸಿಟಿ ಕನೆಕ್ಷನ್ ಸಂಸ್ಥೆಯ ಆಪ್ತ ಸಮಾಲೋಚಕಿ, ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟರ್ ಶ್ರದ್ಧಾ ಎಸ್ ನಾಯ್ಕ್ ಅವರು ವೃತ್ತಿ ಮಾರ್ಗದರ್ಶನ ನಡೆಸಿದರು.


ವಿವಿಧ ಕೋರ್ಸ್ ಗಳ ಮಾಹಿತಿ ಹಾಗೂ ವೃತ್ತಿಗಳ ಆಯ್ಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 


ಗ್ರಂಥಪಾಲಕ ಮನೋಹರ್ ಶೆಟ್ಟಿ ಅವರು ಶ್ರದ್ಧಾಳನ್ನು ಸನ್ಮಾನಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ  ಡಾ.ಪ್ರಸನ್ನ ಕುಮಾರ ಐತಾಳ್ ಅಭಿನಂದನಾ ನುಡಿಗನ್ನಾಡಿದರು. ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಸ್ಮರಣಿಕೆ ನೀಡಿ ಗೌರವಿಸಿದರು. ರಾ.ಸೇ ಯೋಜನೆಯ ನಾಯಕ ಸುದರ್ಶನ ನಾಯಕ್ ಉಪಸ್ಥಿತರಿದ್ದರು. 


ಸರಣ್ಯಾ ಸ್ವಾಗತಿಸಿ, ಪಲ್ಲವಿ ಪರಿಚಯಿಸಿದರು. ಪ್ರಥಮ್ ಜೈನ್ ನಿರೂಪಿಸಿ, ಚಾರಿತ್ರ್ಯ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top