ಪುತ್ತೂರು: ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭಾರತಿ ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ. ಆರ್ ಜಗದೀಶ್ ಮಾತನಾಡಿ, ಭಾರತ ವಿಶ್ವದಲ್ಲೇ ಗೌರವದ ಸ್ಥಾನದಲ್ಲಿ ಮೆರೆಯುತ್ತಿದೆ. ಒಂದು ಕಾಲದಲ್ಲಿ ನಮ್ಮದೇಶವನ್ನು ಬಡರಾಷ್ಟ್ರವೆಂದು ಕರೆಯುತ್ತಿದ್ದರು. ಭಾರತ ದೇಶ ಆರ್ಥಿಕ ಸಂಕಟದಲ್ಲಿತ್ತು. ಆದರೆ ಇಂದು ಭಾರತಆರ್ಥಿಕ ಸ್ಥಿತಿಯಲ್ಲಿ ಐದನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ವಿಶ್ವವನ್ನೇ ನಲುಗಿಸಿದ ಕೋವಿಡ್ ಸಮಯದಲ್ಲಿ ಭಾರತ ಇತರ ದೇಶಗಳಿಗೆ ವ್ಯಾಕ್ಸಿನ್ ಒದಗಿಸಿಕೊಟ್ಟಿದೆ. ಭಾರತೀಯ ಸಂಸ್ಕೃತಿ ವಿಶೇಷಯುತವಾದುದು. ಭಾರತ ವಿದ್ಯೆಯನ್ನು ಮಾರಾಟ ಮಾಡುತ್ತಿಲ್ಲ. ಇಂದಿಗೂ ಭಾರತತನ್ನ ಪರಂಪರೆಯನ್ನು ಮುಂದುವರೆಸುತ್ತಿದೆ. ದೇಶದ ಕೀರ್ತಿ ಪತಾಕೆಯನ್ನು ಭಾರತೀಯರು ಎಲ್ಲೆಡೆ ಹಾರಿಸುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಶಿಕ್ಷಣ ಇಂದಿನ ಕಾಲಘಟ್ಟದಲ್ಲಿ ಅತ್ಯಗತ್ಯವಾದುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆಎಂ ಕೃಷ್ಣ ಭಟ್ ಅಧ್ಯಕ್ಷೀಯ ನುಡಿಗಳನ್ನಾಡಿ, ಶಿಕ್ಷಕರ ವೃತ್ತಿ ಎನ್ನುವುದು ಶಿಕ್ಷಣಯಾನ ಇದ್ದಂತೆ. ರಾಷ್ಟ್ರ ಪ್ರೇಮದಂತಹ ಶಿಕ್ಷಣ ಶಾಲೆಗಳಲ್ಲಿ ಸಿಗುತ್ತದೆ. ಮಕ್ಕಳಲ್ಲಿ ಮೌಲ್ಯಯುತವಾದ ಶಿಕ್ಷಣವನ್ನು ದೊರಕಿಸಿಕೊಡುವವರು ಶಿಕ್ಷಕರು. ಆದ್ದರಿಂದ ಪರದೆಯನ್ನು ಸರಿಸುವಂತಹ ಕೆಲಸ ಶಿಕ್ಷಕರಿಂದಾಗಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ದೈವಿಕ ಶಕ್ತಿಯನ್ನು ತುಂಬುವವರಾಗಿದ್ದಾರೆ. ಅನೇಕ ಶಿಕ್ಷಕರು ನಿತ್ಯತಪಸ್ಸನ್ನು ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಉತ್ಸಾಹ ಹಾಗೂ ನಮ್ಮತನ ಇವೆರಡು ಗುಣಗಳು ಶಿಕ್ಷಕರಲ್ಲಿರಬೇಕು ಎಂದರು.
ವೇದಿಕೆಯಲ್ಲಿ ವಿದ್ಯಾಭಾರತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲಾಧಕ್ಷ ಲೋಕಯ್ಯ ಡಿ, ವಿದ್ಯಾಭಾರತಿ ಕರ್ನಾಟಕ ದಕ್ಷಿಣಕನ್ನಡಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ ಉಪಸ್ಥಿತರಿದ್ದರು. ವಿವೇಕಾನಂದ ಪದವಿ ಪೂರ್ವಕಾಲೇಜಿನ ಉಪನ್ಯಾಸಕಿ ಡಾ.ಶ್ರುತಿ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕಿ ಶರ್ಮಿಳ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ