ಶ್ರೀರಾಮಾಯನಮ:
ಸಮೃದ್ಧ ರಾಜ್ಯದ ಸಮರ್ಥ ರಾಜನಾದ ದಶರಥನಿಗೆ ಮಕ್ಕಳಾಗಿರಲಿಲ್ಲ.ಇದರಿಂದಾಗಿ ಅವನು ತುಂಬಾ ಚಿಂತಿತನೂ ದು:ಖಿತನೂ ಆಗಿದ್ದನು.ಮಕ್ಕಳನ್ನು ಪಡೆಯಲು ದೇವರ ಅನುಗ್ರಹ ಪಡೆಯಬೇಕು.ಅದಕ್ಕಾಗಿ ಅಶ್ವಮೇಧ ಯಾಗವನ್ನು ಯಾಕೆ ಮಾಡಬಾರದು?ಎಂದು ಬಗೆದು ವಸಿಷ್ಠ ವಾಮದೇವರೇ ಮೊದಲಾದ ಗುರು ಪುರೋಹಿತರುಗಳನ್ನು ಕರೆದು ಸಲಹೆ ಕೇಳಿದನು.ಅವರು ಸಂತಸದಿಂದ ಒಪ್ಪಿಗೆ ಕೊಟ್ಟು ಶುಭ ಹಾರೈಸಿದರು.
ಸರಯೂ ನದಿಯ ಉತ್ತರ ತೀರದಲ್ಲಿ ಯಜ್ಞವೇದಿಕೆಯ ನಿರ್ಮಾಣವಾಯಿತು.ಗುರುಗಳು, ಮಂತ್ರಿಗಳು,ಜನನಾಯಕರು... ಹೀಗೆ ದೇಶಕ್ಕೆ ದೇಶವೇ ಯಜ್ಞದ ಯಶಸ್ಸಿಗೆ ಕೈಗೂಡಿಸಿತು.ದಶರಥನು ತನ್ನ ಮೂವರು ರಾಣಿಯರಾದ ಕೌಸಲ್ಯೆ ಸುಮಿತ್ರೆ ಕೈಕೇಯಿಯರೊಂದಿಗೆ ಯಜ್ಞದೀಕ್ಷೆಯನ್ನು ಕೈಗೊಂಡನು.ಅಂಗದೇಶದ ರಾಜನ ಅಳಿಯ ಋಷ್ಯಶೃಂಗ ತನ್ನ ಹೆಂಡತಿ ಶಾಂತಾಳೊಂದಿಗೆ ಬಂದು ಯಜ್ಞದ ನೇತೃತ್ವವನ್ನು ವಹಿಸಿದನು.ವಸಿಷ್ಠ ಮಹರ್ಷಿಗಳ ಮಾರ್ಗದರ್ಶನದಲ್ಲಿ ಅಶ್ವಮೇಧಯಾಗವು ಚೆನ್ನಾಗಿ ನಡೆಯಿತು.ಮಹಾನ್ ಋಷಿಗಳು,ದೇಶ ವಿದೇಶಗಳ ರಾಜರು, ಮಹಾಜನರು ಹೀಗೆ ಎಲ್ಲರೂ ಉಪಸ್ಥಿತರಿದ್ದರು.
ಸರ್ವ ಪಾಪಗಳನ್ನು ನಾಶ ಮಾಡುವ ಅಶ್ವಮೇಧಯಾಗವು ಮಂಗಳಕರವಾಗಿ ಮುಗಿದ ಬಳಿಕ ಋಷ್ಯಶೃಂಗ ಮಹರ್ಷಿಗಳು ದಶರಥನಿಂದ ಸಂತಾನ ಪ್ರಾಪ್ತಿಗಾಗಿ ಪುತ್ರ ಕಾಮೇಷ್ಟಿಯನ್ನು ಮಾಡಿಸಿದನು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ