ನಿಟ್ಟೆ: ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಯ ಆಫ್ ಕ್ಯಾಂಪಸ್ ಸೆಂಟರ್ ಆಗಿರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗವಾದ ಅಭ್ಯುದಯ್ ಮತ್ತು ವಿಫ್ಲಿ ಇಂಡಿಯಾ ಎಲ್ಎಲ್ ಪಿ ಪ್ರಾಯೋಜಿಸಿರುವ 'ನಮ್ಮ ಹದಿಹರೆಯದವರನ್ನು ಅರ್ಥೈಸಿಕೊಳ್ಳುವುದು, ಆತ್ಮಹತ್ಯೆ ತಡೆಗಟ್ಟುವಿಕೆ ಮತ್ತು ಚಿಕಿತ್ಸಕ ಸಮಾಲೋಚನೆಯ ಪರಿಚಯ' ಎಂಬ ವಿಷಯಗಳ ಮೇಲಿನ ನಾಲ್ಕು ದಿನಗಳ ಕಾರ್ಯಾಗಾರವನ್ನು ಆಯೋಜಿಸಿದೆ. ಉನ್ನತ ಶಿಕ್ಷಣದಲ್ಲಿ ಶಿಕ್ಷಕರು ಮತ್ತು ಆಡಳಿತಗಾರರಿಗೆ ಇರುವ ಕೆಲವಾರು ಸವಾಲುಗಳನ್ನು ಉತ್ತರಿಸುವ ನಿಟ್ಟಿನಲ್ಲಿ ಜುಲೈ 18 ರಿಂದ 21 ರವರೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಈ ಕಾರ್ಯಾಗಾರವನ್ನು ಹತ್ತನೇ ಆವೃತ್ತಿಯಾಗಿ ನಡೆಸಲಾಗುತ್ತಿದೆ.
4 ದಿನಗಳ ಕಾರ್ಯಾಗಾರವು ವಿವಿಧ ವಿಷಯಗಳ ಮೇಲೆ ಕೇಂದ್ರಿಕರಿಸಲ್ಪಟ್ಟಿದ್ದು: 1ನೇ ದಿನದಂದು ಆತ್ಮಹತ್ಯೆ ತಡೆಗಟ್ಟುವಿಕೆ; 2 ನೇ ದಿನದಂದು ವೃತ್ತಿಪರ ಕಾಲೇಜುಗಳಲ್ಲಿ ಹದಿಹರೆಯದ ಸಮಸ್ಯೆಗಳು ಮತ್ತು ಮಾನಸಿಕ ಅಸ್ವಸ್ಥತೆಗಳನ್ನು ಗುರುತಿಸುವುದು; 3ನೇ ದಿನದಂದು ವಿದ್ಯಾರ್ಥಿಗಳ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಒತ್ತಡವನ್ನು ನಿಭಾಯಿಸುವುದು ಮತ್ತು 4ನೇ ದಿನದಂದು ಮೆದುಳಿನ ಆರೋಗ್ಯ ಮತ್ತು ಸಮಾಲೋಚನೆ ನೈತಿಕತೆ ಮತ್ತು ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವುದರ ಬಗೆಗೆ ಚರ್ಚಿಸಲಾಗುವುದು. ಈ ಕಾರ್ಯಾಗಾರದ ಸಂದರ್ಭದಲ್ಲಿ ನೈಜ ಕೇಸ್ ಸ್ಟಡೀಸ್, ಪ್ರಾತ್ಯಕ್ಷಿಕೆಗಳು, ಕಿರುಚಿತ್ರಗಳು, ಚರ್ಚೆಗಳು, ಪಾತ್ರಾಭಿನಯಗಳು ಮತ್ತು ಅಭ್ಯಾಸ ಅವಧಿಗಳನ್ನು ಬಳಸಿಕೊಳ್ಳಲಾಗುವುದು.
ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಎನ್ಎಂಎಎಂಐಟಿಯ ಅಭ್ಯುದಯ ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದ ಮಾಜಿ ಮುಖ್ಯಸ್ಥೆ ಪ್ರೊ. ಶಾಲಿನಿ ಕೆ ಶರ್ಮಾ ಅವರು ಎಲ್ಲಾ ನಾಲ್ಕು ದಿನಗಳ ಕಾಲವೂ ಮುಖ್ಯ ಅತಿಥಿಯಾಗಿ, ಮುಖ್ಯ ಭಾಷಣಕಾರರಾಗಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಸಮಾಲೋಚಕ ಮನೋವೈದ್ಯ ಮತ್ತು ನಿರ್ದೇಶಕ ಡಾ.ಪಿ.ವಿ. ಭಂಡಾರಿ, ಮಂಗಳೂರಿನ ಮನಶಾಂತಿ ಸಮಾಲೋಚನಾ ಕೇಂದ್ರದ ನಿರ್ದೇಶಕಿ ಮತ್ತು ಮಾನಸಿಕ ಆರೋಗ್ಯ ತಜ್ಞೆ ಡಾ. ರಮೀಳಾ ಶೇಖರ್ ಭಾಗವಹಿಸಲಿದ್ದಾರೆ. ಈ ಕಾರ್ಯಾಗಾರದಲ್ಲಿ ರಾಜ್ಯದ ಪ್ರತಿಷ್ಠಿತ 12 ವಿದ್ಯಾಸಂಸ್ಥೆಗಳಿಂದ ಶಿಕ್ಷಕರು ಮತ್ತು ಆಡಳಿತಗಾರರು ಭಾಗವಹಿಸಲಿರುವರು. ಹೆಚ್ಚಿನ ಮಾಹಿತಿ ಮತ್ತು ಕಾರ್ಯಕ್ರಮದ ವೇಳಾಪಟ್ಟಿಗಾಗಿ placement.nmamit@nitte.edu.in ನ್ನು ಇಮೇಲ್ ಮೂಲಕ ಅಥವಾ 08258-281240 ಗೆ ಕರೆ ಮಾಡುವ ಮೂಲಕ ಸಂಪರ್ಕಿಸಬಹುದಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ