'ರೀಸೆಂಟ್ ಡೆವಲ್ಪ್ಮೆಂಟ್ಸ್ ಇನ್ ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಆಫ್ ಬಯೋಇಂಪ್ಲಾಂಟ್ ಮೆಟೀರಿಯಲ್ಸ್ & ಪರ್ಫಾರ್ಮೆನ್ಸ್ & ಎಪ್ಲಿಕೇಶನ್ಸ್' ಕುರಿತು ಎಸ್.ಇ.ಆರ್.ಬಿ ಪ್ರಾಯೋಜಿತ 5 ದಿನಗಳ ಕಾರ್ಯಾಗಾರ
ನಿಟ್ಟೆ, ಉಡುಪಿ: ಜ್ಞಾನವೆಂಬುದು ನಮ್ಮನ್ನು ಉನ್ನತವಾಗಿಸುತ್ತದೆ. ಈ ಜ್ಞಾನಾರ್ಜನೆಗೆ ಕಾರಣರಾಗಿರುವ ನಮ್ಮ ಪ್ರಾಧ್ಯಾಪಕರನ್ನು ನಾವು ಎಂದಿಗೂ ಮರೆಯಬಾರದು ಎಂದು ಹೈದರಾಬಾದ್ ನ ಎಆರ್ ಸಿಐನ ನ್ಯಾನೊಮೆಟೀರಿಯಲ್ಸ್ ಕೇಂದ್ರದ ಮುಖ್ಯಸ್ಥ ಮತ್ತು ವಿಜ್ಞಾನಿ ಡಾ.ಆರ್.ವಿಜಯ್ ಅಭಿಪ್ರಾಯಪಟ್ಟರು.
ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ, ಎಸ್.ಇ.ಆರ್.ಬಿ., ನವದೆಹಲಿ ಇವರ ಪ್ರಾಯೋಜಕತ್ವದೊಂದಿಗೆ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ಆಗಿರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗವು 'ರೀಸೆಂಟ್ ಡೆವಲ್ಪ್ಮೆಂಟ್ಸ್ ಇನ್ ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಆಫ್ ಬಯೋಇಂಪ್ಲಾಂಟ್ ಮೆಟೀರಿಯಲ್ಸ್ & ಪರ್ಫಾರ್ಮೆನ್ಸ್ & ಎಪ್ಲಿಕೇಶನ್ಸ್' ಎಂಬ ವಿಷಯದ ಬಗೆಗೆ ಹಮ್ಮಿಕೊಂಡ ಐದು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 'ಭಾರತವು ತಂತ್ರಜ್ಞಾನದ ವಿಚಾರವಾಗಿ ಸ್ವಾವಲಂಬನೆಯ ಸಾಧನೆ ನಡೆಸುತ್ತಿರುವುದು ಬಹಳಷ್ಟು ಸಂತಸ ಕೊಡುತ್ತಿದೆ. ನವೀಕರಿಸಬಹುದಾದ ಶಕ್ತಿಯ ವಿಚಾರವಾಗಿ ಸಂಶೋಧನೆ ಇನ್ನೂ ಹೆಚ್ಚು ನಡೆಯಬೇಕು' ಎಂದರು.
ಗೌರವ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ವಿವಿ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಅವರು 'ಬೋಧನೆಯಲ್ಲಿ ಸಂಶೋಧನೆಯ ಪಾತ್ರದ ಬಗೆಗೆ ನಾವು ಹೆಚ್ಚು ಚಿಂತಿಸಬೇಕು. ನಿರಂತರ ಕಲಿಕೆ ಪ್ರತಿಯೋರ್ವ ಮಾನವನ ಬದುಕಿನಲ್ಲಿ ಪ್ರಮುಖ ಅಂಶ' ಎಂದರು.
ನಿಟ್ಟೆ ವಿವಿ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಿಟ್ಟೆ (ಡಿಯು) ವಿಶ್ವವಿದ್ಯಾಲಯದ ಮುಂದಿನ ಯೋಜನೆಗಳ ಬಗೆಗೆ ವಿವರಿಸಿದರು.
ಸಂಶೋಧಕರು, ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಈ ಕಾರ್ಯಾಗಾರದಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ವಿವಿಧ ಸಂಸ್ಥೆಗಳು ಮತ್ತು ಸಂಸ್ಥೆಗಳಿಂದ ಸುಮಾರು 40 ಮಂದಿ ಭಾಗವಹಿಸಿದ್ದರು.
ಬಯೋಇಂಪ್ಲಾಂಟ್ ಮೆಟೀರಿಯಲ್ ಗಳ ಸಂಯೋಜಿತ ಉತ್ಪಾದನೆಯಲ್ಲಿ ಇತ್ತೀಚಿನ ಬೆಳವಣಿಗೆಗಳು ಮತ್ತು ಅದರ ಕಾರ್ಯಕ್ಷಮತೆ ಮತ್ತು ಅನ್ವಯಗಳ ಕುರಿತ ಕಾರ್ಯಾಗಾರವನ್ನು ರೂಪಿಸಲಾಗಿತ್ತು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಅವರ ಮಾರ್ಗದರ್ಶನದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಪೈ ಪಿ, ಸಂಚಾಲಕರಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಸೋಸಿಯೇಟ್ ಪ್ರೊಫೆಸರ್ ಡಾ.ವಿಜೀಶ್ ವಿ ಮತ್ತು ಸಂಯೋಜಕರಾಗಿ ಶ್ರೀ ವಿಕಾಸ್ ಮರಕಿಣಿ ಅವರು ಕಾರ್ಯಾಗಾರದ ಯಶಸ್ವಿಗೆ ಕಾರ್ಯನಿರ್ವಹಿಸಿದರು.
ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ.ಶ್ರೀನಿವಾಸರಾವ್ ಬಿ.ಆರ್ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಪೈ ಪಿ ಕಾರ್ಯಾಗಾರದ ಬಗ್ಗೆ ವಿವರಿಸಿದರು. ಕಾರ್ಯಾಗಾರದ ಸಂಚಾಲಕ ಡಾ.ವಿಜೀಶ್ ವಂದಿಸಿದರು. ಸಹಪ್ರಾಧ್ಯಾಪಕಿ ಡಾ.ರಶ್ಮೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ