ಪಾಣಾಜೆ: ಸುಬೋಧ ಪ್ರೌಢಶಾಲೆಯಲ್ಲಿ ಹೆತ್ತವರ/ಪೋಷಕರ ಸಭೆ ಜು.15ರಂದು ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ಜರುಗಿತು. 2023-2024ನೇ ಸಾಲಿನ ರಕ್ಷಕ ಶಿಕ್ಷಕ ಸಂಘ, ಹಾಗೂ ಇತರ ಸಮಿತಿಗಳನ್ನು ರಚಿಸಲಾಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಭಾಸ್ಕರ ಪೂಜಾರಿ ನಡುಕಟ್ಟ, ಉಪಾಧ್ಯಕ್ಷರಾಗಿ ಜಯಶ್ರೀ ದೇವಸ್ಯ ಹಾಗೂ ಕಾರ್ಯದರ್ಶಿಯಾಗಿ ಲಲಿತ ಸೂರಂಬೈಲು ಆಯ್ಕೆಯಾದರು. ಸದಸ್ಯರುಗಳಾಗಿ ಮಣಿಕಂಠ ಕಟ್ಟ, ಜಯಶ್ರೀ ತೂoಬಡ್ಕ, ಹೇಮಾವತಿ ಭರಣ್ಯ, ಶಶಿಕಲ ಪಿದಾರ, ಸುಂದರಿ ಪಾರ್ಪಳ, ಭವಾನಿ ತೂoಬಡ್ಕ, ಅಬ್ದುಲ್ ಕುಂಞಿ ಪರಾರಿ ಹಾಗೂ ಶಶಿಧರ ಪಾಲ್ತಮೂಲೆ ಆಯ್ಕೆಯಾದರು.
ತಾಯಂದಿರ ಸಮಿತಿ: ಸುಶೀಲ ಗುವೇಲುಗದ್ದೆ, ಮಮತಾ ತೂoಬಡ್ಕ, ಗೀತಾ ಭರಣ್ಯ, ಸುಜಾತ ಜೋಗಿ ಮೂಲೆ, ಪುಷ್ಪ ಮಲ್ಲತಡ್ಕ, ಆನಂದಿ ಗುಡ್ಡೆಮನೆ, ಪುಷ್ಪರಾಣಿ ಪರಾರಿ.
ಮಕ್ಕಳ ಸುರಕ್ಷಾ ಸಮಿತಿ: ಭಾಸ್ಕರ ಜೋಗಿ ಮೂಲೆ, ಶ್ರೀಧರ ಮಣಿಯಾಣಿ ದೇವಸ್ಯ, ವಸಂತಿ ಗೋಳಿಪದವು, ಶಶಿಕಲಾ ಬೊಳ್ಳುಕಲ್ಲು, ಆನಂದ ಭರಣ್ಯ, ಲಲಿತ ಗುಡ್ಡೆ, ಅಮೀನಾ ಅರ್ಲಪದವು.
ನೂತನವಾಗಿ ಆಯ್ಕೆಯಾದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಭಾಸ್ಕರ ಪೂಜಾರಿ ಅವರನ್ನು ಹೂಗುಚ್ಛ ನೀಡಿ ಸಂಚಾಲಕರು ಅಭಿನಂದಿಸಿದರು.
ಮುಖ್ಯ ಶಿಕ್ಷಕ ಶ್ರೀಪತಿ ಭಟ್ ಐ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. 10ನೇ ತರಗತಿ ವಿದ್ಯಾರ್ಥಿನಿಯರಾದ ದೀಪಿಕಾ, ಚೈತನ್ಯ ಜಿ, ಗ್ರೀಷ್ಮಾ ಎ. ಪ್ರಾರ್ಥಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಎಸ್ ಪಿ ಅವರು ವಂದಿಸಿದರು. ಸಹಶಿಕ್ಷಕಿ ನಿರ್ಮಲ ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಶಿಕ್ಷಕರು ಹಾಜರಿದ್ದು ಸಹಕರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ