ಹೆಬ್ರಿ: ಅಳಿವಿನಂಚಿನಲ್ಲಿರುವ ಶ್ರೀ ತಾಳೆ ಗಿಡಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ

Upayuktha
0


ಹೆಬ್ರಿ: ವನದೇವತೆ ಸಾಲುಮರದ ತಿಮ್ಮಕ್ಕ ಇತ್ತೀಚೆಗೆ ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ ಪ್ರೊ. ಕೃಷ್ಣಯ್ಯನವರು ಅವರಿಗೆ ನೀಡಿದ್ದ ವಿನಾಶದ ಅಂಚಿನಲ್ಲಿರುವ 112 'ಶ್ರೀತಾಳೆ' ಗಿಡಗಳನ್ನು- ಸಾಮಾಜಿಕ ಕಾರ್ಯಕರ್ತೆ ಡಾ. ಭಾರ್ಗವಿ ಐತಾಳರಿಗೆ ಉಡುಪಿ ಜಿಲ್ಲೆಯ ಹೆಬ್ರಿ ಸುತ್ತಮುತ್ತಲಿನ ಪರಿಸರದಲ್ಲಿ ನೆಡಲು ನಮ್ಮ ಮನೆ ನಮ್ಮ ಮರ ತಂಡದ ರವಿರಾಜ್ ಎಚ್.ಪಿ ಅವರು ಹಸ್ತಾಂತರಿಸಿದರು. 


ಈ 112 ಗಿಡಗಳನ್ನು ಪ್ರೊ. ಕೃಷ್ಣಯ್ಯ ಅವರು ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ 112 ವರ್ಷ ತುಂಬಿರುವ ಗೌರವದ ಸಂಕೇತವಾಗಿ ಉಡುಪಿಯಲ್ಲಿ 'ನಮ್ಮ ಮನೆ ನಮ್ಮ ಮರ ತಂಡ'ದ ಮೂಲಕ ನೀಡಿದ್ದರು. 


ವೃಕ್ಷಮಾತೆ ಈ ಗಿಡಗಳನ್ನು ತಮ್ಮ ಅಮೃತ ಹಸ್ತದಿಂದ ಮುಟ್ಟಿ ಉಡುಪಿ ಜಿಲ್ಲೆಯ ಪರಿಸರದಲ್ಲಿ ಬೆಳೆಸಲು ತಿಳಿಸಿದರು. ಇದೇ ಸಂದರ್ಭದಲ್ಲಿ ಹೆಬ್ರಿ ರಾಘವೇಂದ್ರ ನರ್ಸಿಂಗ್ ಹೋಮ್‌ನ ಮುಖ್ಯಸ್ಥರಾದ ಡಾ. ರಾಮಚಂದ್ರ ಐತಾಳ್, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top