ರಂಗಸಿರಿ- ಗ್ರಾಮ ಪರ್ಯಟನೆ: 6ನೇ ಕಾರ್ಯಕ್ರಮ ಇಂದು

Chandrashekhara Kulamarva
0



ಬದಿಯಡ್ಕ: ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಗ್ರಾಮ ಪರ್ಯಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ.


ಭಾನುವಾರ (ಜುಲೈ30) ಕುಂಟಿಕಾನದ ಎಎಸ್‌ಬಿ ಶಾಲೆಯಲ್ಲಿ ಈ ಸರಣಿಯ 6ನೇ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 9:30ರಿಂದ ಸಭಾ ಕಾರ್ಯಕ್ರಮ ಪ್ರಾರಂಭವಾಗಲಿದೆ.


ಹಿರಿಯ ಸಂಘಟಕ ವೆಂಕಟೇಶ್ವರ ಭಟ್ ಕುಂಟಿಕಾನ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಶಿಕ್ಷಕ ರಾಜೇಶ್ ಎಸ್. ಉಬ್ರಂಗಳ ಅವರು- 'ಕನ್ನಡ ಪ್ರಜ್ಞೆಯನ್ನು ಬೆಳೆಸುವುದು ಹೇಗೆ?' ಎಂಬ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಎಂ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟರಾಜ ವಿ ಅವರು ಶುಭಾಶಂಸನೆ ಮಾಡಲಿದ್ದಾರೆ. ರಂಗಸಿರಿಯ ಹಿರಿಯ ಪದಾಧಿಕಾರಿ ದಿನೇಶ್ ಬೊಳುಂಬು ಅಧ್ಯಕ್ಷತೆ ವಹಿಸಲಿದ್ದು, ಡಾ. ಶ್ರೀಶ ಕುಮಾರ ಪಿ. ಸ್ವಾಗತ ಮತ್ತು ವಿರಾಜ್ ಅಡೂರು ವಂದನಾರ್ಪಣೆಯನ್ನು ನಿರ್ವಹಿಸಲಿದ್ದಾರೆ.


ಇದೇ ಸಂದರ್ಭದಲ್ಲಿ ಆಟಿಯ ಪ್ರಯುಕ್ತ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದ್ದು, ನಿವೃತ್ತ ಶಿಕ್ಷರು ಹಾಗೂ ಸಾಹಿತಿ ಭಾಸ್ಕರ ಅಡ್ವಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.


ಶಿವಗಿರಿ ಸಾಹಿತ್ಯ ವೇದಿಕೆ ಅಡೂರು ಇವರು ನಡೆಸಿದ್ದ ಅಡೂರು ಕೊರತಿಮೂಲೆ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥ ಕನ್ನಡ ಕವನ ರಚನಾ ಸ್ಪರ್ಧೆಯ ಬಹುಮಾನ ವಿತರಣೆ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದು ರಂಗಸಿರಿ ಕಾರ್ಯದರ್ಶಿ ಡಾ. ಶ್ರೀಶ ಕುಮಾರ ಪಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


إرسال تعليق

0 تعليقات
إرسال تعليق (0)
To Top