ಧರ್ಮತ್ತಡ್ಕ: ಶಾಲಾಮಟ್ಟದ ಶಾಸ್ತ್ರೋತ್ಸವ

Chandrashekhara Kulamarva
0


ಧರ್ಮತ್ತಡ್ಕ: ಶ್ರೀ ದುರ್ಗಾ ಹೈಸ್ಕೂಲ್ ಧರ್ಮತ್ತಡ್ಕದ ಶಾಲಾ ಸಭಾಂಗಣದಲ್ಲಿ ಇಂದು (ಜು.29) ಪ್ರೌಢಶಾಲಾ ಮಟ್ಟದ ಶಾಸ್ತ್ರೋತ್ಸವ (ವಿಜ್ಞಾನೋತ್ಸವ) ನಡೆಯಿತು. ವ್ಯವಸ್ಥಾಪಕರಾದ ಶಂಕರನಾರಾಯಣ ಭಟ್, ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆ ನೆರವೇರಿಸಿದರು.


ಮುಖ್ಯೋಪಾಧ್ಯಾಯರಾದ ಗೋವಿಂದ ಭಟ್ ವಿಜ್ಞಾನೋತ್ಸವದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಿದರು. ಸ್ಟಾಫ್ ಸೆಕ್ರೆಟರಿ ರಾಮಕೃಷ್ಣ ಭಟ್ ಶುಭಹಾರೈಸಿದರು‌. ರಕ್ಷಿತ್ ಕುಮಾರ್ ಸ್ವಾಗತಿಸಿ ಸೂರ್ಯನಾರಾಯಣ ಭಟ್ ವಂದಿಸಿದರು‌. ಶಶಿಧರ ಕೆ ನಿರೂಪಿಸಿದರು‌. 


ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, IT, Work Experince ಮೇಳಗಳಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು‌.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
To Top