ಮಾಂಡೋವಿ ಮೋಟರ್ಸ್‌ 'ಆಟಿದ ಕೂಟ': ಮಂಗಳೂರಿನಲ್ಲಿ ಸಂಭ್ರಮದ ಭಾನುವಾರ

Upayuktha
0

ಮಂಗಳೂರು: ನಗರದ ಹೆಸರಾಂತ ಮಾರುತಿ ಕಾರುಗಳ ಶೋರೂಂ ಮಾಂಡೋವಿ ಮೋಟರ್ಸ್ ಆವರಣದಲ್ಲಿ ಇಂದು (ಜು.23) ''ಆಟಿದ ಕೂಟ''ವನ್ನು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತ, ದಕ್ಷಿಣ ಕನ್ನಡ ಜಿಲ್ಲೆಯ ಸಂಪೂರ್ಣ ಸಂಸ್ಕೃತಿಯ ಬಗ್ಗೆ ವಿವರಿಸಿದರಲ್ಲದೆ ಆಟಿ ಕಳಂಜದ ಮಹತ್ವವನ್ನು ಅವರು ತಿಳಿಸಿದರು.


ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಜಾನಪದ ಶೈಲಿಯಲ್ಲಿ ಕುತ್ತಾರ್ ತಿಮ್ಮಕ್ಕ ಮತ್ತು ತಂಡದಿಂದ ಆಟಿ ಕಳಂಜ ನೃತ್ಯದ ಮೂಲಕ ಸ್ವಾಗತ ಕೋರಲಾಯಿತು. ಕ್ರೈಂ ಬ್ರಾಂಚ್‌ ಮತ್ತು ಟ್ರಾಫಿಕ್ ಡಿಸಿಪಿ ದಿನೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಕೈಜೋಡಿಸಿದ ಮಾಂಡೋವಿ ಮೋಟಾರ್ಸ್ ಅನ್ನು ಅಭಿನಂದಿಸಿದರು.


"ಸಂಗೀತ್ ಬಹರ್" ಮತ್ತು ತಂಡವು ಕರೋಕೆ ಹಾಡುಗಳನ್ನು ಪ್ರಸ್ತುತಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಮಂಗಳೂರಿನ 'ಯುವ ವಾಹಿನಿ' ತಂಡ  ವಿಶೇಷ ಉಪನ್ಯಾಸ ಹಾಗೂ ಭಜನೆ ಕಾರ್ಯಕ್ರಮ ನಡೆಸಿಕೊಟ್ಟಿತು. ಜೆಸಿಐ ಸಹಯೋಗದಲ್ಲಿ ಕೇಶವ ಅವರು ಬರೆದ ತುಳು ಪುಸ್ತಕ ಬಿಡುಗಡೆ ಮಾಡಲಾಯಿತು.


ಆಟಿದ ಕೂಟ ಸಂಜೆಯ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ  ಕೆ. ಗೋವಿಂದ ಭಟ್, ಪ್ರಭಾಕರ ಜೋಶಿ, ಜಬ್ಬಾರ್ ಸಮೋ ಮತ್ತು ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಇತರರು  ಯಕ್ಷಗಾನ ತಾಳಮದ್ದಳೆ "ಅಂಗದ ಸಂಧಾನ" ನಡೆಸಿಕೊಟ್ಟರು.


ಮಾಂಡೋವಿ ಮಾರುತಿ ಸುಜುಕಿಯಿಂದ ಮೊದಲ ಬಾರಿಗೆ ಆಯೋಜಿಸಲಾದ ಈ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಮಂಗಳೂರಿಗರು ಆನಂದಿಸಿದರು. ಶೋರೂಮ್‌ನಲ್ಲಿ ಮಾಡೆಲ್ ಕಾರ್‌ಗಳನ್ನು ಸಾರ್ವಜನಿಕರಿಗಾಗಿ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿಶೇಷ ಕೊಡುಗೆಯನ್ನು ನೀಡಲಾಯಿತು. ಎಲ್ಲಾ ಸಾರ್ವಜನಿಕರಿಗೆ ಉಚಿತ ಗಿಫ್ಟ್ ಕೂಪನ್‌ಗಳನ್ನು ವಿತರಿಸಲಾಯಿತು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top